Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರೈತರ ಹೋರಾಟಕ್ಕೆ ಜಯ : ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸರ್ಕಾರ..!

---Advertisement---

ಬೆಂಗಳೂರು: ರೈತರು ಈ ದೇಶದ ಬೆನ್ನೆಲುಬು ಅಂತಾರೆ. ಅವರು ಬೆಳೆದರೇನೆ ಮನುಷ್ಯ ತಿನ್ನೊಕೆ ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ವ್ಯವಸಾಯದ ಭೂಮಿಯನ್ನ ಮಾರಾಟ ಮಾಡಿ, ರೈತರು ಕೂಡ ಇನ್ಯಾವುದೋ ಕೆಲಸ ಮಾಡಿಕೊಂಡು ಕೂತಿದ್ದಾರೆ. ಆದರೆ ದೇವನಹಳ್ಳಿ ರೈತರು ತಮ್ಮ ಭೂಮಿಗಾಗಿ ಹೋರಾಟ‌ ಮಾಡಿ ಕಡೆಗೂ ಗೆದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿದ್ದ ನಿರ್ಧಾರದಿಂದ ರಾಜ್ಯ ಸರ್ಕಾರ ಹೊರ ಬಂದಿದೆ.

ಒಟ್ಟು 1775 ಎಕರೆ ಭೂಸ್ವಾಧೀನ ಸಂಬಂಧ ರೈತರಲ್ಲಿಯೇ ಪರ ವಿರೋಧವಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ಬಳಿಕ, ಎರಡ್ಮೂರು ಸುತ್ತು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಇದೀಗ ರೈತರ ಪರವಾಗಿಯೇ ತೀರ್ಪು ನೀಡಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧಾರ ಮಾಡಿದೆ.

ಈ ಸಂಬಂಧ ತೀರ್ಮಾನ ಪ್ರಕಟಿಸಿರುವ ಸಿದ್ದರಾಮಯ್ಯ ಅವರು, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಡಿದ್ದೇವೆ. ಆದರೆ ರೈತರೇ ಮುಂದೆ ಬಂದು ತಮ್ಮ ಭೂಮಿಯನ್ನು ಕೊಡುವುದಕ್ಕೆ ಒಪ್ಪಿದರೆ ಒಪ್ಪಂದದ ಮೇರೆಗೆ ಭೂಮಿಯನ್ನು ತೆಗೆದುಕೊಳ್ಳುತ್ತೇವೆ. ನಮಗೆ ಕೈಗಾರಿಕಾ ವಲಯ ಬೆಳೆಯಬೇಕು. ರೈತರಿಗೆ ಸೂಕ್ತ ಪರಿಹಾರವನ್ನು ನೀಡುತ್ತೇವೆ.

ಯಾವ ರೈತರು ಭೂಮಿಯನ್ನು ನೀಡಲು ಮುಂದೆ ಬರುತ್ತಾರೋ ಆ ರೈತರ ಭೂಮಿಯನ್ನು ಮಾತ್ರ ಪಡೆಯುತ್ತೇವೆ. ರೈತರು ವ್ಯವಸಾಯ ಮಾಡುತ್ತಿರುವ ಕಾರಣ ಈಗ ಭೂಸ್ವಾಧೀನವನ್ನು ಕೈಬಿಟ್ಟಿದ್ದೇವೆ. ರೈತರ ಜಮೀನನ್ನು ಉಳಿಸುವುದಕ್ಕೆ ಈ ತೀರ್ಮಾನ ಕೈಗೊಂಡಿದ್ದೇವೆ. ಹಾಗಂತ ಎಲ್ಲಾ‌ ಕಡೆಗೂ ಇದೆ ತೀರ್ಮಾನ ಅನ್ವಯವಾಗುವುದಿಲ್ಲ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...