ವಿಶ್ವಕಪ್ ನಿಂದ ಹೊರ ಬಂದ ಮೇಲೆ ಕೊಹ್ಲಿ ಭಾವುಕ ಪೋಸ್ಟ್..!

1 Min Read

ಬೆಂಗಳೂರು : ಈ ಬಾರಿಯ T20 ವಿಶ್ವಕಪ್ ‌ನಲ್ಲಿ ನಮ್ಮ ಭಾರತ ಗೆಲ್ಲಬೇಕೆಂಬುದು ಎಲ್ಲರ ಮಹದಾಸೆಯಾಗಿತ್ತು. ಆದ್ರೆ ಆ ಕನಸು ನನಸಾಗಲೇ ಇಲ್ಲ. ವಿಶ್ವಕಪ್ ಟೂರ್ನಿಯಿಂದ ಭಾರತ ಹೊರ ನಡೆದಿದೆ. ಇದು ಕೋಟ್ಯಾಂತರ ಭಾರತೀಯರಿಗೆ ಬೇಸರ ತರಿಸಿದ್ದಲ್ಲದೆ, ಕೊಹ್ಲಿಗೂ ಸಹಜವಾಗಿಯೇ ನೋವುಂಟಾಗಿದೆ.

ಟೀಂ ಇಂಡಿಯಾ ಸೆಮಿಫೈನಲ್ ಅನ್ನು ಪ್ರವೇಶಿಸದೆ ಹೊರಬಿದ್ದಿದೆ. ಈ ನೋವನ್ನ ಕೊಹ್ಲಿ ಬರಹದ ಮೂಲಕ ಹೊರ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ, ನಾವೂ ಒಟ್ಟಾಗಿಯೇ ನಿಂತು ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತೇವೆ. ದುರಾದೃಷ್ಟವಶಾತ್ ನಮಗೆ ಆ ಗುರಿಯನ್ನ ಸಾಧಿಸಲು ಆಗಲಿಲ್ಲ. ಇದು ಒಂದು ತಂಢಕ್ಕಿ.ಮತ ಹೆಚ್ಚು ನಿರಾಸೆ ಬೇರೆ ಯಾರಿಗೂ ಆಗಲ್ಲ.

ನೀವೆಲ್ಲರೂ ನಮಗೆ ಸಾಕಷ್ಟು ಬೆಂಬಲ ಕೊಟ್ಟಿದ್ದೀರಿ. ಅದಕ್ಕೆ ನಾವೂ ಕೃತಜ್ಞರಾಗಿರುತ್ತೇವೆ. ಮತ್ತೆ ಗೆಲುವಿನೆಡೆಗೆ ಹೆಜ್ಜೆ ಇಡುವುದು ನಮ್ಮ ಧ್ಯೇಯವಾಗಿದೆ. ಟೂರ್ನಿಯಿಂದ ಈ ರೀತಿ ಹೊರ ಬಂದಿದ್ದು ತಂಡಕ್ಕೂ ಅತಿ ಹೆಚ್ಚು ನಿರಾಸೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ವಿರಾಟ್ ಕೊಹ್ಲಿಗೆ ಟಿ20 ನಾಯಕರಾಗಿ ಇದು ಕೊನೆಯ ಪಂದ್ಯವಾಗಿತ್ತು. ಹೀಗಾಗಿ ಈ ಟೂರ್ನಿಯಲ್ಲಿ ಗೆಲುವು ತುಂಬಾನೇ ಪ್ರಾಮುಖ್ಯತೆ ವಹಿಸಿತ್ತು. ಆದ್ರೆ ಟೀಂ ಇಂಡಿಯಾ ತಂಡ ಸೆಮಿಫೈನಲ್ ಗೂ ತಲುಪದೆ ವಾಪಾಸ್ ಆಗಿದೆ. ಇದು ಕೋಟ್ಯಾಂತರ ಭಾರತೀಯರ ಬೇಸರಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *