ಮತದಾರರು ಪ್ರಾಮಾಣಿಕವಾಗಿ ಮತದಾನದ ಹಕ್ಕನ್ನು ಚಲಾಯಿಸಿ : ಜಿ.ಎಸ್.ಸುರೇಶ್

suddionenews
1 Min Read

ಚಿತ್ರದುರ್ಗ, (ಏ.10) : ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶ್ರೀಮಂತ, ಬಡವ ಎಂಬ ಯಾವುದೇ ತಾರತಮ್ಯವಿಲ್ಲ ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನಮ್ಮ ಪ್ರಜಾಪ್ರಭುತ್ವ ಕಲ್ಪಿಸಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಜಿ.ಎಸ್.ಸುರೇಶ್ ಹೇಳಿದರು.

ಹೊಳಲ್ಕೆರೆ ಪಟ್ಟಣದ ಕಸಬಾ ಹೋಬಳಿ ವ್ಯಾಪ್ತಿಯ ಸಿಹಿನೀರಕಟ್ಟೆ ಗ್ರಾಮದಲ್ಲಿ ವಿಧಾನಸಭಾ ಚುನಾವಣೆ-2023 ರ ಹಿನ್ನಲೆಯಲ್ಲಿ ಮತದಾನ ಜಾಗೃತಿ ಮೂಡಿಸಿದ ಫ್ಲೈಯಿಂಗ್ ಸ್ಕ್ವಾಡ್ ಜಿ.ಎಸ್.ಸುರೇಶ್ ಮಾತನಾಡಿದರು.

ರಾಜಕೀಯಕ್ಕೂ ನಮಗೂ ನಮಗೂ ಸಂಬಂಧವಿಲ್ಲ ಎಂದು ಯಾರು ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಉತ್ತಮ ಸರ್ಕಾರದ ನಿರ್ಮಾಣದಲ್ಲಿ ಪ್ರಜೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಪ್ಪದೇ ತಪ್ಪದೇ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸುವಲ್ಲಿ ಯಾರು ಹಿಂದೆ ಸರಿಯಬಾರದು. ಮತದಾನ ಎಲ್ಲೆಡೆ ಶೇ 100 ರಷ್ಟಾಗಬೇಕೆಂದು ಚುನಾವಣಾ ಆಯೋಗ ಇಂದು ಅತ್ಯಂತ ಶಿಸ್ತುಬದ್ಧವಾಗಿ ಚುನಾವಣೆ ನಡೆಸುತ್ತಿದೆ.

ಮತದಾರರು ಪ್ರಾಮಾಣಿಕವಾಗಿ ಮತಚಲಾಯಿಸಿ,ಇದು ನಿಮ್ಮ ಹಕ್ಕು ಎಂದು ಮತದಾನ ಜಾಗೃತಿಯನ್ನು ಮೂಡಿಸಿದರು.

ಹಾಗು Cvigil app ಕುರಿತು ಮಾಹಿತಿ ನೀಡಿದರು. ಚುನಾವಣೆ ಕುರಿತು ಯಾವುದೇ ಅಕ್ರಮಗಳ ಕುರಿತು ದೂರು ನೀಡಲು ಸಾಧ್ಯ ಹಣಹಂಚಿಕೆ,ಮತಕ್ಕಾಗಿ ಉಡುಗೊರೆ ಸೇರಿದಂತೆ ಇತರ ನೆರವು ನೀಡುವಿಕೆ ನಿಯಮ ಉಲ್ಲಂಘಿಸಿ ಪ್ರಚಾರ,ಬೆದರಿಕೆ,ನಿಯಮ ಉಲ್ಲಂಘಿಸಿದ ಭಾಷಣ ಸೇರಿದಂತೆ ಯಾವುದೇ ಅಕ್ರಮದ ಚಟುವಟಿಕೆ ಚುನಾವಣೆ ಆಕ್ರಮ ಕುರಿತು CVIGIL App ಮೂಲಕ ದೂರು ಸಲ್ಲಿಸಿದ 100 ನಿಮಿಷಗಳಲ್ಲಿ ಪರಿಶೀಲಿಸಿ ಪ್ರಾಥಮಿಕ ತನಿಖೆ ನಡೆಸಲು ಸ್ಥಳಕ್ಕೆ ಅಧಿಕಾರಿಗಳು ಬರುವವರು CVIGIL app ನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದೆಂದು ಗ್ರಾಮಸ್ಥರಿಗೆ ಮತದಾನ ಮಹತ್ವದ ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಸ್ಥಳದಲ್ಲಿ ಸಿಹಿನೀರು ಕಟ್ಟೆ ಗ್ರಾಮಸ್ಥರು ಹಾಗೂ ಪೋಲಿಸ್ ರಂಗಸ್ವಾಮಿ ಹೆಚ್.ಸಿ. ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *