ಸುದ್ದಿಒನ್, ಬೆಂಗಳೂರು : ವಿಜಯಮಲ್ಯ ಭಾರತೀಯ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ, ಭಾರತದಿಂದ ಪಲಾಯನ ಮಾಡಿದ್ದಾರೆ. ಸದ್ಯಕ್ಕೆ ಲಂಡನ್ ನಲ್ಲಿ ನೆಲೆಸಿದ್ದಾರೆ. ಇದರ ನಡುವೆ ಇದೀಗ ದಸರಾ ಹಬ್ಬವನ್ನು ನೆನೆಸಿಕೊಂಡಿದ್ದಾರೆ. ಜೊತೆಗೆ ದೇಶದ ಜನತೆಗೆ ದಸರಾ ಹಬ್ಬದ ವಿಶ್ ಮಾಡಿದ್ದಾರೆ.
Happy Dusshera to all
— Vijay Mallya (@TheVijayMallya) October 23, 2023
— Motivational Panktiyaan (@mpanktiya) October 24, 2023
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ವಿಜಯ್ ಮಲ್ಯ, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ. ಈ ಶುಭಾಶಯದಿಂದ ವಿಜಯ್ ಮಲ್ಯ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ವಿಜಯ್ ಮಲ್ಯ ಈ ಮೊದಲೇನು ಅಲ್ಲ, ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಠಮಿ, ಓಣಂ ಹೀಗೆ ಹಲವು ಹಬ್ಬಗಳಿಗೂ ವಿಶ್ ಮಾಡಿದ್ದಾರೆ.
— Chhichhaledar (@chhichhaledar) October 24, 2023
ಆದರೆ ವಿಜಯ್ ಮಲ್ಯ ಅವರ ದಸರಾ ವಿಶ್ ಗೆ ತರಹೇವಾರಿ ಕಮೆಂಟ್ ಗಳು ಬಂದಿವೆ. ವಿಜಯ್ ಮಲ್ಯ ಅವರು ಟ್ವೀಟ್ ಮಾಡಿದ ಇಂದು ಬ್ಯಾಂಕ್ ರಜೆ ಇದೆ. ಬ್ಯಾಂಕ್ ರಜೆ ಇರುವಾಗಲೇ ವಿಜಯ್ ಮಲ್ಯ ಟ್ವೀಟ್ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳಿಗೆ ಹೇಳುತ್ತಿದ್ದಾರೆ ಎಂಬ ಮೂಲಕ ಟ್ರೋಲ್, ಮೀಮ್ಸ್ ಮಾಡಿದ್ದಾರೆ.






