ಮಡಿಕೇರಿ: ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಶುರುವಾಗಿದೆ. ರಾಜಕಾರಣಿಗಳು ಕಾರ್ಯಕ್ರಮಗಳನ್ನು ಮಾಡಲು ಶುರು ಮಾಡಿದ್ದಾರೆ. ರಾಜಕಾರಣಿಗಳ ಕಾರ್ಯಕ್ರಮ ಎಂದರೆ ಅಲ್ಲಿ ಸಾವಿರಾರು ಜನರು ಸೇರುತ್ತಾರೆ. ಸಮಾವೇಶ, ರ್ಯಾಲಿಗಳನ್ನು ಮಾಡಿದಾಗ ಜನರನ್ನು ಸೇರಿಸುವ ಟಾರ್ಗೆಟ್ ಸ್ಥಳೀಯ ನಾಯಕರಿಗೆ ಇರುತ್ತದೆ. ಹೀಗಾಗಿಯೇ ಹೆಚ್ಚು ಜನ ಸೇರುತ್ತಾರೆ. ಆದರೆ ಇಂದು ಮಡಿಕೇರಿಯಲ್ಲಿ ವಿಜಯೇಂದ್ರ ಅವರ ಕಾರ್ಯಕ್ರಮಕ್ಕೆ ಸೇರಿದ್ದ ಜನರ ನಡುವೆ ಕಳ್ಳನೊಬ್ಬ ಸೇರಿಕೊಂಡೊದ್ದಾನೆ. ಸಮಾವೇಶವನ್ನೇ ಬಂಡವಾಳ ಮಾಡಿಕೊಂಡು ಲಕ್ಷ ಲಕ್ಷ ದೋಚಿದ್ದಾನೆ.
ಮಡಿಕೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೇರಿದ ಕಾರ್ಯಕ್ರಮದಲ್ಲಿ ಹಲವು ಶಾಸಕರು ಸೇರಿದ್ದರು. ಇದೇ ಕಾರ್ಯಕ್ರಮದಲ್ಲಿ ಶಾಸಕರ ಜೇಬಿಗೇನೆ ಕತ್ತರಿ ಹಾಕಿದ್ದಾರೆ. ಮಾಜಿ ಶಾಸಕ ಅಪ್ಪಚ್ಚು ರಂಜನ್ ಸೇರಿ ಹಲವು ನಾಯಕರ ಜೇಬಿಗೆ ಕತ್ತರಿ ಬಿದ್ದಿದೆ. ಅದರಲ್ಲಿ 20 ಸಾವಿರ ರೂಪಾಯಿಯನ್ನು ಜೇಬಿನಿಂದ ಎಗರಿಸಿದ್ದಾರೆ. ಅಷ್ಟೇ ಅಲ್ಲ ಕೆ ಜಿ ಬೋಪಯ್ಯ ಅವರ ಜೇಬಿನಿಂದಾನು 25 ಸಾವಿರ ರೂಪಾಯಿ ಎಗರಿಸಿದ್ದಾರೆ.
ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಹೀಗಾಗಿ ಕಳ್ಳರಿಗೆ ಕದಿಯುವ ದಾರಿ ಸುಲಭವಾಗಿದೆ. ‘ಕಾರ್ಯಕ್ರಮದಲ್ಲಿ ನನ್ನ ಜೇಬಿನಿಂದ ಪರ್ಸ್ ಕಳ್ಳತನ ಮಾಡಲಾಗಿದೆ. ಅದರಲ್ಲಿ ಸುಮಾರು 20 ಸಾವಿರ ರೂಪಾಯಿ ಇತ್ತು. ಹೊಇದರೆ ಹೋಗಲಿ, ಆದರೆ ಕಾರ್ಡ್ ಮತ್ತು ದಾಖಲೆಗಳು ಸಿಕ್ಕರೆ ಸಾಕು ಎಂದು ಮಾಜಿ ಶಾಸಕ ಅಪ್ಪಚ್ಚು ರಂಜು ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಕಾರ್ಯಕ್ರಮದಲ್ಲಿ ಕಳ್ಳತನವಾಗಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಸಾಕಷ್ಟು ಕಳ್ಳತನಗಳು ನಡೆದಿವೆ. ಪರ್ಸ್ ಮಾತ್ರವಲ್ಲ ರಾಜಕೀಯ ಕಾರ್ಯಕ್ರಮದಲ್ಲಿ ಮೊಬೈಲ್ ಗಳನ್ನು ದೋಚಲಾಗಿದೆ.