Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಎಷ್ಟೇ ಕುತಂತ್ರ ಮಾಡಿ ಆಸೆ ಅಮಿಷಗಳನ್ನು ಒಡ್ಡಿದರೂ ಮತದಾರರು ನನ್ನನ್ನು ಕೈ ಬಿಡುವುದಿಲ್ಲ : ವೈ.ಎ.ನಾರಾಯಣಸ್ವಾಮಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 30 : ಕಳೆದ ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಶಿಕ್ಷಕರಿಗಾಗಿ ಮಾಡಿದ ಹೋರಾಟಗಳು, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು, ಕಾರ್ಯಾದೇಶಗಳು, ಪರಿಹಾರಗಳು ನನ್ನ ಈ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ, ಇವು ನನ್ನನ್ನು ಕೈ ಹಿಡಿಯಲಿವೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಎನ್. ಡಿ.ಎ ಮೈತ್ರಿ ಕೂಟದ ಅಭ್ಯರ್ಥಿ ವ್ಯೆ.ಎ.ನಾರಾಯಣಸ್ವಾಮಿ ತಿಳಿಸಿದರು.

ಜೂ.3 ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದ ಬಾಲಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ಮೂರು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಶಿಕ್ಷಕರ ಪರವಾಗಿ ಹಲವಾರು ಕೆಲಸವನ್ನು ಮಾಡಿದ್ದೇನೆ, ಇವರ ಪರವಾಗಿ ಸದನದ ಒಳಗೂ ಹೊರಗೂ ಹೋರಾಟವನ್ನು ಮಾಡಿದ್ದೇನೆ.

ಕಳೆದ ಮೂರು ಬಾರಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ ಆದರೆ ಈ ಬಾರಿ ನಾನು ಬಿಜೆಪಿ ಜೆಡಿಎಸ್‍ನ ಮೃತ್ರಿ ಕೂಟದ ಅಭ್ಯರ್ತಿಯಾಗಿದ್ದೇನೆ. ಈ ಹಿನ್ನಲೆಯಲ್ಲಿ ನಮ್ಮ ಬಲ ಹೆಚ್ಚಾಗಿದೆ. ನನ್ನ ಪರವಾದ ಒಲವು ಹೆಚ್ಚಾಗಿದೆ. ಈ ಬಾರಿ ಶಿಕ್ಷಕರು ಮತ್ತು ಉಪನ್ಯಾಸಕರ ಬಂಧುಗಳು ನನ್ನನ್ನು ಗೆಲ್ಲಿಸಲು ಮುಂದಾಗಿದ್ದರು.‌ ಸಹಾ ಮತದಾರರು ನನ್ನ ಪರವಾಗಿ ಇದ್ದಾರೆ ಕಾಂಗ್ರೆಸ್ ರವರು ಎಷ್ಟೇ ಕುತಂತ್ರಗಳನ್ನು ಮಾಡಿ ಆಸೆ ಅಮಿಷಗಳನ್ನು ಒಡ್ಡಿದರೂ ಸಹಾ ಮತದಾರರು ನನ್ನ ಕೈ ಬಿಡುವುದಿಲ್ಲ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸರ್ಕಾರ ಬಂದು ಒಂದು ವರ್ಷವಾಯಿತು, ಚುನಾವಣೆಯ ಸಮುಯದಲ್ಲಿ ತಮ್ಮ ಪ್ರನಾಳಿಕೆಯಲ್ಲಿ ಹೇಳಲಾಗಿತ್ತು ನಮ್ಮ ಸರ್ಕಾರ ಬಂದರೆ ಎನ್.ಪಿ.ಎಸ್. ತೆಗೆದು ಹಾಕಿ ಓಪಿಎಸ್‍ನ್ನು  ತರುತ್ತೇವೆ ಎಂದು ಹೇಳಲಾಗಿತ್ತು ಜೊತೆಗೆ 7ನೇ ವೇತನ ಆಯೋಗವನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಲಾಗಿತ್ತು ಆದರೆ ಸರ್ಕಾರ ಬಂದು ಒಂದು ವರ್ಷವಾದರೂ ಸಹಾ ಇದರ ಬಗ್ಗೆ ಯಾವ ಮಾತನ್ನು ಸರ್ಕಾರ ಆಡುತ್ತಿಲ್ಲ, ಸಭೆಯನ್ನು ಸಹಾ ಮಾಡಿಲ್ಲ ಇದರ ಬಗ್ಗೆ ಸುಪ್ರೀಂ ನ್ಯಾಯಾಲಯದ ಸೂಚನೆಯಂತೆ ಮಾಡಲಾಗಿದೆ ಆದರೂ ತಮ್ಮ ಪ್ರನಾಳಿಕೆಯಂತೆ ಏನನ್ನು ಸಹಾ ಮಾಡಿಲ್ಲ, ಬಿಜೆಪಿ ಸರ್ಕಾರ ಇದ್ದಾಗ ಸರ್ಕಾರಿ ನೌಕರರಿಗೆ ಶೇ.17ರಷ್ಟು ಮಧ್ಯಾಂತರ ಪರಿಹಾರವನ್ನು ನೀಡಲಾಗಿತ್ತು ಬಿಟ್ಟರೆ 7 ನೇ ವೇತನ ಜಾರಿಯ ಮಾತನ್ನು ಸರ್ಕಾರ ಆಡಿಲ್ಲ, ಇದರ ಬಗ್ಗೆ ಸರ್ಕಾರ ಸಭೆಯನ್ನು ಮಾಡಿ ಇದರ ಬಗ್ಗೆ ವಿಧಾನ ಸಭೆಯಲ್ಲಿ ಹೋರಾಟವನ್ನು ಮಾಡಿದಾಗ ಸರ್ಕಾರ ಇದರ ಬಗ್ಗೆ ಭರವಸೆಯನ್ನು ನೀಡಿದ್ದಾರೆ ಈ ಹಿನ್ನಲೆಯಲ್ಲಿ ಶಿಕ್ಷಕ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದ ಮೇಲೆ ಭರವಸೆ ಉಳಿದಿಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿಗಳು ನಮ್ಮ ಮೇಲೆ ಆರೋಪವನ್ನು ಮಾಡುತ್ತಿದ್ದಾರೆ, 18 ವರ್ಷ ಸದಸ್ಯರಾಗಿ ಏನು ಮಾಡಿಲ್ಲ ಎಂದು ನನ್ನ 18 ವರ್ಷದ ಸಾಧನೆಗಳ ಬಗ್ಗೆ ಪತ್ರಿಕೆಯನ್ನು ಹೂರ ತಂದಿದ್ದೆನೆ ಅದನ್ನು ಅವರು ಓದಿಕೊಂಡು ಮುಂದಿನ ಸಾರಿ ಮಾತನಾಡುವಾಗ ಎಚ್ಚರದಿಂದ ಮಾತನಾಡಲಿ ಎಂದು ಟಾಂಗ್ ನೀಡಿದ ನಾರಾಯಣಸ್ವಾಮಿ, ಸರ್ಕಾರ ಇದೆ ಎಂದು ಗಾಳಿಯಲ್ಲಿ ಗುಂಡು ಹಾರಿಸು ಕಾರ್ಯವನ್ನು ಮಾಡಬೇಡಿ ಅಧಿಕಾರಿಗಳನ್ನು ಬೆದರಿಸಿ ಶಿಕ್ಷಕರ ಮೇಲೆ ಒತ್ತಡವನ್ನು ತಂದು ಮತವನ್ನು ಹಾಕಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಇದು ಖಂಡನೀಯ ಇದರ ಬಗ್ಗೆ ನನಗೆ ಮಾಹಿತಿ ಈ ರೀತಿ ಮಾಡಿದರೆ ಸರಿಯಾಗಿರುವುದಿಲ್ಲ ಮತದಾರರಿಗೆ ಮುಕ್ತವಾದ ಆವಕಾಶವನ್ನು ನೀಡಬೇಕು ಅವರು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಲ್ಲಿ ಎಂದು ಕಿವಿ ಮಾತು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಗಳು ಸರ್ಕಾರದ ಅಧಿಕಾರಿಗಳನ್ನು ಒಳಕೆ ಮಾಡಿಕೊಂಡು ನಮ್ಮ ಪರವಾದ ಶಿಕ್ಷಕರನ್ನು ಹೆದರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇದು ಸರಿಯಲ್ಲ ಈ ರೀತಿಯಾದ ಬೆದರಿಕೆಗೆ ಬಗ್ಗುವುದಿಲ್ಲ, ಮತದಾರರನ್ನು ಮನವಿ ಮಾಡೋಣ ಒಳ್ಳೆಯ ರೀತಿಯಲ್ಲಿ ಚುನಾವಣೆಯನ್ನು ಮಾಡೋಣ 18 ವರ್ಷ ನಿಮ್ಮ ಕೆಲಸವನ್ನು ಮಾಡಿದ್ದೆನೆ ಈಗ ಕೂಲಿಯನ್ನು ಕೊಡಿ ಎಂದು ಕೇಳುತ್ತಿದ್ದೆನೆ ಉತ್ತಮ ರೀತಿಯಲ್ಲಿ ಚುನಾವಣೆಯನ್ನು ಮಾಡೊಣ ಎಂದು ಮತದಾರರಲ್ಲಿ ಮನವಿ ಮಾಡಿದರು.

ಎಂದು ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಮಾತನಾಡಿ, ವೈ.ಎ.ನಾರಾಯಣಸ್ವಾಮಿಯವರು ಕಳೆದ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದನದ ಒಳಗೂ ಮತ್ತು ಹೊರಗೂ ಸಹಾ ಹೋರಾಟವನ್ನು ಮಾಡಿದ್ದಾರೆ, ಈ ಬಾರಿ ಅವರನ್ನು ಗೆಲ್ಲಿಸಿದರೆ ಸದನದಲ್ಲಿ ಹಿರಿಯ ಸದಸ್ಯರಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಶ್ರಮವಹಿಸುತ್ತಾರೆ ಎಂದು ಭರವಸೆಯನ್ನು ನೀಡಿದ್ದಾರೆ.

ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ನಾರಾಯಣಸ್ವಾಮಿಯವರು ಶಿಕ್ಷಕರ ಬಗ್ಗೆ ಅದರಲ್ಲೂ ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಬಗೆಗ ಆಪಾರವಾದ ಕಾಳಜಿಯನ್ನು ಇಟ್ಟುಕೊಂಡು ಅವರ ಪರವಾಗಿ ಕೆಲಸವನ್ನು ಮಾಡಿದ್ದಾರೆ. ಇದರೊಂದಿಗೆ ಖಾಸಗಿ ಶಾಲೆಗಳ ಸಮಸ್ಯೆಯ ಬಗ್ಗೆ ಅರಿವು ಇದ್ದು ಅವುಗಳನ್ನು ಸರ್ಕಾರದೊಂದಿಗೆ  ಚರ್ಚೆ ನಡೆಸಿ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ ನಾರಾಯಣಸ್ವಾಮಿಯವರು ವಿಧಾನಪರಿಷತ್‍ನಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ. ಮುಂದೆಯೂ ಸಹಾ ಮಾಡಲಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಹೊರಟ್ಟಿದೆ ಆದರೆ ರಾಜ್ಯ ಸರ್ಕಾರ ಇದಕ್ಕೆ ವಿರುದ್ದವಾಗಿ ರಾಜ್ಯ ಪಾಲಿಸಿಯನ್ನು ಜಾರಿ ಮಾಡಲು ಹೊರಟ್ಟಿದೆ ಆದರೆ ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲವಾಗಿದೆ. ಇದರ ಬಗ್ಗೆ ವಿಚಾರ ಮಾಡಿದರೂ ಸಹಾ ಸರ್ಕಾರದಿಂದ ಯಾವುದೇ ಉತ್ತರ ಇಲ್ಲವಾಗಿದೆ. ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡುವುದರ ಮೂಲಕ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ನೀವುಗಳು ಅವರನ್ನು ಆಯ್ಕೆ ಮಾಡಿದೆ ನಿಮಗೆ ಶಕ್ತಿ ಬರಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಷಹಾಪುರ್, ನಗರಸಭಾ ಸದಸ್ಯರಾದ ಹರೀಶ್ ಕೃಷ್ಣಮೂರ್ತಿ, ಪರಶುರಾಮ್, ಶೀಲ, ಬಿಜೆಪಿ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಜಯ್ಯಣ್ಣ, ನವೀನ್ ಚಾಲುಕ್ಯ, ತಿಪ್ಪೇಸ್ವಾಮಿ, ರಂಗಣ್ಣ, ಬಾಷಾ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

ಶಾಸಕ ಮುನಿರತ್ನ ವಿರುದ್ಧ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿ : ಎಸ್.ಜಯಣ್ಣ ಮನವಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಗುತ್ತಿಗೆದಾರನನ್ನು ಮನೆಗೆ ಕರೆಸಿಕೊಂಡು ಲಂಚಕ್ಕೆ ಬೇಡಿಕೆಯಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬೆಂಗಳೂರು ರಾಜರಾಜೇಶ್ವರಿ

error: Content is protected !!