ಪವಿತ್ರಾಗೌಡಗೆ ಕಾನೂನು ಎಚ್ಚರಿಕೆ ನೀಡಿದ ವಿಜಯಲಕ್ಷ್ಮಿ ದರ್ಶನ್ : ಫೋಟೋ ವಾರ್ ಶುರುವಾಗಲೂ ಕಾರಣವೇನು..?

1 Min Read

 

ಬೆಂಗಳೂರು: ಬೆಳ್ ಬೆಳಗ್ಗೆನೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವಾರ್ ಶುರುವಾಗಿದೆ. ಅದುವೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ನಡುವೆ. ಹಳೆಯ ಫೋಟೋಗಳನ್ನೆಲ್ಲಾ ಒಂದು ಮಾಡಿ ಪವಿತ್ರಾ ಗೌಡ ವಿಡಿಯೋ ಮಾಡಿ ಹಾಕಿದ್ದು, ಇದಕ್ಕೆ ಆಕ್ರೋಶಗೊಂಡ ವಿಜಯಲಕ್ಷ್ಮೀ ಕಾನೂನು ಕ್ರಮದ ಎಚ್ಚರಕೆ ನೀಡಿದ್ದಾರೆ.

ನಿನ್ನೆ ರಾತ್ರಿ ವಿಜಯಲಕ್ಷ್ಮಿ ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ಮಗ ಹಾಗೂ ದರ್ಶನ್ ಜೊತೆಗೆ ಇರುವ ಫೋಟೋ. ಇದು ನಾವು, ನಮ್ಮ ಒಬ್ಬ ಮಗ, ನನ್ನ ಕುಟುಂಬವೇ ನನಗೆ ಎಲ್ಲಾ ಎಂದು ಕ್ಯಾಪ್ಶನ್ ಕೂಡ ನೀಡಿದ್ದರು. ಈ ಫೋಟೋಗಳನ್ನು ಹಾಕಿದ್ದ ಕೆಲವೇ ಗಂಟೆಗಳಲ್ಲಿ ಪವಿತ್ರಾ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವಿಡಿಯೋ ಹಾಕಿದ್ದಾರೆ

ದರ್ಶನ್ ಜೊತೆಗೆ ಆತ್ಮೀಯವಾಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಪವಿತ್ರಾ ಗೌಡ, ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ ಎಂದು ಬರೆದಿದ್ದಾರೆ. ಈ ಫೋಟೋ ಬಳಿಕ ವಿಜಯಲಕ್ಷ್ಮಿ ಕೋಪಗೊಂಡಿದ್ದಾರೆ. ಇದಕ್ಕೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ‌.

‘ಈ ಮಹಿಳೆ ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ತನ್ನ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ. ಪುರುಷ, ವಿವಾಹಿತನೆಂದು ತಿಳಿದುಕೊಂಡು ಅವರು ತಮ್ಮ ವೈಯಕ್ತಿಕ ಅಗತ್ಯತೆಗಳು ಮತ್ತು ಕಾರ್ಯಸೂಚಿಗಾಗಿ ಇನ್ನೂ ಬಂದು ಉಳಿಯಲು ಆಯ್ಕೆ ಮಾಡುತ್ತಾರೆ. ಈ ಚಿತ್ರಗಳು ಖುಶಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಎಂದು ಸ್ಪಷ್ಟವಾಗಿ ತೋರಿಸುತ್ತವೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ತೆಗೆದುಕೊಳ್ಳುವುದಿಲ್ಲ ಆದರೆ ಈಗ ನನ್ನ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಕುಟುಂಬ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಲವರನ್ನು ಟ್ಯಾಗ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *