ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್ ಸಿನಿಮಾ ಬರಲಿದೆ ಎಂಬ ಮಾತು ಪದೇ ಪದೇ ಕೇಳಿ ಬರ್ತಾ ಇತ್ತು. ಕಡೆಗೂ ಅದಕ್ಕೊಂದು ಗಳಿಗೆ ಕೂಡ ಕೂಡಿ ಬಂದಿದೆ. ಸದ್ಯ ಸಿನಿಮಾದ ಕೆಲಸಗಳು ಶುರುವಾಗಿದೆ. ಕರ್ನಾಟಕದ 24ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧರಿತ ಕಥೆಯ ಸಿನಿಮಾ ಶುರುವಾಗಿದೆ.
ಗಂಗಾವತಿ ಮೂಲದ ಹಯಾದ್ ಪಿರ್ ಎಂಬುವವರು ಈ ಸಿನಿಮಾ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪಾತ್ರವನ್ನು ತಮಿಳಿನ ವಿಜಯ್ ಸೇತುಪತಿ ಮಾಡಲಿದ್ದಾರೆ ಎಂಬ ಮಾತುಗಳು ಓಡಾಡುತ್ತಿವೆ. ವಿಜಯ್ ಸೇತುಪತಿ ಕೂಡ ಸಿದ್ದರಾಮಯ್ಯ ಪಾತ್ರ ಮಾಡುವುದಕ್ಕೆ ಓಕೆ ಎಂದಿದ್ದಾರಂತೆ.
ವಿಜಯ್ ಸೇತುಪತಿ ಅವರು ಸಿನಿಮಾದಲ್ಲಿ 20-30 ನಿಮಿಷಗಳ ಕಾಲ ಬರಲಿದ್ದಾರೆ. ಇನ್ನು ಬಾಲ್ಯ ಹಾಗೂ ಪ್ರೌಢಾವಸ್ಥೆಯ ಪಾತ್ರವನ್ನು ಹೊಸಬರು ನಿರ್ವಹಿಸಲಿದ್ದಾರೆ. ಗೌರಿಬಿದನೂರು ಮೂಲದ ಸತ್ಯ ರತ್ನಂ ಎಂಬುವವರು ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈಗಾಗಲೇ ಫೈನಲ್ ಪ್ರಿ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆಯಂತೆ.