ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಇದ್ದಂತ ವಿಷ್ಣುವರ್ಧನ್ ಸ್ಮಾರಕ ಸಂಪೂರ್ಣ ನೆಲಸಮವಾಗಿದೆ. ಇದು ಅಭಿಮಾನಿಗಳಿಗೆ ಬಹಳ ದುಃಖಕರ ಸಂಗತಿಯಾಗಿದೆ. ಅವರ ಸ್ಮಾರಕ್ಕಾಗಿ ಓಡಾಡಿದ ಸುದೀಪ್ ಅವರಿಗೂ ನೋವು ತರಿಸಿದೆ. ಸುದೀಪ್ ಅವರು ಕೂಡ ಈ ಸಂಬಂಧ ನೋವು ಹೊರ ಹಾಕಿದ್ದಾರೆ. ಇದೀಗ ರಂಗಾಯಣ ರಘು ಅವರು ಈ ಸಮಾಧಿ ನೆಲಸಮ ಆಗಿರುವುದರ ಬಗ್ಗೆ ಮಾತನಾಡಿದ್ದಾರೆ.
ಬಾಲಣ್ಣ ಅವರ ಸ್ಟುಡಿಯೋ ಆಗಿರೋ ಕಾರಣ ಅಲ್ಲಿ ಕಾನೂನಾತ್ಮಕವಾಗಿಯೇ ಎಲ್ಲವೂ ಆಗಿದೆ. ವಿಷ್ಣು ಸರ್ ಹೆಚ್ಚು ಸಮಯ ಕಳೆದಿದ್ದು ಭಾರತೀ ಮೇಡಂ ಜೊತೆಗೆ. ಈಗಲೂ ಭಾರತೀ ಮೇಡಂ ಇದ್ದಾರೆ. ಅಳಿಯ, ಮಕ್ಕಳಿದ್ದಾರೆ. ತಾವೂ ಹೇಗಿರಬೇಕು ಎಂಬುದನ್ನ ವಿಷ್ಣು ಸರ್ ಹೇಳಿರುತ್ತಾರೆ. ಹಾಗಾಗಿಯೇ ಅವರು ಮೈಸೂರಿನಲ್ಲಿ ಸ್ಮಾರಕ ಮಾಡಿದ್ದಾರೆ. ಕಾನೂನಿನ ತೊಡಕು ಇರುವ ಕಾರಣ ಇಲ್ಲಿಗೆ ಬೆರಬೇಡಿ ಹೋಗಿ ಅಂತ ಮತ್ತೆ ಹೇಳಿದರೆ ಅವಮಾನವಾಗುತ್ತದೆ. ಮೈಸೂರಿಗೆ ಚಾಮುಂಡಿ ಬೆಟ್ಟ ನೋಡಲು ಹೋದಂತೆ ವಿಷ್ಣು ಸ್ಮಾರಕ ನೋಡಲಹ ಹೋಗುತ್ತೇವೆ ಎಂದಿದ್ದಾರೆ.
ಅಂದು ಅಂಬರೀಶ್ ಇದ್ದರು. ಇಲ್ಲಿಯೇ ಮಾಡೋಣಾ ಎಂದರು. ಮಾಡಿಬಿಟ್ಟರು. ರಾತ್ರೋ ರಾತ್ರಿ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಿದ್ದಾರೆ ಎಂದಿದ್ದಾರೆ. ಪೊಲೀಸರು ಬಂದಿದ್ದಾರೆ ಎಂದರೆ ಕಾನೂನಿನಾತ್ಮಕವಾಗಿಯೇ ನಡೆದಿದೆ ಎಂದೇ ತಾನೇ ಅರ್ಥ. ಅದು ಬಾಲಣ್ಣ ಅವರ ಜಾಗ. ಇಂಥ ಕಡೆ ಸಮಾಧಿ ಇರಬೇಕು ಅನ್ನೋದು ಅಭಿಮಾನಿಗಳಿಗೂ ಆಸೆ ಇರುತ್ತದೆ. ಆದರೆ ಇಲ್ಲಿ ಯಾರದ್ದು ಸರಿ, ಯಾರದ್ದೂ ತಪ್ಪು ಎಂಬುದನ್ನ ಹೇಳೋದಕ್ಕೆ ಆಗಲ್ಲ. ಭಾರತಿ ಮೇಡಂ, ಅನಿರುದ್ಧ ಎಲ್ಲರೂ ಪ್ರಯತ್ನ ಮಾಡಿದರು. ವೀರಕಪುತ್ರ ಸೇರಿದಂತೆ ಎಲ್ಲಾ ಅಭಿಮಾನಿಗಳು ಪ್ರಯತ್ನ ಪಟ್ಟರು ಎಂದಿದ್ದಾರೆ.






