ವಿಜಯ್ ಮಲ್ಯ ದೇಶಕ್ಕೆ ಮಾಡಿರುವ ಮೋಸ ಒಂದೆರಡು ಕೋಟಿಯಲ್ಲ ಬರೋಬ್ಬರಿ 9 ಸಾವಿರ ಕೋಟಿ. ಸಾಲ ಕೊಟ್ಟ ಬ್ಯಾಂಕ್ ಗಳು ಕೂಡ ವಸೂಲಿ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟರು ಅದು ಸಾಧ್ಯವಾಗಲಿಲ್ಲ. ಮಲ್ಯ ಮಾತ್ರ ಎಷ್ಟೇ ಸಾವಿರ ಕೋಟಿ ಸಾಲವಿದ್ದರು, ಡೋಂಟ್ ಕೇರ್ ಎಂಬಂತೆ ವಿದೇಶದಲ್ಲಿ ವಾಸವಾಗಿದ್ದಾರೆ. ರಾಯಲ್ ಲೈಫ್ ಲೀಡ್ ಮಾಡುತ್ತಿದ್ದಾರೆ.
ಆದ್ರೆ ಮಲ್ಯ ಮಾಡಿದ ಮೋಸದ ಜಾಲದ ಬಗ್ಗೆ ಸಿನಿಮಾ ಮಾಡಲು ಸಾಕಷ್ಟು ಜನ ಪ್ರಯತ್ನ ಪಟ್ಟಿದ್ದಾರೆ. ಆದ್ರೆ ಆಗಿರಲಿಲ್ಲ. ಇದೀಗ ಮತ್ತೆ ಸಿನಿಮಾ ತಯಾರಿ ನಡೆದಿದ್ದು, ಟೈಟಲ್ ಕೂಡ ರಿವೀಲ್ ಆಗಿದೆ. ಲೇಟೆಸ್ಟ್ ವಿಚಾರ ಏನಪ್ಪ ಅಂದ್ರೆ ಮಲ್ಯ ಮಾಡಿರುವ ಮೋಸದ ಜಾಲದ ಕಥೆಯನ್ನು ಬಾಲಿವುಡ್ ಹೆಣೆಯುತ್ತಿದೆ. ಸಿನಿಮಾಗೆ ಫೈಲ್ ನಂಬರ್ 323 ಎಂದು ಟೈಟಲ್ ಇಡಲಾಗಿದೆ.
ಕಾರ್ತಿಕ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಮಲ್ಯ ಅವರ ಜೀವನ ಚರಿತೆ, ಲೈಫ್ ಸ್ಟೈಲ್, ಸ್ಕ್ಯಾಮ್ ಇತ್ಯಾದಿ.. ಇತ್ಯಾದಿ ವಿಚಾರಗಳನ್ನು ರೋಚಕವಾಗಿ ಎಣೆಯಲು ತಯಾರಾಗಿದ್ದಾರೆ. ದೇಶಕ್ಕೆ ವಿಜಯ್ ಮಲ್ಯ ಮಾತ್ರ ಮೋಸ ಮಾಡಿರುವುದಲ್ಲ. ನೀರವ್ ಮೋದಿ, ಲಲಿತ್ ಮೋದಿ ಕೂಡ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರುಗಳ ಸ್ಕ್ಯಾಮ್ ಕೂಡ ಇರಲಿದೆ.