ಸ್ಥಳೀಯ ಅಭ್ಯರ್ಥಿಗೆ ಮತ ನೀಡಿ ಕ್ಷೇತ್ರದ ಘನತೆ ಕಾಪಾಡಿ : ಹೆಚ್ ಮಹೇಶ್

1 Min Read

ಹಿರಿಯೂರು, (ಏ.28) : ನಮ್ಮೂರಲ್ಲಿ ನಮ್ಮವರನ್ನ ಇಟ್ಟುಕೊಂಡು ಬೇರೆಯವರ ದಾಸರಾಗಬಾರದು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಳೀಯ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್. ಮಹೇಶ್ ಹೇಳಿದರು.

ತಾಲೂಕಿನ ವಾಣಿವಿಲಾಸಪುರ ಗ್ರಾಮ, ಕಣಿವೆ ಮಾರಮ್ಮ ಜಾತ್ರೆ ಮತ್ತು ಇನ್ನಿತರ ಭಾಗಗಳಲ್ಲಿ ಮತಪ್ರಚಾರ ನೆಡೆಸಿ, ಅಲ್ಲಿನ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಒಬ್ಬ ವ್ಯಕ್ತಿಗೆ ಒಂದೇ ಒಂದು ಮತ ಇದೆ. ಆ ಒಂದು ಮತವನ್ನು ನೀಡಲು ಯಾಕೆ ಇಷ್ಟೊಂದು ಯೋಚನೆ ಯಾಕೆ  ಮಾಡುತ್ತೀರಾ ನನಗೆ ಅರ್ಥವಾಗುತ್ತಿಲ್ಲ, ದಯಮಾಡಿ
ಹಿರಿಯೂರು ಕ್ಷೇತ್ರವನ್ನ ಆಳ್ವಿಕೆ ಚಳ್ಳಕೆರೆ, ಶಿರಾ ಹಾಗೂ ಬೆಂಗಳೂರು ಭಾಗದಿಂದ ದಂಡೆತ್ತಿ ಬಂದಿದ್ದಾರೆ. ಅವರಿಂದ ಯಾವುದೇ ಹಿಮ್ಮೆಟ್ಟಿಸುವ ಮೂಲಕ ಈ ಮಣ್ಣಿನ ಗೌರವ ಹಾಗೂ ಸ್ವಾಭಿಮಾನಕ್ಕಾಗಿ ಸ್ಥಳೀಯ ಅಭ್ಯರ್ಥಿಗೆ ಒಂದೇ ಒಂದು ಬಾರಿ ಅವಕಾಶ ಕಲ್ಪಿಸುವ ಮೂಲಕ ಈ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿ ಎಂದರು.

ಒಂದು ದಿನದ ಆಸೆ ಆಮಿಷಗಳಿಗೆ ಒಳಗಾಗಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ನಮ್ಮ ತನವನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಶ್ರಮಿಸೋಣ.

ನನಗೆ ಭರವಸೆ ಇದೆ. ಈ ಕ್ಷೇತ್ರದ ಮತದಾರರು ನನ್ನನ್ನು ಕೈ ಹಿಡಿದು ವಿಧಾನಸೌಧಕ್ಕೆ ಕಳಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶರೀಫ್ ಸಾಬ್, ತಿಪ್ಪೇಸ್ವಾಮಿ, ಶಿವರುದ್ರಪ್ಪ, ಸಂತೋಷ್ ಹಾಗೂ ಕೆಆರ್ಪಿಪಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *