ಕಳೆದ ಎರಡ್ಮೂರು ತಿಂಗಳಿನಿಂದ ಇರಾನ್ ನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿತ್ತು. ಎಲ್ಲಿ ನೋಡಿದರು ಪ್ರತಿಭಟನೆಗಳು, ಎಲ್ಲಿ ನೋಡಿದರು ಬೆಂಕಿ, ದಟ್ಟವಾದ ಹೊಗೆಯೇ ಕಾಣಿಸುತ್ತಿತ್ತು. ಮಹಿಳೆಯರು ತಮ್ಮ ಹಕ್ಕು ಪಡೆಯುವುದಕ್ಕಾಗಿ ಚಂಡಿ ಚಾಮುಂಡಿಯರಾಗಿ ನಿಂತು ಬಿಟ್ಟಿದ್ದರು. ಇದೀಗ ಅವರ ಹೋರಾಟಕ್ಕೆ ಇರಾನ್ ಸರ್ಕಾರ ಕಡೆಗೂ ಮಹಿಳೆಯರ ಹೋರಾಟಕ್ಕೆ ಮಣಿದಿದೆ.

ಹಿಜಾಬ್ ವಿರೋಧಿಸಿ ಮಹಿಳೆಯರು ಬೀದಿ ಬೀದಿಯಲ್ಲಿ ಕೂದಲು ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರ ಮೇಲೆ ವಿಧಿಸಲಾಗಿದ್ದ ವಸ್ತ್ರ ಸಂಹಿತೆ ಕಾನೂನಿನಿಂದ ಬಂಧಿತರಾಗಿದ್ದ ಅಮಿನಿ ಸಾವಿನ ಬಳಿಕ ಆಕ್ರೋಶ ಮತ್ತಷ್ಟು ಭುಗಿಲೆದ್ದಿತ್ತು. ಪ್ರತಿಭಟನೆಯ ಕಾವು ಜಾಸ್ತಿಯಾಗಿತ್ತು. ಆದರೂ ಸರ್ಕಾರ ತನ್ನ ಕಾನೂನಿಂದ ಹಿಂದೆ ಸರಿದಿರಲಿಲ್ಲ. ಆದ್ರೆ ಇದೀಗ ಕೋಪ, ಆಕ್ರೋಶ ಹೆಚ್ಚಾದ ಮೇಲೆ ಸರ್ಕಾರ ಮಹಿಳಾ ಮಣಿಗಳ ಹೋರಾಟಕ್ಕೆ ಮಣಿದಿದೆ.

ನೈತಿಕ ಪೊಲೀಸ್ ಗಿರಿಯನ್ನು ಇದೀಗ ಸರ್ಕಾರ ರದ್ದುಗೊಳಿಸಿದೆ. ನೈತಿಕ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಅದನ್ನು ರದ್ದುಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ತಿಳಿಸಿದ್ದಾರೆ. 15 ವರ್ಷಗಳಿಂದಾನು ಹಿಜಾಬ್ ಉಲ್ಲಂಘನೆಯನ್ನು ತಡೆಯಲು ಮಹಿಳೆಯರನ್ನು ಬಂಧಿಸುವುದನ್ನು ಆರಂಭಿಸಿದ್ದರು. ಇದೀಗ ಮಹಿಳೆಯರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

