ಬೆಂಗಳೂರು: ಸದನ ಶುರುವಾದಾಗಿನಿಂದ ಮಾತಿನ ಸಮರ ಜೋರಾಗಿದೆ. ಇಂದು ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ನಾಯಕ ಯತ್ನಾಳ್ ನಡುವೆ ಮಾತಿನ ಚಕಮಕಿ ನಡೆದಿದೆ. ವರ್ಗಾವಣೆಯಲ್ಲಿ ವ್ಯಾಪಾರವಾಗಿದೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಚೇರ್ ನಲ್ಲಿ ಕೂತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮೇಲೆದ್ದು, ಸುಮ್ನೆ ಕೂತ್ಕೊಳಯ್ಯ. ಸಿಎಂ ಹುದ್ದೆಗೆ 2,500 ಕೋಟಿ. ಮಂತ್ರಿ ಹುದ್ದೆನು ಸಾವಿರ ಕೋಟಿ ಅಂತ ಹೇಳಿದವರು ನೀವು. ಕೂತ್ಕೊಳಯ್ಯ ಕಂಡಿದ್ದೀನಿ ಅಂತ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
https://youtu.be/pPquPBeMGy8
ಏನೇನು ಮಾತನಾಡಿದ್ದೀರಿ, ಏನೇನು ಕಥೆ ಎನ್ನುವುದು ಹಿಸ್ಟರಿ ನಮ್ಮತ್ರ ಇದೆ. ಅರ್ಥ ಆಯಿತಾ. ಆವಾಗ ನಿಮ್ಮ ಸಿಎಂ ಸುಮ್ಮನಿದ್ದರೆಂದು ನಾವೂ ಸುಮ್ಮನಿರುವುದಕ್ಕೆ ತಯಾರಿಲ್ಲ. ನಿನ್ ಮಾತಿನ ಮೇಲೆ, ನಾಲಿಗೆ ಮೇಲೆ ಹಿಡಿತವಿರಬೇಕು. ಅವತ್ತು ಅವರು ಸುಮ್ಮನಿದ್ದರು. ನನ್ನಂತವನಾಗಿದ್ದರೆ ಅವತ್ತೆ 24 ಗಂಟೆಯಲ್ಲಿ ಪಾರ್ಟಿಯಿಂದ ಡಿಸ್ಮಿಸ್ ಮಾಡುತ್ತಿದ್ದೆ. ನಿಮ್ಮಂತವರಿಂದಾನೇ ಇವತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವುದು ಎಂದು ಯತ್ನಾಳ್ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.