ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.16 :ನಗರದ ವಿದ್ಯಾವಿಕಾಸ ಶಾಲೆಯಲ್ಲಿ ಕೇಂದ್ರಸರ್ಕಾರದ ಆದೇಶದನ್ವಯ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಚಟುವಟಿಕೆಗಳನ್ನು ಯೋಜನಾತ್ಮಕವಾಗಿ ನಡೆಸಲಾಯಿತು.
ಕಾರ್ಯಕ್ರಮದ ರೂಪುರೇಷೆಯೊಂದಿಗೆ 1ನೇ ಸೆಪ್ಟಂಬರ್ 2023 ರಂದು “ಸ್ವಚ್ಛತಾ ಸಪ್ತಾಹ ದಿನ ಅಂಗವಾಗಿ ಬೆಳಗಿನ ಶಾಲಾ ಪ್ರಾರ್ಥನಾ ಸಭೆಯಲ್ಲಿ ಸ್ವಚ್ಛತಾ ಪಕ್ವಾಡದ ಉದ್ದೇಶ ಮತ್ತು ಮಹತ್ವದ ಬಗೆಗಿನ ಅರಿವು ಮೂಡಿಸುವ ಪೀಠಿಕೆಯನ್ನು ಶಿಕ್ಷಕರಾದ ಎನ್.ಜಿ. ತಿಪ್ಪೇಸ್ವಾಮಿಯವರು ನೆರವೇರಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಶಿಕ್ಷಕರಾದ ಶ್ರೀ ಆರಿಫ್‍ರವರು ಬೋಧಿಸಿದರು.
ಚಿತ್ರದುರ್ಗದ ವಿದ್ಯಾವಿಕಾಸ ಶಾಲೆಯಲ್ಲಿ
"ಸ್ವಚ್ಛತಾ ಪಕ್ವಾಡ" ಜಾಗೃತಿ ಕಾರ್ಯಕ್ರಮ pic.twitter.com/5FwUrOELEa— suddione-kannada News (@suddione) September 16, 2023
ವಿದ್ಯಾರ್ಥಿಗಳೆಲ್ಲರೂ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳುವ ಮೂಲಕ ಆರಂಭವಾದ ಸಪ್ತಾಹ, “ಸ್ವಚ್ಛತಾ ಅರಿವು ದಿನ”,”ಹಸಿರು ಶಾಲೆ ದಿನ”,”ಸ್ವಚ್ಛತಾ ಭಾಗಿ ದಿನ”, “ಕರ ಸ್ವಚ್ಛತಾ ದಿನ” ಎಂಬಿತ್ಯಾದಿ ದಿನಗಳ ಅಡಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ “ಸ್ವಚ್ಛತೆ ಮತ್ತು ವೈಯಕ್ತಿಕ ಕಾಳಜಿ” ಹಾಗೂ ಸಮುದಾಯ ಭಾಗಿತ್ವಕ್ಕೆ ಸಹಕರಿಸುವಂತೆ, ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಸ್ವಚ್ಛತೆಯ ಬಗೆಗಿನ ಅರುವು ಮೂಡಿಸುವ ಕಾರ್ಯಕ್ರಮ, ಜಾಥಾ, ಪ್ರಬಂಧ ರಚನೆ, ಕವನ ರಚನೆ ಮತ್ತು ಚಿತ್ರ ರಚನೆಯ ವಿವಿಧ ಸ್ಪರ್ಧೆಗಳನ್ನು ಶಾಲೆಯಲ್ಲಿ ಏರ್ಪಡಿಸಿ ಸ್ವಚ್ಛತೆಯ ಬಗೆಗಿನ ಅರಿವು ಮೂಡಿಸಲಾಯಿತು.
ದಿನಾಂಕ : 15 – 09 – 2023 ರಂದು “ಪ್ರಶಸ್ತಿ ಪ್ರಧಾನ ದಿನ”ವನ್ನು ಆಚರಿಸುವ ಅಂಗವಾಗಿ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸುವ ಕಾರ್ಯವನ್ನು ಮಾಡುವುದರೊಂದಿಗೆ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.
ಪ್ರಸ್ತುತ “ಸ್ವಚ್ಛತಾ ಪಕ್ವಾಡ – 2023” ಕಾರ್ಯಕ್ರಮದ ಈ ಎಲ್ಲಾ ಚಟುವಟಿಕೆಗಳನ್ನು ಶಾಲೆಯಲ್ಲಿ ಹಮ್ಮಿಕೊಂಡು ಸಮುದಾಯದ ಸಂಪರ್ಕ ಹಾಗೂ ನೈರ್ಮಲ್ಯೀಕರಣದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯವನ್ನು ಕೈಗೊಂಡ ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕರಾದ ಎಂ.ಟಿ.ಬಸವಂತಕುಮಾರ್ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ||.ಸ್ವಾಮಿ.ಕೆ.ಎನ್ ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ.ಸಿ.ಡಿ.ಸಂಪತ್‍ಕುಮಾರ್ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ಅಭಿನಂದನೆಗಳನ್ನು ಸಲ್ಲಿಸಿದರು.