ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಒಂದಷ್ಟು ವಾಗ್ವಾದಗಳು ನಡೆಯುತ್ತಿವೆ. ಸಿಟಿ ರವಿ ಹಾಗೂ ಶಾಸಕ ಮುನಿರತ್ನ ಪ್ರಕರಣಗಳನ್ನು ಹಿಡಿದು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ನಕಲಿ ಪ್ರಕರಣ, ನಕಲಿ ಸರ್ಕಾರ ಎಂದೆಲ್ಲಾ ಮಾತನಾಡುತ್ತಿರುವುದನ್ನು ಶಾಸಕ ವಿನಯ್ ಕುಲಕರ್ಣಿ ಖಂಡಿಸಿದ್ದಾರೆ. ಸಿಟಿ ರವಿ ಅವರೇ ಫೇಕ್ ಎಂದು ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ವಿನಯ್ ಕುಲಕರ್ಣಿ ಅವರು, ಫೇಕ್ ಎನ್ಕೌಂಟರ್ ಎಲ್ಲಿಂದ ಬಂತು. ಹುಚ್ಚರ ಕೈಯಲ್ಲಿ ಕಲ್ಲು ಕಿಟ್ಟಂತೆ ಬಿಜೆಪಿಯವರು ಮಾತನಾಡುತ್ತಾರೆ. ಇವರು ಯಾಕೆ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂಬುದು ಯಾರಿಗೆ ಗೊತ್ತು. ಬಿಜೆಪಿ ನಾಯಕರಿಗೆ ಅವರೇ ಮಾತೇ ಬಂಡವಾಳ. ಅವರು ಸಂಘಟನೆ ಮೂಲಕ ಬಂದವರಲ್ಲ. ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ ಅದರ ಮೇಲೆ ಬೆಂಕಿ ಹಚ್ಚೋದು ಬಿಜೆಪಿ ನಾಯಲರ ಕೆಲಸ.
ನಮ್ಮ ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದೆ. ಸುಳ್ಳು ಆರೋಪ ಮಾಡುವುದು, ಸುಳ್ಳು ಪ್ರಕರಣ ದಾಖಲಿಸುವುದು ಬಿಜೆಪಿಗರ ಕೆಲಸ. ನಕಲಿ ಎಂದರೆ ಏನು..? ನಕಲು ಕಾಂಗ್ರೆಸ್ ಎನ್ನುವವರು ಗೂಡ್ಸೆ ವಾದಿಗಳು. ನಾವೂ ಗಾಂಧಿ ವಾದಿಗಳು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಬಾಯಿಂದ ಇಂತಹ ಮಾತುಗಳೇ ಬರುವುದು. ಅವರ ಮಾತನ್ನ ಒಂದು ಕಿವಿಯಲ್ಲಿ ಕೇಳಿಸಿಕೊಂಡು ಮತ್ತೊಂದು ಕಿವಿಯಲ್ಲಿ ಬಿಟ್ಟು ಬಿಡಬೇಕು ಅಷ್ಟೇ ಎಂದು ಶಾಸಕ ವಿನಯ್ ಕುಲಕರ್ಣಿ ಅವರು ವ್ಯಂಗ್ಯ ಮಾಡಿದ್ದಾರೆ. ಸಿಟಿ ರವಿ ಪ್ರಕರಣ ಹಾಗೂ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.