ವೀರೇಂದ್ರ ಹೆಗ್ಡೆಯವರೇ ಒಪ್ಪಿದ್ದಾರೆ.. ಆದರೆ ಬಿಜೆಪಿಯವರಿಂದ ಮಾತ್ರ ವಿರೋಧ..!

1 Min Read

ಬೆಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಕಾರ್ಯ ಇನ್ನು ಕೂಡ ನಡೆಯುತ್ತಲೇ ಇದೆ. ಎಸ್ಐಟಿ ಅಧಿಕಾರಿಗಳು ಆ ಅನಾಮಧೇಯ ವ್ಯಕ್ತಿ ಹೇಳಿದ ಕಡೆಯಲ್ಲೆಲ್ಲಾ ಅಗೆದು ಹುಡುಕಾಟ ನಡೆಸುತ್ತಿದ್ದಾರೆ. ಇದರ ನಡುವೆ ಈ ತಪಾಸಣೆಯ ಬಗ್ಗೆ, ಎಸ್ಐಟಿ ರಚನೆಯ ಬಗ್ಗೆ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಧರ್ಮಸ್ಥಳ ಯಾತ್ರೆಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರು ಕೂಡ ಈ ಸಂಬಂಧ ಸ್ವಾಗತ ಮಾಡಿದ್ದಾರೆ. ಎಸ್ಐಟಿ ತನಿಖೆ ಆಗ್ಲಿ ಬಿಡಿ ಎಂದು ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರ ಇಂದು ಸದನದಲ್ಲಿ ಸದ್ದು ಮಾಡಿದೆ.

ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಉತ್ತರ ನಿಡೀದ್ದು, ಎಸ್ಐಟಿ ತನಿಖೆಗೆ ವೀರೇಂದ್ರ ಹೆಗ್ಡೆಯವರೇ ಒಪ್ಪಿಗೆ ಸೂಚಿಸಿದ್ದಾರೆ. ಹೀಗಿರುವಾಗ ಬಿಜೆಪಿಯವರು ಒಪ್ಪುತ್ತಿಲ್ಲ. ಎಸ್ಐಟಿ ರಚನೆ ಮಾಡಿದಾಗ ಬಿಜೆಪಿಯವರು ಕೂಡ ಸುಮ್ಮನೆ ಇದ್ದರು. ಆದರೆ ಒಂದಷ್ಟು ಕಡೆ ಮೂಳೆ ಸಿಗ್ಲಿಲ್ಲ ಎಂಬ ವಿಚಾರ ಗಿತ್ತಾದ ಮೇಲೆ ಬಿಜೆಪಿಯವರದ್ದು ಶುರುವಾಗೋಯ್ತು ನೋಡಿ ಎಂದು ಸಿದ್ದರಾಮಯ್ಯ ಅವರು ಉತ್ತರಿಸಿದ್ದಾರೆ.

ಇದೇ ವೇಳೆ ಆರ್ಸಿಬಿ ಕಪ್ ವೇಳೆ ಕಾಲ್ತುಳಿತವಾದ ವಿಚಾರದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ‌ ಮಾಡಿ, ಉತ್ತರಿಸಿದ್ದರು. ಇಂಡೋನೇಷ್ಯಾದಲ್ಲಿ 174 ಜನ ಮರಣ ಹೊಂದಿದ್ದಾರೆ. ಇದು ಇಲ್ಲಿ ಮಾತ್ರವಲ್ಲ ಅಂತ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದಕ್ಕೆ ಡಿಕೆ ಉತ್ತರ ನೀಡಿದ್ದು, ಅಶೋಕ್ 174 ಜನ ಕೇಳಿಸ್ಕೋ ಎಂದಿದ್ದಾರೆ. ಇದೇ ವೇಳೆ ನಿಮ್ಮಿಬ್ಬರ ಸ್ನೇಹ ಇದ್ಯಲ್ಲ, ಆ ಸ್ನೇಹದ ಮೇಲೆ ಮಾತನಾಡಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದಾಗ, ಆರ್.ಅಶೋಕ್ ಅವರು ಅವರಿಗಿಂತ ನೀವೇ ಸ್ನೇಹಿತರು ಎಂದಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು, ನಂಗೆ‌ನೀನೊಬ್ಬ ಒಳ್ಳೆ ಸ್ನೇಹಿತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅಸೆಂಬ್ಲಿಯಲ್ಲಿ ಒಂಥರ ಇರ್ತೀಯ, ಹೊರಗಡೆ ಇನ್ನೊಂದು ಥರ ಇರ್ತೀಯ. ಅದೇ‌ ಬಂದಿರೋದು ನನಗೆ ತಾಪತ್ರಯ ಎಂದು ಕಾಲೆಳೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks