ಅಬಕಾರಿ ಮಾರಾಟ ಮಳಿಗೆ : ಲೈಸೆನ್ಸ್ ಈಗ 1 ರಿಂದ 3 ಕೋಟಿ..!

1 Min Read

ಮದ್ಯ ಮಾರಾಟ ಮಳಿಗೆಗಳಿಗೆ ಈಗ ಲೈಸೆನ್ಸ್ ಪಡೆಯುವುದು ಅಷ್ಟು ಸುಲಭದ್ದಾಗಿಲ್ಲ. ಲೈಸೆನ್ಸ್ ಹರಾಜು ಪ್ರಕ್ರಿಯೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಅಬಕಾರಿ ಲೈಸೆನ್ಸ್ ಗಳನ್ನು ಹರಾಜು ಹಾಕಲು ಕರಡು ನಿಯಮಗಳನ್ನು ರಾಜ್ಯದ ಹಣಕಾಸು ಇಲಾಖೆಯು ಬಿಡುಗಡರ ಮಾಡಿದೆ. ಈ ಮೂಲಕ ಅಬಕಾರಿ ಇಲಾಖೆ 500 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲು ರಾಜ್ಯ ಹಣಕಾಸು ಇಲಾಖೆ ಉದ್ದೇಶ ಹೊಂದಲಾಗಿದೆ.

ರಾಜ್ಯದಲ್ಲಿ ಒಟ್ಟಾರೆ 579 ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ಗಳನ್ನು ಹರಾಜು ಹಾಕಲಾಗುತ್ತೆ ಎಂದು ಅಬಕಾರಿ ಸಚಿವರ ಕಚೇರಿ ತಿಳಿಸಿದೆ. ಆನ್ಲೈನ್ ನಲ್ಲಿ ಲಿಕ್ಕರ್ ಮಾರಾಟ ಮಳಿಗೆಗಳ ಲೈಸೆನ್ಸ್ ಅನ್ನು ಹರಾಜು ಹಾಕಲಾಗುತ್ತೆ. ಅತಿ ಹೆಚ್ಚು ಬಿಡ್ ಮಾಡಿದವರಿಗೆ ಮದ್ಯ ಮಾರಾಟದ ಬಾರ್ ಅಂಡ್ ರೆಸ್ಟೋರೆಂಟ್ ಸಿಗುತ್ತೆ ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ 1992ರಿಂದ ಹೊಸದಾಗಿ ಸಿಎಲ್ 2 ಮತ್ತು ಸಿಎಲ್ 9 ಲೈಸೆನ್ಸ್ ಗಳನ್ನು ಯಾರಿಗೂ ನೀಡಿಲ್ಲ. ಹೀಗಾಗಿ ಸಿಎಲ್ 2 ಮತ್ತು ಸಿಎಲ್ 9 ಲೈಸೆನ್ಸ್ ಗಳಿಗೆ ಭಾರೀ ಬೇಡಿಕೆ ಇದೆ‌.

ಬೆಂಗಳೂರು ಒಂದರಲ್ಲಿಯೇ ಸಿಎಲ್ 2 ಮತ್ತು ಸಿಎಲ್ 9 ಲೈಸೆನ್ಸ್ ಬರೋಬ್ಬರಿ 3.8 ಕೋಟಿ ರೂಪಾಯಿಗೆ ಮಾರಾಟವಾಗಿರುವ ಉದಾಹರಣೆಯೂ ಇದೆ. ಈಗ ಲೈಸೆನ್ಸ್ ಹರಾಜಿನಲ್ಲಿ ಪ್ರತಿಯೊಂದು ಲೈಸೆನ್ಸಗ ಹರಾಜಿನಿಂದ ಬೆಂಗಳೂರಿನಲ್ಲಿ 3 ಕೋಟಿ ರೂಪಾಯಿವರೆಗೂ ಹರಾಜು ಆಗಬಹುದು ಎಂಬ ನಿರೀಕ್ಷೆಯಲ್ಲಿ ನಾವೂ ಇದ್ದೇವೆ ಎಂದು ಸಲಹೆಗಾರ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

Share This Article