ನವದೆಹಲಿ : ಕ್ರಿಕೆಟ್ ಅಂಗಳದಲ್ಲಿ ಕೊಹ್ಲಿ ಹಾಗೂ ಬಿಸಿಸಿಐ ನಡುವಿನ ಒಳಜಗಳವೇ ಸದ್ದು ಮಾಡ್ತಾ ಇದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುವ ಮುನ್ನ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಇದೀಗ ಆ ಹೇಳಿಕೆಯೇ ವಿರಾಟ್ ಕೊಹ್ಲಿಗೆ ಮುಳುವಾಗುತ್ತಾ ಎಂಬ ಚರ್ಚೆಗಳು ಶುರುವಾಗಿದೆ.
ಬಿಸಿಸಿಐ ಏಕದಿನ ಪಂದ್ಯದ ನಾಯಕತ್ವದಿಂದ ಕೊಹ್ಲಿಯನ್ನ ಕೆಳಗಿಳಿಸಿ, ರೋಹಿತ್ ಶರ್ಮಾ ಅವರನ್ನ ನಾಯಕತ್ವಕ್ಕೆ ಆಯ್ಕೆ ಮಾಡಿತ್ತು. ನಾಯಕತ್ವದಿಂದ ತೆಗೆಯುವ ಮುನ್ನ ನನಗೆ ಮಾಹಿತಿಯನ್ನು ನೀಡಲಿಲ್ಲ. ನನ್ನ ಅಭಿಪ್ರಾಯವನ್ನು ಕೇಳಲಿಲ್ಲ ಎಂದು ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಕೊಹ್ಲಿ ಸುದ್ದಿಗೋಷ್ಟಿಯ ನಂತರ ಅವರು ನೀಡಿದ ಹೇಳಿಕೆ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಕ್ರಿಕೆಟಿಗರ ಕೇಂದ್ರೀಯ ಗುತ್ತಿಗೆ ನಿಯಮಾವಳಿಯ ಪ್ರಕಾರ ಆಟಗಾರರು, ಮಂಡಳಿ ಅಥವಾ ಅಧಿಕಾರಿಗಳ ವಿರುದ್ಧ ಟೀಕೆ ಮಾಡುವಂತಿಲ್ಲ. ಇದೀಗ ಕೊಹ್ಲಿ ಇಷ್ಟು ದೊಡ್ಡ ಆರೋಪವರಿಸಿದ್ದು, ಅವರಿಗೆ ತಿರುಗುಬಾಣವಾಗುತ್ತಾ ಎಂಬ ಪ್ರಶ್ನೆಗಳು ಹುಟ್ಟಿವೆ. ಸದ್ಯ ಬಿಸಿಸಿಐ ಕೊಹ್ಲಿ ನೀಡಿರುವ ಹೇಳಿಕೆಯನ್ನ ಪರಿಶೀಲಿಸುತ್ತಿದ್ದಾರೆ. ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎನ್ನಲಾಗಿದೆ. ದಕ್ಷಿಣಾ ಆಫ್ರಿಕಾ ಮ್ಯಾಚ್ ಮುಗಿಸಿ ಬಂದ ಬಳಿಕ ಶೋಕಾಸ್ ನೋಟೀಸ್ ನೀಡುವ ಸಾಧ್ಯತೆ ಇದೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ T20 ತಂಡದ ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದಾಗ ಬಿಸಿಸಿಐ ವಿರೋಧಿಸಿತ್ತು, ಆದರೂ ಕೊಹ್ಲಿ ಆ ನಿರ್ಧಾರಕ್ಕೆ ಬದ್ಧರಾಗಿದ್ದರು ಎಂದು ಗಂಗೂಲಿ ಹೇಳಿದ್ದರು. ಆದ್ರೆ ವಿರಾಟ್ ಕೊಹ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ ರೀತಿಯ ಬೇರೆಯಾಗಿತ್ತು. ಹೀಗಾಗಿ ಕ್ರಿಕೆಟ್ ಅಂಗಳದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.