Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೈತರ ಬಗ್ಗೆ ಪಣತೊಟ್ಟ ವಿಜಯೇಂದ್ರ : ಏನಂದ್ರು..?

---Advertisement---

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಇಂದು ಬಿಜೆಪಿಯಿಂದ ಬೃಹತ್ ಹೋರಾಟ ನಡೆಯುತ್ತಿದೆ. ಸರ್ಕಾರದ ವಿರುದ್ಧ ಈ ಹೋರಾಟ ನಡೆಸುತ್ತಿದ್ದಾರೆ. ಹೋರಾಟದ ನಡುವೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಕ್ಕೆ ಯತ್ನಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಹೋರಾಟಗಾರರನ್ನು ತಡೆಯುವಲ್ಲಿ ಯಶಸ್ವಿಯಾದರು. ಬಿಜೆಪಿ ನಾಯಕರ ಈ ಹೋರಾಟಕ್ಕೆ ರೈತರು ಕೂಡ ಸಾಥ್ ನೀಡಿದರು.

ಈ ಬೃಹತ್ ಹೋರಾಟವನ್ನು ತಡೆಯುವ ಉದ್ದೇಶದಿಂದ ಪೊಲೀಸರು ಬಿಗಿ ಭದ್ರತೆಯನ್ನು ನೋಡಿಕೊಳ್ಳಲಾಗಿದೆ. ಪೊಲೀಸರು ಕೂಡ ಬ್ಯಾರಿಕೇಡ್ ಹಾಕಿ ಭದ್ರತೆಯನ್ನ ಮಾಡಲಾಗಿದೆ. ಇದೆ ವೇಳೆ ಬಿವೈ ವಿಜಯೇಂದ್ರ ಅವರು ರೈತರ ಪರ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ರೈತರ ಹೋರಾಟ ಯಶಸ್ಸು ಆಗುವ ತನಕ ನಿದ್ದೆ ಮಾಡುವುದಿಲ್ಲ. ಅದೇ ರೀತಿ ನಾನು ರೈತರ ಪರ ನಿಲ್ಲುತ್ತೇನೆ. ರೈತರ ಪರ ಬಿಜೆಪಿ ಹೋರಾಟ‌ ಮಾಡುತ್ತದೆ. ಯಡಿಯೂರಪ್ಪ ಅವರು ಕೂಡ ರೈತರ ಪರ ಇದೇ ರೀತಿ ಹೋರಾಟ ಮಾಡುತ್ತಾ ಇದ್ದರು ಎಂದಿದ್ದಾರೆ.

ಸಿದ್ದರಾಮಯ್ಯ ಅವರ ಹೇಳಿಕೆಗೂ ಕೌಂಟರ್ ನೀಡಿರುವ ವಿಜಯೇಂದ್ರ ಅವರು, ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಅಂತ ಸಿದ್ದರಾಮಯ್ಯ ನಾಟಕ ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ನಾಟಕ ಮಾಡದೆ ತಕ್ಷಣವೇ ಮನೆ ಕಳೆದುಕೊಂಡು ರೈತರಿಗೆ ಐದು ಲಕ್ಷ ಪರಿಹಾರ ನೀಡಿದರು. ಇವರ ಯೋಗ್ಯತೆ ರೈತರ ಪರ ಯೋಜನೆ ಘೋಷಣೆ ಮಾಎಇಲ್ಲ. ಸಿದ್ದರಾಮಯ್ಯ 2.5 ವರ್ಷ ಸರ್ಕಾರದಲ್ಲಿ 2500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವೂ ರೈತರಿಗೆ ನ್ಯಾಯ ಒದಗಿಸುವ ತನಕ ಹೋರಾಟ ಮುಂದುವರೆಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now