ಬೆಂಗಳೂರು: ಮಾಜಿ ಶಾಸಕ ಎಸ್ ಆರ್ ವಿಶ್ವನಾಥ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಂಧಿಯಾಗಿದ್ದ ನಿರೀಕ್ಷಣಾ ಜಾಮೀನಿನ ಮೇಲೆ ಹೊರ ಬಂದಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಈ ಕೇಸ್ ನ್ನ ಸಿಸಿಬಿ ಅವರಿಗಾದ್ರೂ ಕೊಡ್ಲಿ, ಸಬಿಐ ಅವರಾದ್ರೂ ತನಿಖೆ ನಡೆಸಲಿ. ಹೆದರೋಕೆ ನಾನು ಯಾವ ತಪ್ಪು ಮಾಡಿಲ್ಲ ಎಂದಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ನಾನು ಬೆಂಗಳೂರಿಗೆ ಬಂದಾಗ ದೇವರಾಜ್ ನನ್ನನ್ನು ಕರೆಸಿಕೊಂಡಿದ್ದ. ಆತನೊಂದಿಗೆ ಸೆಂಥಿಲ್ ಕೂಡ ಇದ್ದ. ಅಲ್ಲಿಗೆ ಸಿಸಿಬಿ ಅವರನ್ನ ಅವರೇ ಕರೆಸಿಕೊಂಡಿದ್ದರು ಎಂದು ಹೇಳಲಾಗ್ತಿದೆ. ನನ್ನ ಜೊತೆ ಮಂಜು ಸೇರಿ ಹಲವರು ಇದ್ರು. ನಮ್ನನ್ನ ವಿಚಾರಣೆ ಮಾಡಿ ಬಿಟ್ಟಿದ್ದಾರೆ.
ಇದಕ್ಕೆಲ್ಲಾ ಮೂಲ ಕಾರಣ ಸತೀಶ್ ಎಂಬ ವ್ಯಕ್ತಿ. ಒಬ್ಬ ಪೊಲೀಸ್ ಅಧಿಕಾರಿ ಟ್ರಾನ್ಸಫರ್ ಆಗಬೇಕು ಅಂದ್ರು ಸತೀಶ್ ಎಂಬಾತನ ಅನುಮತಿ ಬೇಕು. ಸತೀಶ್ ಹಾಗೂ ಶಾಸಕರ ಕಾಲ್ ಲೀಸ್ಟ್ ತೆಗೆದ್ರೆ ಎಲ್ಲಾ ಗೊತ್ತಾಗುತ್ತೆ. ಇವತ್ತು ನನಗೆ ಬೇಲ್ ಸಿಕ್ಕಿದೆ. ಮೂರು ಜನ ಸೇರಿ ನನ್ನನ್ನ ಟ್ರ್ಯಾಪ್ ಮಾಡಿದ್ದಾರೆ. ನನ್ನ ಹೆಂಡ್ತಿ, ಮಕ್ಕಳು ಮೂರು ದಿನದಿಂದ ಊಟ ಮಾಡಿಲ್ಲ. ನನ್ನ ತೇಜೋವಧೆ ಮಾಡಲಾಗ್ತಿದೆ. ದೇವರ ಮುಂದೆ ಪ್ರಮಾಣ ಮಾಡಲಿ. ಎಲ್ಲಾ ಕಾಂಗ್ರೆಸ್ ಮುಖಂಡರು ನನ್ನ ಸಪೋರ್ಟಗೆ ಇದ್ದಾರೆ ಎಂದಿದ್ದಾರೆ.