ಗಾಂಧಿನಗರ: ಮೊರ್ಬಿ ಸೇತುವೆ ಕುಸಿತದಿಂದಾಗಿ ನೂರಾರು ಜನ ಸಾವನ್ನಪ್ಪಿದ್ದಾರೆ. ಇದೀಗ ಈ ರೀತಿ ದುರ್ಘಟನೆ ನಡೆಯೋದಕ್ಕೆ ಆ ಹುಡುಗರು ಮಾಡಿದ ಅವಾಂತರವೇ ಕಾರಣ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ 15-20 ಹುಡುಗರ ಉದ್ದೇಶಪೂರ್ವಕದಿಂದ ಮಾಡಿರುವುದು ಎಂದಿದ್ದಾರೆ.
Video Shows People Shaking Morbi Cable Bridge Moments Before it Collapsed#Morbibridgecollapse #Morbi #Gujaratbridgecollapse #Viralvideo #Morbideathtoll pic.twitter.com/ekzGy7imgi
— India.com (@indiacom) October 31, 2022
ಮೊರ್ಬಿ ಕುಸಿತದಿಂದಾಗಿ 132 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 15-20 ಕಿಡಿಗೇಡಿಗಳು ಹಗ್ಗವನ್ನು ಹಿಡಿದು ಜಗ್ಗಾಡಿದ್ದಾರೆ. ಈ ವೇಳೆ ಸೇತುವೆ ಕುಸಿಯುವುದಕ್ಕೂ ಮುನ್ನ ಜೋರಾಗಿ ಸೌಂಡು ಬಂತು. ಮೊದಲಿಗೆ ನಾನಿ ಬಿದ್ದೆ.
ಕೆಳಗೆ ಬಿದ್ದ ಕೂಡಲೇ ನಾನು ರೋಪ್ ಹಿಡಿದುಕೊಂಡೆ. ನನ್ನ ಜೊತೆಗೆ ನನ್ನ ಸ್ನೇಹಿತ ಸೇರಿ, ಏಳು ಜನ ಬಿದ್ದರು. ರೋಪ್ ವೇ ಹಿಡಿದು ಮೇಲಕ್ಕೆ ಬಂದೆವು. ಘಟನೆ ವೇಳೆ ನನ್ನ ಬೆನ್ನು ಮತ್ತು ಮೂಳೆಗೆ ತುಂಬಾ ಗಾಯವಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದಿದ್ದಾರೆ.
ಇನ್ನು ಈ ಘಟನೆ ಭಾನುವಾರ ಸಂಜೆ 6.30ಕ್ಕೆ ನಡೆದಿದೆ. ಸದ್ಯ ಇನ್ನು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರತ್ಯಕ್ಷದರ್ಶಿ ಹೇಳಿರುವ ಹೇಳಿಕೆಯಂತೆ ಆ ವಿಡಿಯೋವೊಂದು ವೈರಲ್ ಆಗಿದೆ.