ಸುದ್ದಿಒನ್, ಹಿರಿಯೂರು, ಮಾರ್ಚ್. 06 : ನಗರದ ತಾಲೂಕು ಕಛೇರಿ ಮುಂಭಾಗದಲ್ಲಿ ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ವಿವಿ ಸಾಗರದಿಂದ ನೀರು ಹರಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಸುತ್ತಿರುವ ಆಮರಣಾoತರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಭೇಟಿ ನೀಡಿ ಧರಣಿ ನಿಲ್ಲಿಸಲು ರೈತರಿಗೆ ಮನವಿ ಮಾಡಿದರು. ಆದರೆ ರೈತರು ಸಣ್ಣ ನೀರಾವರಿ ಇಲಾಖೆ ಸಚಿವರು ಬರುವವರೆಗೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು
ಈಗಾಗಲೇ ಮೊನ್ನೆ ನಡೆದಂತಹ ನಿರ್ದೇಶಕರ ಮಂಡಳಿ ಸಭೆಯಲ್ಲಿ ನಮಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸ್ಪಷ್ಟವಾದ ಸೂಚನೆ ನೀಡಿದ್ದಾರೆ. ಈಗಾಗಲೇ 17 ವರ್ಷದಿಂದ ನೆನೆಗುದಿಗೆ ಬಿದ್ದಿರುವ 17.04 ಟಿಎಂಸಿ ತುಂಗಾದಿಂದ ಭದ್ರಾ ಕಡೆಗೆ ನೀರು ಹರಿಸಿದಾಗ ಮಾತ್ರ ಚಿತ್ರದುರ್ಗದ ಕಡೆಗೆ ನೀರು ಬರಲು ಸಾಧ್ಯವಾಗುತ್ತದೆ.ಜೂನ್ ತಿಂಗಳ ಹೊತ್ತಿಗೆ ಕಾಮಗಾರಿ ಮುಗಿಸಿ ನಿಮ್ಮ ಸಮ್ಮುಖದಲ್ಲಿಯೇ ಉದ್ಘಾಟನೆ ಮಾಡಲಾಗುವುದು. ಭದ್ರಾದಿಂದ ವೈ ಜಂಕ್ಷನ್ ನಲ್ಲಿ ನಡೆಯುತ್ತಿರುವ ಕಾಮಗಾರಿ ಮುಗಿದಿದ್ದು ಪ್ರತಿವರ್ಷ ಎರಡು ಟಿಎಂಸಿ ನೀರು ವಿವಿ ಸಾಗರಕ್ಕೆ ಬಿಡುತ್ತಾ ಇದ್ದೆವು. ಈ ಬಾರಿ ಹೆಚ್ಚಿನ ನೀರು ಬಂದಿದೆ. ವೈ ಜಂಕ್ಷನ್ ನಿoದ ಚಿತ್ರದುರ್ಗ ಬ್ರಾಂಚ್ ಕೆನಾಲ್ ನ 134 ಕಿಲೋಮೀಟರ್ ನಲ್ಲಿ ನಮಗೆ ಅಬ್ಬಿನಹೊಳಲು ಬಳಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.ಕಳೆದ ವರ್ಷದ ಮಾರ್ಚ್ ನಲ್ಲಿ ಉಪಮುಖ್ಯಮಂತ್ರಿಗಳು ಭೇಟಿ ನೀಡಿ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ. ಈಗಾಗಲೇ 11 ನೇ ತಾರೀಕು ಸಮಯ ಫಿಕ್ಸ್ ಆಗಿದೆ. ಈಗಾಗಲೇ ನೋಟಿಸ್ ಸಹ ಜಾರಿ ಮಾಡಲಾಗಿದೆ. ರೈತರಿಗೆ ಆಶ್ವಾಸನೆ ಕೊಟ್ಟಂತೆ ಆ ಸಮಸ್ಯೆಯನ್ನು ಉಪಮುಖ್ಯಮಂತ್ರಿಗಳು ಬಗೆಹರಿಸಲಿದ್ದಾರೆ.

16 ಕಿಲೋಮೀಟರ್ ನಲ್ಲಿ 250 ಮೀಟರ್ ಬಿಟ್ಟರೆ ಉಳಿದ ಕಡೆ ಕಾಮಗಾರಿ ಮುಗಿದಿದೆ. ಜುಲೈನಲ್ಲಿ ಕಾಮಗಾರಿ ಮುಗಿಸಲು ನಿರ್ದೇಶನ ನೀಡಲಾಗಿದೆ.ಗೋನೂರು ಬಳಿ ಸ್ವಲ್ಪ ಸಮಸ್ಯೆ ಇದೆ.ಅದನ್ನು ಸಹ ಶೀಘ್ರ ಬಗೆಹರಿಸಲಾಗುವುದು. 2025 ಅಕ್ಟೋಬರ್ ತಿಂಗಳಲ್ಲಿ ನೀರು ಕೊಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾನು ಧರಣಿ ಸ್ಥಳಕ್ಕೆ ಇಂದು ಒಬ್ಬ ಜವಾಬ್ದಾರಿಯುತ ಸರ್ಕಾರದ ಪ್ರತಿನಿಧಿಯಾಗಿ ಭೇಟಿ ನೀಡಿದ್ದೇನೆ. ಬೆಳಿಗ್ಗೆ 11 ಗಂಟೆಗೆ ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೂರವಾಣಿ ಮೂಲಕ ಕರೆ ಮಾಡಿ ಡಿಸಿಯವರು ಬರುತ್ತಾರೆ ರೈತರ ಧರಣಿ ಸ್ಥಳಕ್ಕೆ ಹೋಗಿ ಸರ್ಕಾರದ ಮಟ್ಟದಲ್ಲಿ ನಡೆದಿರುವ ಬೆಳವಣಿಗೆಗಳನ್ನು ತಿಳಿಸಿ ರೈತರ ಮನವೊಲಿಸಿ ಧರಣಿ ಹಿಂಪಡೆಯುವಂತೆ ತಿಳಿಸಿದ್ದಾರೆ. ಸಚಿವರು ನಿಮ್ಮ ಜೊತೆ ಇದ್ದಾರೆ ಎಂಬ ಸಂದೇಶ ನೀಡಿದ್ದಾರೆ.ಸೊಲ್ಲಾಪುರ ಚಿನ್ನಾಪುರ ಅಲ್ಲಿ ನಮಗೆ ಭೂಸ್ವಾಧೀನ ಪಡಿಸಿಕೊಳ್ಳಲು ಹಣ ಜಾಸ್ತಿ ಕೊಡಬೇಕೆಂದು 2018 ರಲ್ಲಿ ಟೆಂಡರ್ ಆಗಿ ವರ್ಕ್ ಆರ್ಡರ್ ಆದರೂ ಸಹ ಜಾಗ ಬಿಟ್ಟಿಲ್ಲ.11 ನೇ ತಾರೀಕು ಆ ಸಮಸ್ಯೆ ಬಗೆಹರಿಸಿ ಕಡೂರು ನಿಂದ 84 ಕಿಮೀ ಇರುವ ಹೊಸದುರ್ಗದ ಎಳಗೊಂದಲ್ಲಿ ಕುರುಬರಹಳ್ಳಿ ಅಣ್ಣಿಗೆರೆ ಸೇರಿದಂತೆ ನಾಲ್ಕು ಗ್ರಾಮಗಳಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು ಹೆಚ್ಚು ದರ ನೀಡಲು ಹೇಳಿದ್ದಾರೆ. ಚಿತ್ರದುರ್ಗ ಬ್ರಾಂಚ್ ಕೆನಾಲ್ ಗೆ ಹೋಲಿಸಿದರೆ ತುಮಕೂರು ಬ್ರಾಂಚ್ ಗೆ ನೀರು 2027 ರಲ್ಲಿ ಬರುತ್ತದೆ.ಹಿರಿಯೂರು ತಾಲೂಕಿಗೆ ಮೂರು ವರ್ಷದಲ್ಲಿ ಎರಡು ಲಕ್ಷ ಎಕರೆಗೆ ಮೈಕ್ರೋ ಇರಿಗೇಶನ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಈಗಾಗಲೇ ಎರಡು ಸಭೆಗಳ ನಡೆಸಲಾಗಿದೆ.ನನ್ನನ್ನು ಒಳಗೊಂಡಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಾಧಕ ಬಾಧಕಗಳ ಮೀಟಿಂಗ್ ಆಗಿದೆ. ಸಣ್ಣ ನೀರಾವರಿ ಸಚಿವರ ಜೊತೆ ಒಂದು ಹಂತದ ಸಭೆಯಾಗಿದೆ. ಈಗ ನೀವು ಧರಣಿ ಮಾಡುತ್ತಿರುವುದು 16 ಪ್ಲಸ್ 6 ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ 6 ಕೆರೆಗಳಿಗೆ ನೀರು ತುಂಬಿಸಲು ಒಂದು ತಿಂಗಳ ಒಳಗೆ ಟೆಂಡರ್ ಕರೆಯಲಾಗುತ್ತದೆ. ಉಳಿದ 16 ಕೆರೆಗಳಲ್ಲಿ ಎಂಟು ಕೆರೆಗಳಿಗೆ ಕಾಮಗಾರಿ ನಡೆಯುತ್ತಿದೆ. ಗಾಯತ್ರಿ ಡ್ಯಾಮ್ ಸೇರಿದಂತೆ ಉಳಿದ ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಎರಡು ಸಭೆ ನಡೆದಿದೆ.
ದಯವಿಟ್ಟು ಧರಣಿ ಕೈ ಬಿಟ್ಟು ಸಹಕರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಸಣ್ಣ ನೀರಾವರಿ ಸಚಿವರ ಜೊತೆಗೆ ರೈತರ ಸಮಸ್ಯೆ ಬಗ್ಗೆ ಒಂದು ಸಭೆ ಮಾಡಬೇಕು ಅಂತ ಹೇಳಿ ರಿಕ್ವೆಸ್ಟ್ ಮಾಡ್ತೀನಿ. ಆದ್ದರಿಂದ ಧರಣಿ ಕೈಬಿಟ್ಟು ನಮ್ಮ ಜೊತೆ ಸಹಕರಿಸಿ ಎಂದರು. ಆದರೆ ರೈತರು ಸಣ್ಣ ನೀರಾವರಿ ಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ವಿಶ್ವೇಶ್ವರಯ್ಯ ಜಲ ನಿಗಮ ಚಿಪ್ ಇಂಜಿನಿಯರ್ ಲಮಾಣಿ, ತಹಶೀಲ್ದಾರ್ ರಾಜೇಶ್ ಕುಮಾರ್, ಡಿವೈಎಸ್ ಪಿ ಶಿವಕುಮಾರ್, ಸಿಪಿಐ ರಾಘವೇಂದ್ರ ಕಾಂಡಿಕೆ,ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ಎಇಇ ಚಂದ್ರಯ್ಯ,ಸಹಾಯಕ ಇಂಜಿನಿಯರ್ ಜಯಕುಮಾರ್, ಜಿಪಂ ಮಾಜಿ ಸದಸ್ಯ ಪಾಪಣ್ಣ, ಮುಖಂಡರಾದ ಕಸವನಹಳ್ಳಿ ರಮೇಶ್, ಆಲೂರು ಸಿದ್ದರಾಮಣ್ಣ, ಶಿವಣ್ಣ, ದಿಂಡಾವರ ಚಂದ್ರಗಿರಿ, ರಾಜಪ್ಪ ಮುಂತಾದವರು ಉಪಸ್ಥಿತರಿದ್ದರು.

