ಹೋರಾಟ ಎಂದಾಗ ಇಬ್ಬರ ಹೆಸರೇ ನೆನಪಾಗೋದು : ದೇವೇಗೌಡರ ಭೇಟಿ ಬಳಿಕ ವಿಜಯೇಂದ್ರ ಹೇಳಿಕೆ

1 Min Read

 

ಬೆಂಗಳೂರು: ರಾಜ್ಯಾಧ್ಯಕ್ಷನಾಗಿ ನೇಮಕಗೊಂಡ ಬಳಿಕ ಬಿವೈ ವಿಜಯೇಂದ್ರ ಅವರು ದೇವಸ್ಥಾನ, ಮಠಗಳಿಗೂ ಭೇಟಿ ನೀಡುತ್ತಿದ್ದಾರೆ. ಅದರ ಜೊತೆಗೆ ಹಿರಿಯ ನಾಯಕರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯುತ್ತಿದ್ದಾರೆ.

ಇಂದು ಮಾಜಿ ಪ್ರಧಾನಿ ದೇವೇಗೌಡರು, ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಹಿರಿಯ ಮುತ್ಸದ್ದಿಗಳಿಂದ ಸಲಹೆ, ಸೂಚನೆಗಳನ್ನು ಪಡೆಯಯವ‌ ಮಾರ್ಗದಲ್ಲಿ ಸಾಗಿದ್ದಾರೆ. ದೇವೇಗೌಡರ ಮನೆಗೆ ಭೇಟಿ ನೀಡಿ, ಹೂವಿನ ಬೊಕ್ಕೆ ಕೊಟ್ಟು ಆರೋಗ್ಯ ವಿಚಾರಿಸಿದ್ದಾರೆ‌ ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಕೂಡ ನಿವಾಸದಲ್ಲಿಯೇ ಇದ್ದು, ಸ್ವಾಗತ ಕೋರಿದ್ದಾರೆ.

 

ಈ ವೇಳೆ ಮಾತನಾಡಿದ ಬಿವೈ ವಿಜಯೇಂದ್ರ ಅವರು, ತುಂಬಾ ಸಂತೋಷವಾಗಿದೆ. ದೀಅವಳಿಯ ಶುಭ ಸಂಧರ್ಭದಲ್ಲಿ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆದಿದ್ದೇನೆ. ಬಹಳ ಸಂತೋಷ ಪಟ್ಟಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರು ಅತ್ಯುತ್ತಮ ನಿರ್ಧಾರ ಮಾಡಿದ್ದಾರೆ. ಸದಾ ನಿನ್ನ ಜೊತೆಗೆ ಇರುತ್ತೇನೆ ಎಂದಿದ್ದಾರೆ. ಅವರ ಹೋರಾಟದ ದಿನಗಳನ್ನು ಅವರು ನೆನಪು ಮಾಡಿಕಿಂಡರು.ಜೊತೆಗೆ ತಂದೆಯವರ ಹೋರಾಟದ ದಿನಗಳನ್ನು ನೆನೆದರು. ಹೋರಾಟ ಅಂತ ಹೇಳಿದಾಗ ನೆನಪಾಗುವುದು ಎರಡೇ ಹೆಸರು ಒಂದು ದೇವೇಗೌಡ ಅವರ ಹೆಸರು, ಇನ್ನೊಂದು ಬಿಎಸ್ ಯಡಿಯೂರಪ್ಪ ಅವರು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *