ಬೈರತಿ ಬಸವರಾಜ್ ನಿವಾಸಕ್ಕೆ ವಿಜಯೇಂದ್ರ ಭೇಟಿ..!

1 Min Read

ಬೆಂಗಳೂರು: ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಬೈರತಿ ಬಸವರಾಜ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭೇಟಿ ನೀಡಿದ್ದಾರೆ. ಕೆ.ಆರ್.ಪುರದಲ್ಲಿ ಬೈರತಿ ಅವರ ನಿವಾಸಕ್ಕೆ ಬಿವೈ ವಿಜಯೇಂದ್ರ ಹಾಗೂ ಅವರ ತಂಡ ಭೇಟಿ ನೀಡಿದೆ. ಪ್ರೀತಂ ಗೌಡ ಹಾಗೂ ಗೋವಿಂದ್ ಕಾರಜೋಳ ಸಾಥ್ ನೀಡಿದ್ದಾರೆ. ಅವರ ಕುಟುಂಬಕ್ಕೆ ಧೈರ್ಯವನ್ನ ತುಂಬುವ ಕೆಲಸ ಮಾಡಿದ್ದಾರೆ.

ಅತ್ತ ಬೈರತಿ ಬಸವರಾಜ್ ಅವರನ್ನು ಕೋರಮಂಗಲದಲ್ಲಿರುವ 42ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು‌. ವೈದ್ಯಕೀಯ ವರದಿಯನ್ನು ಸಲ್ಕಿಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ ಬೈರತಿ ಬಸವರಾಜ್ ಅವರ ವರದಿ ನಾರ್ಮಲ್ ಆಗಿರುವ ಕಾರಣ, ನ್ಯಾಯಾಧೀಶರು ಅವರನ್ನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಎಸ್ಪಿಪಿ ಅವರು 9 ದಿನಗಳ ಕಾಲ ಕಸ್ಟಡಿಗೆ ಕೊಡುವಂತೆ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು. ಆದರೆ ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಈ ಸಂಬಂಧ ಮುಂದಿನ ಏಳು ದಿನಗಳ ಕಾಲ ವಿಚಾರಣೆ ನಡೆಯಲಿದೆ.

ಫೆಬ್ರವರಿ 21ನೇ ತಾರೀಖಿನವರೆಗೂ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ. ತನಿಖಾಧಿಕಾರಿಗಳು ಬೈರತಿ ಬಸವರಾಜ್ ಅವರನ್ನು ಬಂಧಿಸಿದ ಬಳಿಕ ಮೆಡಿಕಲ್ ಟೆಸ್ಟ್ ಗೆ ಹಾಜರುಪಡಿಸಿದ್ದರು. ಟೆಸ್ಟ್ ವೇಳೆ ಹೃದಯ ಸಂಬಂಧಿ ಕಾಯಿಲೆ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ತಪಾಸಣೆಗೆಂದು ಬೌರಿಂಗ್ ಆಸ್ಪತ್ರೆ ವೈದ್ಯರು ಜಯದೇವ ಆಸ್ಪತ್ರೆಗೆ ಸುಯಚನೆ ನೀಡಿದ್ದರು. ಈ ವರದಿಯನ್ನು ಆಧರಿಸಿ ಜಡ್ಜ್ ಚಿಕಿತ್ಸೆಗೆ ಸೂಚನೆ ನೀಡಿದ್ದರು. ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ಬಂದಿದೆ. ಬಹುತೇಕ ಎಲ್ಲವೂ ನಾರ್ಮಲ್ ಆಗಿದ್ದ, ಹೀಗಾಗಿ ಜಡ್ಜ್ ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ಹಾಜರುಪಡಿಸಲಾಗಿತ್ತು.

Share This Article
Enable Notifications OK No thanks