ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿ ನೆಲಸಮ..!

1 Min Read

 

ಬೆಂಗಳೂರು: ಸಾಸಹ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಮೊದಲು ಆಗಿದ್ದೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ. ಆದರೆ ಆ ಸಮಾಧಿಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಅಭಿಮಾನಿಗಳು ಸಾಕಷ್ಟು ಹೋರಾಟ ಮಾಡಿದರೂ ಅಂದುಕೊಂಡಂತೆ ಆಗಲೇ ಇಲ್ಲ. ಇದೆಲ್ಲವನ್ನು ನೋಡಿ ಬೇಸತ್ತ ಕುಟುಂಬ, ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಒಂದು ಗ್ಯಾಲರಿಯನ್ನೇ ಮಾಡಿಟ್ಟಿದೆ. ಆದರೂ ಅಭಿಮಾನಿಗಳಿಗೆ ಒಂದು ಹಠ ಅಂದ್ರೆ ಅಭಿಮಾನ್ ಸ್ಟುಡಿಯೋದಲ್ಲೂ ಸ್ಮಾರಕ ಕಟ್ಟಬೇಕು ಅನ್ನೋದು. ಆದರೆ‌ ಈಗಿನ ಬೆಳವಣಿಗೆ ಏನಂದ್ರೆ ಸಮಾಧಿಯನ್ನ ನೆಲಸಮ ಮಾಡಿದ್ದಾರೆಂಬುದು.

ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನ ತೆರವುಗೊಳಿಸಲಾಗಿದೆ. ಈ ಘಟನೆಯಿಂದಾಗಿ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ಅಭಿಮಾನ್ ಸ್ಟುಡಿಯೋದಲ್ಲಿಯೇ ವಿಧಿ ವಿಧಾನದೊಂದಿಗೆ ಅಂತ್ಯಕ್ರಿಯೆ ಮಾಡಿದ್ದರು. ಹೀಗಾಗಿ ಇಲ್ಲಿಯೇ ಸ್ಮಾರಕ ಮಾಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು.

ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಅವರ ಹುಟ್ಟಿದ ಹಬ್ಬ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳು ಸಮಾಧಿ ಬಳಿ ಹೋಗಿ, ವಿಶೇಷ ಪೂಜೆ‌ ಸಲ್ಲಿಸಿ, ಒಂದಷ್ಟು‌ ಸಮಾಜ ಸೇವೆಯನ್ನ ಮಾಡಿ ಬರುತ್ತಾರೆ. ಆದರೆ ಈಗ ನೋಡಿದ್ರೆ ಸಮಾಧಿಯನ್ನೆ ತೆರವು ಮಾಡಿದ್ದಾರೆ. ಸಮಾಧಿ ಕೂಡ ಅಭಿವೃದ್ಧಿಯಾಗಿರಲಿಲ್ಲ. ಬಾಲಣ್ಣ ಕುಟುಂಬದವರು ಈ ಜಾಗಕ್ಕಾಗಿ ಕಿತ್ತಾಟ ಶುರು ಮಾಡಿದ್ದಾರೆ.ಈ ಕೇಸ್ ಕೋರ್ಟ್ ನಲ್ಲಿ ಕೂಡ ಇದೆ. ಹೀಗಾಗಿ ಅಲ್ಲಿನ ವಿಷ್ಣುವರ್ಧನ್ ಸಮಾಧಿಯನ್ನ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಮಾಡುವುದಕ್ಕೂ ಬಿಟ್ಟಿರಲಿಲ್ಲ.

ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಇನ್ನು ಕೆಲವೇ ದಿನಗಳು ಇರುವಾಗಲೇ ಈ ರೀತಿಯ ಕೆಲಸ ನಡೆದಿದೆ. ಅಭಿಮಾನಿಗಳು ಈ ಘಟನೆಯಿಂದಾಗಿ ತುಂಬಾನೇ ನೊಂದಿದ್ದಾರೆ. ಕೇಸ್ ಎಲ್ಲಾ ಕ್ಲಿಯರ್ ಆಗಬಹುದು ಎಂಬ ನಂಬಿಕೆಯಿಂದ ಇದ್ದರು. ಅದರಲ್ಲೂ ಅಂತ್ಯಕ್ರಿಯೆ ನಡೆದ ಜಾಗವೇ ಹೀಗೆ ತೆರವಾಗಿದ್ದು, ಅಭಿಮಾನಿಗಳ ಮನಸ್ಸನ್ನ ಒಡೆದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks