ಐಯ್ಯನಹಳ್ಳಿ ಕುರುಬರಹಟ್ಟಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಗ್ರಾಮಸ್ಥರ ಪ್ರತಿಭಟನೆ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜು.13): ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ಐಯ್ಯನಹಳ್ಳಿ ಕುರುಬರಹಟ್ಟಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಐಯ್ಯನಹಳ್ಳಿ ಕುರುಬರಹಟ್ಟಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.

ಕೃಷ್ಣಮೂರ್ತಿ, ಅಂಗಡಿ ಪಾರ್ವತಮ್ಮನ ಮಗ ಮಂಜುನಾಥ, ತಿಪ್ಪೇಸ್ವಾಮಿ, ಅಂಜಿನಪ್ಪ, ಶಾರದಮ್ಮ, ಹುಚ್ಚಪ್ಪ, ಮಮತ, ತಿಪ್ಪಮ್ಮ, ಈಡಿಗರ ರುದ್ರಪ್ಪನ ಮಗಳು ರತ್ನಮ್ಮ, ಕಡ್ಲೆಪ್ಪರ ಕೆಂಚಪ್ಪ, ಚೌಡಮ್ಮ ಇವರುಗಳು ಅಂಗಡಿ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದು ಗಲಾಟೆ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಕೂಲಿ ಮಾಡಿ ಸಿಗುವ ಹಣದಲ್ಲಿ ಮದ್ಯ ಸೇವಿಸಿ ಬರುವ ಪುರುಷರು ಗ್ರಾಮದಲ್ಲಿ ಅಶಾಂತಿಯುಂಟು ಮಾಡುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮದ್ಯ ಮಾರುವವರ ವಿರುದ್ದ ಕ್ರಮ ಕೈಗೊಂಡು ಐಯ್ಯನಹಳ್ಳಿ ಕುರುಬರಹಟ್ಟಿ ಗ್ರಾಮವನ್ನು ಮದ್ಯಮುಕ್ತವನ್ನಾಗಿ ಮಾಡುವಂತೆ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಂಕರಮ್ಮ, ಜಯಣ್ಣ, ಶಿವಾನಂದಪ್ಪ ಹಾಗೂ ಗ್ರಾಮಸ್ಥರಾದ ರತ್ನಮ್ಮ, ಗುತ್ಯಮ್ಮ, ಲೋಲಮ್ಮ, ಶಂಕರಮ್ಮ, ಶಿವಮ್ಮ, ಬಿ.ರುದ್ರಮ್ಮ, ಟಿ.ಜಗದೀಶ, ನಿಂಗಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *