ಬಳ್ಳಾರಿ : ವಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿಂದ ಮೂವರು ರೋಗಿಗಳ ಸಾವು ಪ್ರಕರಣ ಹಿನ್ನೆಲೆ ಇಂದು ವೈದ್ಯಕೀಯ ಸಚಿವ ಸುಧಾಕರ್ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಳ್ಳಾರಿ ಉಸ್ತುವಾರಿ ಹಾಗೂ ಸಚಿವ ಶ್ರೀರಾಮುಲು ಕೂಡ ಭೇಟಿ ನೀಡಿದ್ದಾರೆ. ಈಗಾಗಲೇ ಇಬ್ಬರ ಸಚಿವರ ಉಪಸ್ಥಿತಿಯಲ್ಲಿ ಸಭೆ ಕೂಡ ನಡೆದಿದೆ. ಸಭೆಯಲ್ಲಿ ಘಟನೆಯ ಬಗ್ಗೆಯೂ ಚರ್ಚೆ ನಡೆದಿದೆ.

ಬೆಳಗ್ಗೆನೆ ಪವರ್ ಕಟ್ ಆಗಿದೆ. ಬಳಿಕ ವೆಂಟಿಲೇಟರ್ ವರ್ಕ್ ಆಗಿಲ್ಲ. ಮೂವರು ಸಾವನ್ನಪ್ಪಿದ್ದಾರೆ ಎಂದು ಒಮ್ಮೆ ಹೇಳಿದ್ರೆ, ಇಬ್ಬರು ಅಂತ ಇನ್ನೊಮ್ಮೆ ಹೇಳಲಾಗುತ್ತಿದೆ. ಇನ್ನು ಸ್ವತಃ ವಿಮ್ಸ್ ನಿರ್ದೇಶಕ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಇಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ವಿದ್ಯುತ್ ಸಂಪರ್ಕ ಕಡಿತವಾಗಿ ರೋಗಿಗಳು ಸಾವನ್ನಪ್ಪಿದ್ದರು. ಈ ಸಂಬಂಧ ವಿಮ್ಸ್ ವೈದ್ಯಾಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದಿದ್ದಾರೆ. ಇನ್ನು ಈ ಮಧ್ಯೆ ಕಾಂಗ್ರೆಸ್ ನಾಯಕರು ಸಚುವ ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ರಾಜೀನಾಮೆ ಸಂಬಂಧ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಈ ಹಿಂದೆ ಕರ್ನಾಟಕ ಪ್ರೈವೆಟ್ ಮೆಡಿಕಲ್ ಡಾಕ್ಟರ್ ಸಮಸ್ಯೆ ಆಗಿತ್ತು. ಐದು ದಿನ ಸ್ಟ್ರೈಕ್ ಮಾಡಿದ್ರು. ಆ ಸಮಯದಲ್ಲಿ 80 ಜನ ಸತ್ತಿದ್ದರು. ಅವತ್ತು ರಾಜೀನಾಮೆ ಕೊಟ್ಟಿದ್ರಾ. ಎಲ್ಲಾದಕ್ಕೂ ರಾಜೀನಾಮೆ ರಾಜಕಾರಣ ಮಾಡಬಾರದು ಎಂದಿದ್ದಾರೆ.


