ಚಿತ್ರದುರ್ಗದ ವಿದ್ಯಾವಿಕಾಸ ಶಾಲೆಯಲ್ಲಿ “ಸ್ವಚ್ಛತಾ ಪಕ್ವಾಡ” ಜಾಗೃತಿ ಕಾರ್ಯಕ್ರಮ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.16 :ನಗರದ ವಿದ್ಯಾವಿಕಾಸ ಶಾಲೆಯಲ್ಲಿ ಕೇಂದ್ರಸರ್ಕಾರದ ಆದೇಶದನ್ವಯ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಚಟುವಟಿಕೆಗಳನ್ನು ಯೋಜನಾತ್ಮಕವಾಗಿ ನಡೆಸಲಾಯಿತು.

ಕಾರ್ಯಕ್ರಮದ ರೂಪುರೇಷೆಯೊಂದಿಗೆ 1ನೇ ಸೆಪ್ಟಂಬರ್ 2023 ರಂದು “ಸ್ವಚ್ಛತಾ ಸಪ್ತಾಹ ದಿನ ಅಂಗವಾಗಿ ಬೆಳಗಿನ ಶಾಲಾ ಪ್ರಾರ್ಥನಾ ಸಭೆಯಲ್ಲಿ ಸ್ವಚ್ಛತಾ ಪಕ್ವಾಡದ ಉದ್ದೇಶ ಮತ್ತು ಮಹತ್ವದ ಬಗೆಗಿನ ಅರಿವು ಮೂಡಿಸುವ ಪೀಠಿಕೆಯನ್ನು ಶಿಕ್ಷಕರಾದ ಎನ್.ಜಿ. ತಿಪ್ಪೇಸ್ವಾಮಿಯವರು ನೆರವೇರಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಶಿಕ್ಷಕರಾದ ಶ್ರೀ ಆರಿಫ್‍ರವರು ಬೋಧಿಸಿದರು.

ವಿದ್ಯಾರ್ಥಿಗಳೆಲ್ಲರೂ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳುವ ಮೂಲಕ ಆರಂಭವಾದ ಸಪ್ತಾಹ, “ಸ್ವಚ್ಛತಾ ಅರಿವು ದಿನ”,”ಹಸಿರು ಶಾಲೆ ದಿನ”,”ಸ್ವಚ್ಛತಾ ಭಾಗಿ ದಿನ”, “ಕರ ಸ್ವಚ್ಛತಾ ದಿನ” ಎಂಬಿತ್ಯಾದಿ ದಿನಗಳ ಅಡಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ “ಸ್ವಚ್ಛತೆ ಮತ್ತು ವೈಯಕ್ತಿಕ ಕಾಳಜಿ” ಹಾಗೂ ಸಮುದಾಯ ಭಾಗಿತ್ವಕ್ಕೆ ಸಹಕರಿಸುವಂತೆ, ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಸ್ವಚ್ಛತೆಯ ಬಗೆಗಿನ ಅರುವು ಮೂಡಿಸುವ ಕಾರ್ಯಕ್ರಮ, ಜಾಥಾ, ಪ್ರಬಂಧ ರಚನೆ, ಕವನ ರಚನೆ ಮತ್ತು ಚಿತ್ರ ರಚನೆಯ ವಿವಿಧ ಸ್ಪರ್ಧೆಗಳನ್ನು ಶಾಲೆಯಲ್ಲಿ ಏರ್ಪಡಿಸಿ ಸ್ವಚ್ಛತೆಯ ಬಗೆಗಿನ ಅರಿವು ಮೂಡಿಸಲಾಯಿತು.

ದಿನಾಂಕ : 15 – 09 – 2023 ರಂದು “ಪ್ರಶಸ್ತಿ ಪ್ರಧಾನ ದಿನ”ವನ್ನು ಆಚರಿಸುವ ಅಂಗವಾಗಿ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸುವ ಕಾರ್ಯವನ್ನು ಮಾಡುವುದರೊಂದಿಗೆ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.

ಪ್ರಸ್ತುತ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮದ ಈ ಎಲ್ಲಾ ಚಟುವಟಿಕೆಗಳನ್ನು ಶಾಲೆಯಲ್ಲಿ ಹಮ್ಮಿಕೊಂಡು ಸಮುದಾಯದ ಸಂಪರ್ಕ ಹಾಗೂ ನೈರ್ಮಲ್ಯೀಕರಣದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯವನ್ನು ಕೈಗೊಂಡ ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕರಾದ ಎಂ.ಟಿ.ಬಸವಂತಕುಮಾರ್ ಅವರಿಗೆ   ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ||.ಸ್ವಾಮಿ.ಕೆ.ಎನ್ ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ.ಸಿ.ಡಿ.ಸಂಪತ್‍ಕುಮಾರ್ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ  ವೃಂದ, ಅಭಿನಂದನೆಗಳನ್ನು ಸಲ್ಲಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾಳೆ ಬೆಂಗಳೂರು ಬಂದ್ ಏನಿರುತ್ತೆ..? ಏನಿರಲ್ಲ..?

  ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ, ನಾಳೆ ಬೆಂಗಳೂರು ಬಂದ್ ಮಾಡಲು ರೈತ ಸಂಘಟನೆ, ಬಿಜೆಪಿ ನಾಯಕರು, ಕನ್ನಡಪರ ಸಂಘಟನೆ, ಜೆಡಿಎಸ್ ನಾಯಕರು ಸೇರಿದಂತೆ ಹಲವು ಸಂಘಟನೆಗಳು ನಿರ್ಧರಿಸಿವೆ. ಈಗಾಗಲೇ ಮಂಡ್ಯ

ವಯನಾಡ್ ಬದಲಿಗೆ ಹೈದರಾಬಾದ್ ನಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸವಾಲು

  ಸುದ್ದಿಒನ್, ಹೈದರಾಬಾದ್ : ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಯನಾಡ್ ಬದಲಿಗೆ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. ದೊಡ್ಡ ದೊಡ್ಡ

ಕುಂಚಿಟಿಗ ಜಾತಿಯನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು : ರಾಜ್ಯ ಸರ್ಕಾರ ಸೇರಿದಂತೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಶ್ರೀ ಶಾಂತವೀರ ಮಹಾಸ್ವಾಮೀಜಿ

  ಸುದ್ದಿಒನ್, ಹೊಸದುರ್ಗ : ಕುಂಚಿಟಿಗ ಸಮಾಜದ  ಸಂಘಟನೆ ಸಂಸ್ಕಾರ ಸಾಮಾಜಿಕ ನ್ಯಾಯವನ್ನು ಮೀಸಲಾತಿ ಸೌಲಭ್ಯ ಕಲ್ಪಿಸುವ ಸಕಾರಾತ್ಮಕ ಸಂಕಲ್ಪದೊಂದಿಗೆ 1990 ರಿಂದ ಶ್ರೀ ಸಂಗಮೇಶ್ವರ ಜಯಂತ್ಯೋತ್ಸವ ಹಾಗೂ ಕುಂಚಿಟಿಗ ಸಮಾವೇಶ ನಡೆಸುತ್ತ ನಿರಂತರ

error: Content is protected !!