ಬೆಂಗಳೂರು: ರಾಜ್ಯದಲ್ಲಿ ಸದ್ಯ ಆರ್ ಎಸ್ ಎಸ್ ಕಾರ್ಯಕ್ರಮಗಳು ನಿರ್ಬಂಧದ ವಿಚಾರ ಸಾಕಷ್ಟು ಸದ್ದು ಮಾಡ್ತಾ ಇದೆ. ಅದರಲ್ಲೂ ಪ್ರಿಯಾಂಕ್ ಖರ್ಗೆ ಪತ್ರ ಬರೆದ ಮೇಲಂತು ಚರ್ಚೆಗಳು ಜೋರಾಗಿವೆ. ಇತ್ತೀಚೆಗಷ್ಟೇ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಕ್ಷೇತ್ರ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನವನ್ನ ನಿಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇದೀಗ ಬಿವೈ ವಿಜಯೇಂದ್ರ ಅವರು ಸವಾಲೊಂದನ್ನ ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಆರ್ ಎಸ್ ಎಸ್ ಟೀಕೆ ಮಾಡುವ ದುರ್ಬುದ್ದಿ ಅದ್ಯಾಕೆ ಬಂದಿದೆಯೋ ಗೊತ್ತಿಲ್ಲ. ಆರ್ ಎಸ್ ಎಸ್ ಟೀಕೆ ಮಾಡ್ತಿರೋದು ಪ್ರಚಾರಕ್ಕೋ ಅಥವಾ ಸಿಎಂ ಖುರ್ಚಿಗೆ ಟವೆಲ್ ಹಾಕುವುದಕ್ಕೋ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೇಳಿದ ಹಾಗೆ ಪ್ರಿಯಾಂಕ್ ಖರ್ಗೆ ಏಕಾಂಗಿಯಾಗಿದ್ದಾರೆ. ಗಾಂಧಿ ಕುಟುಂಬದಿಂದಲೇ ಆರ್ ಎಸ್ ಎಸ್ ಮಣಿಸುವುದಕ್ಕೆ ಆಗಲಿಲ್ಲ. ಇಂತಹ ಹೇಳಿಕೆ ನಿತ್ಯ ಕೊಡುವ ಮೂಲಕ ವಾಸ್ತವಿಕ ಸತ್ಯ ಮರೆ ಮಾಚುವ ಕೆಲಸವನ್ನ ಕಾಂಗ್ರೆಸ್ ಮಾಡ್ತಿದೆ. ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳುವುದಕ್ಕೆ ಆರ್ ಎಸ್ ಎಸ್ ಟೀಕೆ ಮಾಡ್ತಿದ್ದಾರೆ. ಚಿತ್ತಾಪುರದಲ್ಲಿ ನವೆಂಬರ್ 2 ರಂದು ಆರ್ ಎಸ್ ಎಸ್ ಪಥ ಸಂಚಲನ ನಡೆದೇ ನಡೆಯುತ್ತದೆ ಎಂದಿದ್ದಾರೆ.
ಚಿತ್ತಾಪುರದಲ್ಲಿ 2ನೇ ತಾರೀಖು RSS ಪಥ ಸಂಚಲನ ನಡೆದೇ ನಡೆಯುತ್ತೆ. ಹೈಕೋರ್ಟ್ ಕೂಡ ಹೇಳಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗ್ತಿದೆ. ಹಾಗೇ ಚಿತ್ತಾಪುರದಲ್ಲಿ ನಡೆಯುತ್ತದೆ. ಪ್ರಿಯಾಂಗ್ ಖರ್ಗೆ ಹೀಗೆ ಟೀಕೆ ಮಾಡಿ RSS ಅವಹೇಳನ ಮಾಡೋದು ಸರಿಯಲ್ಲ. RSS ಇಂತಹ ಅನೇಕ ಅಗ್ನಿ ಪರೀಕ್ಷೆ ಎದುರಿಸಿದೆ. RSS ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡದೇ ಸಮಾಜ ಸೇವೆ ಕೆಲಸ ಮುಂದುವರೆಸಿಕೊಂಡು ಹೋಗ್ತಿದೆ ಎಂದಿದ್ದಾರೆ.






