ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವ ಬರದಲ್ಲಿ ಮಚ್ಚು ತಿರುಗಿಸಿದ್ದ ರಜತ್ ಅಂಡ್ ವಿನಯ್ ಕೆಲ ಕಾಲ ಜೈಲುವಾಸವನ್ನು ಅನುಭವಿಸುವಂತೆ ಆಯ್ತು. ನಿನ್ನೆ ಜಾಮೀನು ಮಂಜುರಾಗಿತ್ತು, ಇಂದು ಜೈಲಿಂದ ರಿಲೀಸ್ ಆಗಿದ್ದಾರೆ. ಜೈಲಿನಿಂದ ಹೊರ ಬರುತ್ತಲೇ ವಿನಯ್ ವಿಡಿಯೋ ಮೂಲಕ ಜನರ ಕ್ಷಮೆ ಕೇಳಿ ಪೊಲೀಸರ ಬಗ್ಗೆಯೂ ಮಾತನಾಡಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ಒಂದು ಘಟನೆ ನಡೆದು ಹೋಗಿದೆ. ಈ ವಿಡಿಯೋ ಮಾಡುತ್ತಿರುವ ಉದ್ದೇಶವೆಂದರೆ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳಬೇಕಿತ್ತು. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ. ಒಂದು ಮಚ್ಚಿನ ಕಥೆ ನೀವೂ ನೋಡಿರಬಹುದು. ಅದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ. ಎಲ್ಲರಿಗೂ ನಾನು ಮನಃಪೂರ್ವಕವಾಗಿ ಕ್ಷಮೆ ಕೋರುತ್ತೇನೆ. ಸಾಕಷ್ಟು ಜನ ಹಗಲು ರಾತ್ರಿ ಎಂದು ನೋಡದೆ ಬೆಂಬಲ ನೀಡಿದ್ದೀರಿ. ನಿಮಗೆಲ್ಲ ಧನ್ಯವಾದಗಳು. ನನ್ನ ಅಕ್ಕ ಭಾವ, ಮಾಧ್ಯಮದವರಿಗೂ ಕ್ಷಮೆ ಕೇಳುವೆ. ನಾನು ಆ ಮಚ್ಚು ಹಿಡಿದುಕೊಂಡು ವಿಡಿಯೋ ಮಾಡಬಾರದಿತ್ತು. ಈ ವಿಷಯ ಇಷ್ಟು ದೊಡ್ಡದಾಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಿತ್ತು ಎಂದಿದ್ದಾರೆ.

ಇದೇ ವೇಳೆ ಪೊಲೀಸರ ಬಗ್ಗೆ ಮಾತನಾಡಿದ ವಿನಯ್, ಪೊಲೀಸರು ಅವರ ವೃತ್ತಿ ಮಾಡಿದ್ದಾರೆ. ಸೆಲೆಬ್ರೆಟಿ, ಸಾಮಾನ್ಯ ವ್ಯಕ್ತಿ ಎಂಬ ಭಿನ್ನತೆ ಇಲ್ಲದೆ ಅವರು ಕಾರ್ಯ ಮಾಡಿದ್ದಾರೆ. ಪೊಲೀಸರು ನಮ್ಮನ್ನು ಸಾಮಾನ್ಯರಂತೆ ನಡೆದುಕೊಂಡರು. ದಯವಿಟ್ಟು ಯಾರೂ ಸಹ ಅವರ ಮೇಲೆ ಆರೋಪಗಳನ್ನು ಮಾಡುವುದು ಬೇಡ. ಗೌರವಯುತವಾಗಿ ನಡೆಸಿಕೊಂಡರು. ಗೌರವಯುತವಾಗಿಯೇ ನಡೆದುಕೊಂಡಿದ್ದಾರೆ ಎಂದು ಪೊಲೀಸರ ಬಗ್ಗೆ ಹೇಳಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿ, ರಜತ್ ಹಾಗೂ ವಿನಯ್ ಲಾಕ್ ಆಗಿದ್ದರು.

