ರಷ್ಯಾ ಅಧ್ಯಕ್ಷನ ಸಾವಿನ ಬಗ್ಗೆ ಭವಿಷ್ಯ ನುಡಿದ ಉಕ್ರೇ‌ನ್ ಅಧ್ಯಕ್ಷ..!

 

ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಈಗಲೂ ತನ್ನ ಯುದ್ಧವನ್ನು ನಿಲ್ಲಿಸಿಲ್ಲ. ಉಕ್ರೇನ್ ಕೂಡ ತನ್ನ ಶಕ್ತಿ ಮೀರಿ ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿದೆ. ಯುದ್ಧ ಶುರುವಾಗಿ ಇತ್ತಿಚೆಗೆ ಒಂದು ವರ್ಷವಾಗಿದೆ. ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಪುಟಿನ್ ಬಗ್ಗೆ ಮಾತನಾಡಿದ ಝೆಲೆನ್ಸ್ಕಿ, ವ್ಲಾಡಿಮರ್ ಒಂದು ದಿನ ತನ್ನ ಆಪ್ತ ವಲಯದಿಂದಾನೇ ಸಾವನ್ನಪ್ಪುತ್ತಾರೆ ಎಂದಿದ್ದಾರೆ. ಝೆಲೆನ್ಸ್ಕಿ ಅವರ ಈ ಮಾತು ಉಕ್ರೇನ್ ನ ಇಯರ್ ಎಂಬ ಸಾಕ್ಷ್ಯ ಚಿತ್ರದಲ್ಲಿ ಕೇಳಿ ಬಂದಿದೆ. ರಷ್ಯಾ ಯುದ್ಧ ಸಾರಿ ವರ್ಷವಾದ ಹಿನ್ನೆಲೆ ಈ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಅವರ ಆಪ್ತ ವಲಯದವರೇ ಅಧ್ಯಕ್ಷನ ವಿರುದ್ಧ ಕೆಲಸ ಮಾಡಲು ಪ್ರೇರೆಪಿಸಲಿದೆ. ರಷ್ಯಾ ಅಧ್ಯಕ್ಷ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಪರಭಕ್ಷಕಗಳು ಪರಭಕ್ತನನ್ನು ತಿನ್ನುತ್ತವೆ. ಕೊಲೆಗಾರ‌ನನ್ನು ಕೊಲ್ಲಲು ಅವರು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಇದು ಖಂಡಿತಾ ನಡೆಯುತ್ತದೆ. ಆದರೆ ಯಾವಾಗ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *