ಕಾನೂನು ಉಲ್ಲಂಘನೆ ಮಾಡಿದರೆ ಸುಮ್ಮನೆ ಇರಲ್ಲ : ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

1 Min Read

 

ಬೆಂಗಳೂರು: ಎಲ್ಲೆಡೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ 29 ಜನ ಕರವೇ ಕಾರ್ಯಕರ್ತರು ಪೊಲೀಸರ ವಶದಲ್ಲಿದ್ದಾರೆ. ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರು, ಕಾನೂನಿನ ಉಲ್ಲಂಘನೆ ಮಾಡಿದರೆ ಸುಮ್ಮನೆ ಇರುವುದಕ್ಕೆ ಆಗಲ್ಲ. ನಮ್ಮ ಸರ್ಕಾರ ಕನ್ನಡ ಪರವಾಗಿಯೇ ನಿಂತಿದೆ. ಯೋಜನೆಗಳು ಹಾಗೂ ತೀರ್ಮಾನಗಳ ಬಗ್ಗೆ ನಿಂತಿದೆ. ಕನ್ನಡ ಅನುಷ್ಠಾನದ ಬಗ್ಗೆ ಹಲವು ಬಾರಿ ತೀರ್ಮಾನ ಮಾಡಿದ್ದೇವೆ. ಲೈಸೆನ್ಸ್ ಕೊಡುವ ಸಮಯದಲ್ಲೂ ಕನ್ನಡದ ಬಗ್ಗೆ ತಿಳಿಸಿದ್ದೇವೆ. ಈಗ ಕರವೇ ಬಲವಂತವಾಗಿ ಬೋರ್ಡ್ ತೆಗೆಯೋದನ್ನ ಮಾಡಿದೆ. ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತರಬೇಕಿತ್ತು. ಸಾರ್ವಜನಿಕರಿಗೆ ಧಕ್ಕೆ ತರುವ ಕೆಲಸ ಮಾಡಬಾರದಿತ್ತು. ಅದಕ್ಕಾಗಿ ಪೊಲೀಸರು ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ.

ಬಿಬಿಎಂಪಿ ಕೂಡ ಗಡುವು ನೀಡಿದೆ. ಕನ್ನಡ ಕಡ್ಡಾಯಕ್ಕೆ ಸೂಚನೆ ನೀಡಿದ್ದೇವೆ‌. ಕಡ್ಡಾಯ ಮಾಡುತ್ತೇವೆ. ಆದರೆ ಅದಕ್ಕೆ ಸ್ವಲ್ಪ ಸಮಯ ನೀಡಬೇಕು ಅಲ್ಲವಾ. ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಅಂದರೆ ಹೇಗೆ..? ಪ್ರತಿಭಟನೆ ಮಾಡುವುದಕ್ಕೆ ಒಂದಷ್ಟು ಸಮಯ ಕೊಡುತ್ತಾರೆ. ಕಾನೂನಿನ ಉಲ್ಲಂಘನೆ ಮಾಡಿದರೆ ಸುಮ್ಮನೆ ಇರುವುದಕ್ಕೆ ಆಗಲ್ಲ. ಮಾಲ್ ಗಳಲ್ಲೂ ಭದ್ರತೆ ಕೇಳುತ್ತಾರೆ. ನಾವೂ ಯಾರ ಪರವೂ ಇಲ್ಲ. ವಿರೋಧವೂ ಇಲ್ಲ. ಕಾನೂನನ್ನು ಯಾರೇ ಉಲ್ಲಂಘನೆ ಮಾಡಿದರೂ ಸುಮ್ಮನೆ ಇರುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *