ಜನವರಿ 25 ರಂದು ವಿಶ್ವಹಿಂದು ಪರಿಷತ್ ಬಜರಂಗದಳ ಶೌರ್ಯಯಾತ್ರೆ : ಪ್ರಭಂಜನ್

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.23): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ ಲಕ್ಷಾಂತರ ದೇಶಭಕ್ತರ ತ್ಯಾಗ, ಬಲಿದಾನ, ಶೌರ್ಯಗಳನ್ನು ನೆನಪಿಸಿಕೊಳ್ಳುವುದಕ್ಕಾಗಿ ವಿಶ್ವಹಿಂದು ಪರಿಷತ್-ಬಜರಂಗದಳ ಶೌರ್ಯಯಾತ್ರೆ ಜ.25 ರಂದು ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ಬಜರಂಗದಳ ಶಿವಮೊಗ್ಗ ವಿಭಾಗದ ಸಂಚಾಲಕ ಪ್ರಭಂಜನ್ ತಿಳಿಸಿದರು.

ವಿ.ಪಿ. ಬಡಾವಣೆಯಲ್ಲಿರುವ ವಿಶ್ವಹಿಂದು ಪರಿಷತ್ ಭಜರಂಗದಳ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಭಂಜನ್ ರಾಮಮಂದಿರ ನಿರ್ಮಾಣಕ್ಕಾಗಿ 76 ಕ್ಕೂ ಹೆಚ್ಚು ಸಂಘರ್ಷಗಳು ನಡೆದಿದೆ. ನಾಲ್ಕು ಲಕ್ಷಕ್ಕೂ ಅಧಿಕ ಹಿಂದೂಗಳ ಬಲಿದಾನವಾಗಿದೆ.

ಸುಪ್ರಿಂಕೋರ್ಟ್ ಪಂಚಪೀಠ ರಾಮಮಂದಿರದ ಜಾಗ ರಾಮನಿಗೆ ಸೇರಿದ್ದು ಎನ್ನುವ ಮಹತ್ತರ ತೀರ್ಪು ನೀಡಿದ್ದರಿಂದ ಭಾರತೀಯರ ಸ್ವಾಭಿಮಾನದ ಸಂಕೇತವಾದ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದಕ್ಕಾಗಿ ನಾಳೆ ನಡೆಯಲಿರುವ ವಿಶ್ವ ಹಿಂದೂಪರಿಷತ್-ಬಜರಂಗದಳ ಶೌರ್ಯಯಾತ್ರೆಯಲ್ಲಿ ಗಣವೇಷ ಧರಿಸಿ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಭಯೋತ್ಪಾದನೆ, ಮತಾಂತರ, ಲವ್‍ಜಿಹಾದ್, ಗೋಹತ್ಯೆ ವಿರುದ್ದ ಸಮಾಜವನ್ನು ಜಾಗೃತಿಗೊಳಿಸುವುದು ಯಾತ್ರೆಯ ಉದ್ದೇಶ ಎಂದು ಹೇಳಿದರು.

ಮಧ್ಯಾಹ್ನ ಮೂರು ಗಂಟೆಗೆ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಯಾತ್ರೆ ಹೊರಡಲಿದ್ದು, ಸಂಜೆ 4-30 ಕ್ಕೆ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುವ ಸಭೆಯ ಸಾನಿಧ್ಯವನ್ನು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಬಜರಂಗದಳ ಕರ್ನಾಟಕ ದಕ್ಷಿಣದ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್. ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್, ವಿಶ್ವಹಿಂದುಪರಿಷತ್ ಶಿವಮೊಗ್ಗ ವಿಭಾಗದ ಕಾರ್ಯದರ್ಶಿ ಷಡಾಕ್ಷರಪ್ಪ ಇವರುಗಳು ಭಾಗವಹಿಸುವರು ಎಂದು ಪ್ರಭಂಜನ್ ವಿವರ ನೀಡಿದರು.

ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *