ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ಮಾಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಶ್ವ ಹಿಂದೂ ಪರಿಷದ್ ಒತ್ತಾಯ

2 Min Read

ಸುದ್ದಿಒನ್, ಚಿತ್ರದುರ್ಗ, (ಜೂ.26) : ಯಾವುದೇ  ಕಾರಣಕ್ಕೂ ನಾವು ದೇವರೆಂದು ಪೂಜಿಸುವ ಗೋವಂಶಕ್ಕೆ ಯಾವುದೇ ರೀತಿಯ ಬಲಿ/ ಕುರ್ಬಾನಿ/ ಹತ್ಯೆ/ಹಿಂಸೆ ಆದರೆ ಹಿಂದೂ ಸಮಾಜ ಸಹಿಸುವುದಿಲ್ಲ.

ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ತಾವುಗಳು ಕ್ರಮ ಕೈಗೊಳ್ಳಬೇಕು. ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಯನ್ನು ಕಾನೂನಾತ್ಮಕವಾಗಿ ತಡೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಪರುಶುರಾಮ ಅವರಿಗೆ ವಿಶ್ವ ಹಿಂದೂ ಪರಿಷದ್ ಚಿತ್ರದುರ್ಗ ಘಟಕದ ಕಾರ್ಯಕರ್ತರು ಮನವಿ ಮಾಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭೇಟಿ ಮಾಡಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗು ಸಂರಕ್ಷಣಾ ಕಾಯಿದೆ 2020 ಹಾಗು ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 (ತಿದ್ದುಪಡಿ 1975) ಇದು ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಗೋವಂಶ (ಯಾವುದೇ ವಯಸ್ಸಿನ ದನ, ಎತ್ತು, ಹೋರಿ ಕರುಗಳು) ಗಳ ಬಲಿ/ ಕುರ್ಬಾನಿ/ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ.

ಇದೇ ಜೂನ್ 29, 30, ಜೂಲೈ 1 ರಂದು ಕುರ್ಬಾನಿಯ ಸಾಧ್ಯತೆ ಇದ್ದು, ಈ ತಾರೀಕಿನಂದು ಮತ್ತು ಇತರೆ ದಿನಗಳಂದೂ ಯಾವುದೇ ರೀತಿಯ ಗೋವಂಶ ವಧೆ/ಬಲಿ/ಕುರ್ಬಾನಿ/ ಹತ್ಯೆ ಹಾಗು ಅಕ್ರಮ ಗೋಸಾಗಾಟವಾಗದಂತೆ ತಾವುಗಳು ಕ್ರಮಕೈಗೊಳ್ಳಬೇಕು.

ಇದೇ ಸಂಧರ್ಭದಲ್ಲಿ ಗೋವುಗಳನ್ನು ಸಾಕುವವರ ಮನೆಯಿಂದ, ಬೀದಿಗಳಿಂದ, ಗೋವುಗಳ ಕಳ್ಳತನವಾಗದಂತೆ ಅಹೋ ರಾತ್ರಿ ಗಸ್ತು ಹಾಗು ಅಗತ್ಯ ಇದ್ದಲ್ಲೆಲ್ಲ ನಾಕಾಬಂದಿ ಹಾಕಬೇಕಾಗಿ ವಿನಂತಿ.

ಜೂಲೈ 2 ರ ತನಕ ಯಾರು ಕೂಡ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವುಗಳನ್ನು ತಂದು ಕಟ್ಟಿ ಹಾಕಿ ಶೇಖರಿಸದಂತೆ ಎಚ್ಚರಿಕೆವಹಿಸಬೇಕು. ಒಂದು ವೇಳೆ ಆ ರೀತಿ ಗೋವುಗಳನ್ನು ತಂದು ಕಟ್ಟಿ ಹಾಕಿದ್ದು ಕಂಡರೆ ತಕ್ಷಣ ಅದಕ್ಕೆ ಪಶು ಸಂಗೋಪನಾ ಇಲಾಖೆಯವರು ಕಿವಿಯೋಲೆ ಹಾಕಿಸಿ, ಫೋಟೋ ತೆಗೆದುಕೊಂಡು ಮಾಲೀಕರ ಬಳಿ ಮುಚ್ಚಳಿಕೆ ತೆಗೆದುಕೊಳ್ಳಬೇಕು.

ಜೂಲೈ 3 ರಂದು ಗೋವುಗಳನ್ನು ಬದುಕಿರುವ ಬಗ್ಗೆ ಅದನ್ನು ಖಾತ್ರಿ ಪಡೆಸಿಕೊಳ್ಳಬೇಕು, ಜೂಲೈ 3 ರ ಮೊದಲು ದನ ತೀರಿ ಹೋದರೆ ಅದನ್ನು ಹೂಳದೆ ಪೊಲೀಸರಿಗೂ ಮತ್ತು ಪಶು ಸಂಗೋಪನಾ ಇಲಾಖೆಯವರಿಗೆ ತಿಳಿಸಿ ಧಫನ ಮಾಡಿದನ್ನು ಖಾತ್ರಿ ಮಾಡಬೇಕು.

ಒಂದು ವೇಳೆ ಜೂಲೈ 3 ರಂದು ಪರಿಶೀಲಿಸುವಾಗ ಆ ಗೋವುಗಳನ್ನು ಕಂಡು ಬರದಿದ್ದಲ್ಲಿ ಅವರ ಮೇಲೆ ಗೋಹತ್ಯಾ ನಿಷೇಧ ಕಾಯಿದೆ 2020 ರ ಪ್ರಕಾರ ಪ್ರಕರಣ ದಾಖಲಿಸಬೇಕು. (ಪ್ರಕಾರ ದಾಖಲಿಸುವ ಬಗ್ಗೆ ಮೊದಲೇ ಮುಚ್ಚಳಿಕೆ ಕೊಡುವಾಗ ತಿಳಿಸಿರಬೇಕು) ಕುರ್ಬಾನಿ ನಿಷೇಧ ವಿರುವ ಬಗ್ಗೆ ದ್ವನಿ ವರ್ಧಕ ಮೂಲಕ ಜಾಗ್ರತಿ ಮೂಡಿಸಬೇಕು‌ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಪಿ.ರುದ್ರೇಶ್, ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್, ಓಂಕಾರ್ ದಕ್ಷಿಣ ಪ್ರಾಂತ ಧರ್ಮಚಾರ್ಯ ಪ್ರಮುಖ ವಿಶ್ವ ಹಿಂದೂ ಪರಿಷದ್, ಸಂದೀಪ್ ಜಿಲ್ಲಾ ಸಂಯೋಜಕರು ಬಜರಂಗದಳ, ಕೇಶವ್ ಸಹ ಸಂಯೋಜಕರು ಬಜರಂಗದಳ, ಶ್ರೀನಿವಾಸ್ ನಗರ ಅಧ್ಯಕ್ಷರು, ವಿಶ್ವ ಹಿಂದೂ ಪರಿಷದ್, ಶಶಿಧರ್ ಗ್ರಾಮಾಂತರ  ಅಧ್ಯಕ್ಷರು, ವಿಶ್ವ ಹಿಂದೂ ಪರಿಷದ್, ರಂಗಸ್ವಾಮಿ ನಗರ ಸಂಯೋಜಕರು ಬಜರಂಗದಳ, ಕಿಶೋರ್ ಗೋರಕ್ಷಾ ಪ್ರಮುಖ್  ಪ್ರಮುಖ ಬಜರಂಗದಳ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *