ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ ರಾಜ್ಯದ ಮಂದಿ. ಇಂಥ ಸುಸಂದರ್ಭದಲ್ಲಿ ಕಿಚ್ಚನ ಟೀಂ ತನ್ನ ಫ್ಯಾನ್ಸ್ ಗೆ ಇನ್ನಷ್ಟು ಖುಷಿ ಹೆಚ್ಚಾಸಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಅದ್ಯಾವಾಗ ರಿಲೀಸ್ ಆಗುತ್ತೆ, ನಾವ್ಯಾವಾಗ ನೋಡ್ತೀವಿ ಅಂತ ತುದಿಗಾಲಲ್ಲಿ ನಿಂತಿದ್ದವರಿಗೆ ಸಿಹಿ ಸುದ್ದಿಯನ್ನ ನೀಡಿದೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಜುಲೈ 28ಕ್ಕೆ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ ದೇಶದೆಲ್ಲೆಡೆ ರಿಲೀಸ್ ಆಗಲಿದೆ. ಈ ಸುದ್ದಿ ಕೇಳಿ ಪೊ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಸಿನಿಮಾ ರಿಲೀಸ್ ಗೆ ತಡವೇ ಆದರೂ ಈಗಿನಿಂದಲೇ ಸೆಲೆಬ್ರೇಷನ್ ಶುರು ಮಾಡಿಕೊಂಡವರೆ.
Blockbuster aa raha hai.
Wah #VikrantRona Wah ! It doesn't get bigger than this, Get ready to be vowed by my friend @KicchaSudeep and his amazing charisma. #VikrantRonaJuly28 in Cinemas worldwide in 3D. https://t.co/xbuIlK3mQk— Virender Sehwag (@virendersehwag) April 2, 2022
ಫ್ಯಾನ್ಸ್ ಗಳ ಖುಷಿ ಒಂದು ಕಡೆಯಾದ್ರೆ, ಕಿಚ್ಚನಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಇಂಗ್ಲೀಷ್ ಟೀಸರ್ ಬಿಡಿಗಡೆ ಮಾಡಿರುವ ಸೆಹ್ವಾಗ್, ವಿಕ್ರಾಂತ್ ರೋಣ ತಂಡಕ್ಕೆ ಶುಭಕೋರಿದ್ದಾರೆ. ಬ್ಲಾಕ್ ಬಸ್ಟರ್ ಆ ರಹಾ ಹೈ.. ವ್ಹಾ ವಿಕ್ರಾಂತ್ ರೋಣ ವ್ಹಾ.. ಎಲ್ಲರೂ ಸಿದ್ಧರಾಗಿ ಗೆಳೆಯ ಸುದೀಪ್ ಅವರ ಅದ್ಭುತ ವರ್ಚಸ್ ಜುಲೈ 28 ರಂದು 3 ಡಿ ಯಲ್ಲಿ ಕಾಣಲಿದೆ ಎಂದು ಟ್ವಿಟ್ಟರ್ ನಲ್ಲಿ ಟೀಸರ್ ಶೇರ್ ಮಾಡಿಕೊಂಡು ಬರೆದಿದ್ದಾರೆ.