ತುಮಕೂರು: ಜಿಲ್ಲೆಯ ಗುಬ್ಬಿಯಿಂದ ಈ ಬಾರಿ ವಿಜಯೇಂದ್ರ ಅವರು ಸ್ಪರ್ಧಿಸುತ್ತಾರೆ ಎಂಬ ಮಾತಿದೆ ಎಂದಾಗ ಬಿ ವೈ ವಿಜಯೇಂದ್ರ ಅವರು, ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತೆ. ಸದ್ಯಕ್ಕಂತು ಕೆ ಆರ್ ಪೇಟೆ ಉಪಚುನಾವಣೆಯಲ್ಲಿ ಮಂಡ್ಯದಲ್ಲಿ ಕೆಲಸ ಮಾಡಿದ್ದೆ. ಶಿರಾ ಉಪಚುನಾವಣೆ ಬಂದಾಗ ಈ ಭಾಗದಲ್ಲಿ ಕೆಲಸ ಮಾಡಿದ್ದೆ. ನಂಗೆ ಸಂತೋಷ ಮತ್ತು ಹೆಮ್ಮೆ ಇರುವುದು ಯಾವುದೇ ಕ್ಷೇತ್ರದಲ್ಲಿ ಹೋಗಿ ಕೆಲಸ ಮಾಡಿದರು ಕೂಡ ನಮ್ಮ ಕಾರ್ಯಕರ್ತರು ಜೊತೆ ಜೊತೆಗೆ ಇರುತ್ತಾರೆ.
ತುಮಕೂರಿನ ಮೇಲೆ ಅತಿ ಹೆಚ್ಚು ಪ್ರೀತಿ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಇದು ನಿನ್ನೆ ಮೊನ್ನೆಯದ್ದಲ್ಲ. ನಾವೂ ರಾಜಕಾರಣಕ್ಕೆ ಬರುವುದಕ್ಕೂ ಮುಂಚೆಯಿಂದಲೂ ತುಮಕೂರಿನ ಬಗ್ಗೆ ಪ್ರೀತಿಯಿದೆ. ನಿಮಗೆ ಗೊತ್ತಿದೆ ಬಿಎಸ್ ಯಡಿಯೂರಪ್ಪ ಅವರಿಗೆ ಸಿದ್ದಗಂಗಾ ಮಠಕ್ಕೆ, ತುಮಕೂರಿಗೆ ಅವಿನಾಭಾವ ಸಂಬಂಧ ಮುಂಚೆಯಿಂದ ಇದೆ. ನನಗೂ ಕೂಡ ಅಂದಿನಿಂದ ಬಂದಿದೆ. ಸ್ವಾಮೀಜಿಗಳ ಜನ್ಮದಿನವನ್ನು ನೆಪವಾಗಿಟ್ಟುಕೊಂಡು ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ಹೆಮ್ಮೆಯಿದೆ ನನಗೆ. ಇದು ಶ್ರೀಗಳ ಆಶೀರ್ವಾದಿಂದ ಜನ್ಮದಿನ ಅದ್ಧೂರಿಯಾಗಿ ನಡೆದಿರುವುದು ಖುಷಿ ಇದೆ ಎಂದಿದ್ದಾರೆ.
ಇನ್ನು ಸಂಪುಟದಲ್ಲಿ ಸ್ಥಾನದ ಬಗ್ಗೆ ಮಾತನಾಡಿ, ಈ ವಿಚಾರವಾಗಿ ಮುಖ್ಯಮಂತ್ರಿಗಳು ನಿನ್ನೆ ಕೇಂದ್ರ ಸಚಿವರ ಬಳಿ ಸವಿಸ್ತಾರವಾಗಿ ಚರ್ಚೆ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಯಾವುದೇ ರೀತಿಯ ಆಕಾಂಕ್ಷಿಯಲ್ಲ. ನಾನು ಹಲವಾರು ಬಾರಿ ಹೇಳಿದ್ದೇನೆ. ಯಾವ ಜವಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂಬುದು ಕೇಂದ್ರ ನಾಯಕರ ಅಪೇಕ್ಷೆ ಇದೆ ಅದನ್ನು ಕೇಂದ್ರ ಸಚಿವರು ನಿರ್ಧಾರ ಮಾಡುತ್ತಾರೆ. ಪಕ್ಷ ಮತ್ತು ಪಕ್ಷದ ನಾಯಕರು ಏನೇ ಜವಬ್ದಾರಿ ಕೊಟ್ಟರು ಅದನ್ನು ಯಶಸ್ವಿಯಾವಿ ನಿರ್ವಹಿಸುತ್ತಿದ್ದೇನೆ, ನಿರ್ವಹಿಸುತ್ತೇನೆ ಎಂದಿದ್ದಾರೆ.