ತಮಿಳಿನ ಹಿರಿಯ ನಟ, ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಇನ್ನಿಲ್ಲ

 

ಸುದ್ದಿಒನ್, ಚೆನ್ನೈ, ಡಿಸೆಂಬರ್.28 : ಕ್ಯಾಪ್ಟನ್ ವಿಜಯಕಾಂತ್ (71) ಗುರುವಾರ (ಡಿಸೆಂಬರ್ 28) ಬೆಳಿಗ್ಗೆ ಕೊರೊನಾದಿಂದ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚೆನ್ನೈನ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಉಸಿರಾಟದ ತೊಂದರೆಯಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿಜಯಕಾಂತ್ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯದ ಬಗ್ಗೆ ಹಲವಾರು ವದಂತಿಗಳು ಹಬ್ಬಿದ್ದವು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂಬ ಮಾತುಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂದಿತ್ತು. ಆದರೆ ತಕ್ಷಣ ಆಸ್ಪತ್ರೆ ಅಧಿಕಾರಿಗಳು ಸ್ಪಂದಿಸಿ ಅವರು ಇನ್ನೂ ಬದುಕಿದ್ದಾರೆ ಎಂದು ಅಪ್ಡೇಟ್ ನೀಡಿದ್ದರು.

ಇಂದು ಕ್ಯಾಪ್ಟನ್ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಡಿಡಿಎಂಕೆ ಕಾರ್ಯಕರ್ತರು ಹಾಗೂ ತಮಿಳು ಚಿತ್ರರಂಗದ ಗಣ್ಯರು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

40 ವರ್ಷಗಳಿಂದ ಚಿತ್ರರಂಗದಲ್ಲಿ ಹಾಗೂ 20 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು. ಸಿನಿಮಾದಲ್ಲಿ ಕ್ಯಾಪ್ಟನ್ ಆಗಿ ಉನ್ನತ ಸ್ಥಾನಕ್ಕೇರಿದರು. ಆದರೆ ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೆ, ವಿಜಯ್ ಕಾಂತ್ ನಾಯಕನಾಗಿ ಬಹುಕಾಲ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *