ದರ್ಶನ್ ಅಭಿಮಾನಿಗಳಲ್ಲಿ ವಿಜಯಲಕ್ಷ್ಮೀ ಮನವಿ : ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೇನು..?

suddionenews
1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಹದಿನೇಳು ಮಂದಿ ಜೈಲು ಪಾಲಾಗಿದ್ದಾರೆ. ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಗಂಡನನ್ನು ಬಿಡಿಸಲು ವಿಜಯಲಕ್ಷ್ಮೀ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

ವಿಜಯಲಕ್ಷ್ಮೀ ದರ್ಶನ್ ಮಾಡಿರುವ ಪೋಸ್ಟ್ ಹೀಗಿದೆ:

‘ಪ್ರೀತಿಯ ಸೆಲೆಬ್ರೆಟಿಗಳೇ ದರ್ಶನ್ ಅವರಿಗೆ ನೀವೂ ಎಂದರೆ ಅಪಾರವಾದ ಪ್ರೀತಿ. ನೀವೂ ಅವರನ್ನು ಪ್ರೀತಿಸಿದಷ್ಟೇ ಅವರು ನಿಮ್ಮನ್ನು ತಮ್ಮ ಹೃದಯದಲ್ಲಿಯೇ ಇಟ್ಟುಕೊಂಡಿದ್ದಾರೆ. ಅದು ನಿಮಗೂ ಗೊತ್ತು. ಇದೊಂದು ಪರೀಕ್ಷೆಯ ಸಮಯವಾಗಿದೆ. ನನಗೆ, ನಿಮಗೆ, ನಮ್ಮೆಲ್ಲರಿಗೂ. ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೇನೆ. ತಾಳ್ಮೆಯಿಂದ ಇರೋಣಾ. ನಿಮ್ಮ ಆತಂಕವನ್ನು ನಾನು ದರ್ಶನ್ ಅವರಿಗೆ ತಿಳಿಸಿದ್ದೇನೆ. ಅವರು ನಿಮ್ಮಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ನಮಗೆ ನಮ್ಮ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ಕೂಡ ಇದೆ. ಇಂತಹ ಕಷ್ಟದ ಸಮಯದಲ್ಲಿ, ದರ್ಶನ್ ಅವರ ಅನುಪಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು, ಕೇಡು ಮಾಡುವವರನ್ನು ತಾಯಿ ಚಾಮುಂಡೇಶ್ವರಿಯೇ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮರಳಿ ಬರಯತ್ತದೆ. ಸತ್ಯ ಮೇವ ಜಯತೇ’ ಎಂದು ಪೋಸ್ಟ್ ಹಾಕಿದ್ದಾರೆ. ಬೆಟ್ಟದ ಮೇಲೆ ಡಿ ಬಾಸ್ ಎಂದು ಬರೆದಿರುವ ಬಾವುಟ ಹಾರಾಡುತ್ತಿದೆ. ಕೆಳಗಿನಿಂದ ಅಭಿಮಾನಿಗಳು ಬೆಟ್ಟದತ್ತ ಹತ್ತುತ್ತಿದ್ದಾರೆ. ದರ್ಶನ್ ಕೈ ಮಾತ್ರ ಚಿತ್ರದಲ್ಲಿ ಕಾಣಿಸುತ್ತಾ ಇದ್ದು, ಕೈ ಹಿಡಿದು ಕರೆದುಕೊಂಡು ಹೋಗುವ ರೀತಿ ಚಿತ್ರವಿದೆ. ಈ ಫೋಟೋ ಹಾಕಿ, ಅಭಿಮಾನಿಗಳಿಗೆ ವಿಜಯಲಕ್ಷ್ಮೀ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *