ಬಿಜೆಪಿಗೆ ಮತ ನೀಡಿ : ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚಿತ್ರಣವನ್ನೇ  ಬದಲಿಸುತ್ತಾರೆ : ಜಿ.ಎಸ್ ಅನಿತ್ ಕುಮಾರ್

1 Min Read

 

ಚಿತ್ರದುರ್ಗ, (ಮೇ.07) : ಪ್ರಧಾನಿ ನರೇಂದ್ರ ಮೋದಿಯವರು 2047ಕ್ಕೆ ಹೊತ್ತಿಗೆ ದೇಶದ ಚಿತ್ರಣವನ್ನೇ  ಬದಲಿಸುತ್ತಾರೆ ಎಂದು ಬಿಜೆಪಿ ಯುವ ಮುಖಂಡ  ಜಿ.ಎಸ್ ಅನಿತ್ ಕುಮಾರ್ ಹೇಳಿದರು.

ಅವರು ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಬಿಜಿಪಿ ವತಿಯಿಂದ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶ ಕಂಡ ಅಪರೂಪದ ವ್ಯಕ್ತಿ ನರೇಂದ್ರ ಮೋದಿ. ದೇಶದಲ್ಲಿ ಕಳೆದ ಎರಡು ವರ್ಷದಲ್ಲಿ ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬ ಬಡವರಿಗೂ ಕೊರೊನ ವ್ಯಾಕ್ಸಿನ್ಕೂ ಕೊಟ್ಟು ಸಹಾಯ ಮಾಡಿದರು ದೇಶವನ್ನು ಉಳಿಸಿಕೊಟ್ಟಂತಹ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ.

ಕೇವಲ ಆರು ತಿಂಗಳಲ್ಲಿ ಕೊರೊನಾ ವಾಕ್ಸಿನ್ ಕಂಡುಹಿಡಿದಿ 150 ದೇಶಗಳಿಗೆ ಕಳಿಸಿದರು. 250 ಕೋಟಿ ಜನಸಂಖ್ಯೆಗೆ ವ್ಯಾಕ್ಸಿಂಗ್ ನೀಡಿದರು. ಬೇರೆ ದೇಶಗಳು ಡಿಸೆಂಬರ್ 20ನೇ ತಾರೀಕು ಕಂಡುಹಿಡಿದಿದ್ದಾರೆ ನಮ್ಮ ದೇಶ ಜನವರಿ 20ರಂದು ವ್ಯಾಕ್ಸಿನ್ ಕಂಡುಹಿಡಿದರು.

ಒಂದು ತಿಂಗಳ ವ್ಯತ್ಯಾಸ ಅಷ್ಟೇ. ಆರು ವರ್ಷದಲ್ಲಿ ಮಾಡಬೇಕಾದ ಕೆಲಸ ಆರು ತಿಂಗಳಲ್ಲಿ ಮಾಡಿರುವುದು ತುಂಬಾ ಸಾಧನೆ. ನಾವು ಬೇರೆ ದೇಶಗಳ ಹೋಲಿಸಿದರೆ ನಮ್ಮ ದೇಶವು ಮುಂಚೂಣಿಯಲ್ಲಿದೆ.ನಮ್ಮ ದೇಶದ ಪ್ರಧಾನಿಗಳು ಸೈಂಟಿಸ್ಟ್ ಗಳಿಗೆ ಕೊಟ್ಟ ಸಹಕಾರ ಕಂಡು ವ್ಯಾಕ್ಸಿನ್ ಕಂಡುಹಿಡಿಯಲು ಸುಲಭವಾಯಿತು.ದಯಮಾಡಿ ತಾವುಗಳು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿಜಿ ಅರುಣ್ ಕುಮಾರ್, ಬಿಜೆಪಿ ಮುಖಂಡ ಟಿ.ಜಿ. ಮಲ್ಲಿಕಾರ್ಜುನ್,  ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾವ್ಯ, ಉಪಾಧ್ಯಕ್ಷ ಶರತ್ ಪಟೇಲ್,  ಸದಸ್ಯ ಟಿ.ಜಿ. ಅಶೋಕ್, ರಮೇಶ್,  ಪಾರ್ವತಮ್ಮ,  ಹಾಗೂ ಬಿಜೆಪಿಯ ಮುಖಂಡ ಜಿ.ಎಸ್. ಸಿದ್ದೇಶ್,  ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸುರೇಶ್,  ಸೇವಾಲಾಲ್ ಸಂಘದ ಸದಸ್ಯರುಗಳು ಮಹಿಳೆಯರು ಮತಯಾಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *