Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಯಾತ್ರೆ ಹೊರಟ ವೀರನಾರಾಯಣ ಕುಲಕುರ್ಣಿ ಅವರಿಗೆ ಚಿತ್ರದುರ್ಗದಲ್ಲಿ ಸನ್ಮಾನ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಮಾ.10) :  ಜೀವನ ಪದ್ದತಿಯನ್ನು ಬದಲಾವಣೆ ವ್ಯಾಯಾಮ ಮತ್ತು ಯೋಗ ಮಾಡುವುದರ ಮೂಲಕ ಡಯಾಬಿಟೀಸ್‍ನ್ನು ದೂರ ಮಾಡಬಹುದಾಗಿದೆ ಎಂದು ವೀರನಾರಾಯಣ ಕುಲಕುರ್ಣಿ ತಿಳಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಯಾತ್ರೆಯನ್ನು ನಡೆಸುತ್ತಿರುವ ಇವರು ಚಿತ್ರದುರ್ಗದಲ್ಲಿ ರೋಟರಿಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಜೀವನದಲ್ಲಿ ಆಧುನಿಕತೆ ಮೈಗೂಡಿಸಿಕೊಂಡಿದೆ, ಎಲ್ಲದಕ್ಕೂ ಸಹಾ ಬೇರೆಯವರನ್ನು ಅನುಸರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ದಿನದಲ್ಲಿ ದೇಹಕ್ಕೆ ಅನುಕೂಲವಾಗುವಂತ ಆಹಾರವನ್ನು ಸೇವಿಸುವ ಬದಲಿಗೆ ನಾಲಿಗೆಗೆ ಅನುಕೂಲವಾಗುವಂತ ಆಹಾರವನ್ನು ಸೇವನೆ ಮಾಡಲಾಗುತ್ತಿದೆ. ಇದರಿಂದ ದೇಹಕ್ಕೆ ಆನಾರೋಗ್ಯ ಉಂಟಾಗುತ್ತದೆ ಇದರಿಂದ ವಿವಿಧ ರೀತಿಯ ಖಾಯಿಲೆಗಳಿಗೆ ತುತ್ತಾಗುತ್ತದೆ ಎಂದರು.

ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಡಯಾಬೀಟಿಸ್ ಖಾಯಿಲೆ ಹೆಚ್ಚಾಗಿದೆ ಇದರಿಂದ ನರಳುವವರ ಸಂಖ್ಯೆಯೂ ಸಹಾ ಹೆಚ್ಚಾಗಿದೆ. ನಮ್ಮ ಆರೋಗ್ಯ ಪದ್ದತಿಯನ್ನು ನಾವು ಬದಲಾವಣೆ ಮಾಡುವುದರ ಮೂಲಕ ಈ ರೋಗವನ್ನು ನಿಯಂತ್ರಿಸಬಹುದಾಗಿದೆ, ಅಲ್ಲದೆ ದೂರ ಇಡಬಹುದಾಗಿದೆ. ಇದರ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗು ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಉತ್ತಮವಾದ ಆಹಾರ ಪದ್ದತಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಇದರೊಂದಿಗೆ ಯೋಗ ಮತ್ತು ವ್ಯಾಯಾಮವನ್ನು ಸಹಾ ಬಿಡದೆ ಮಾಡುವುದರ ಮೂಲಕ ಈ ರೋಗದಿಂದ ದೂರ ಇರಬಹುದಾಗಿದೆ ಎಂದು ವೀರನಾರಾಯಣ ತಿಳಿಸಿದರು.

ಮಾನವ ಇಂದಿನ ದಿನದಲ್ಲಿ ಒತ್ತಡದಲ್ಲಿ ಕೆಲಸವನ್ನು ಮಾಡುತ್ತಿದ್ದಾನೆ ಇದರಿಂದ ಮಾನಸಿಕವಾಗಿ ಕುಗ್ಗುತ್ತಾನೆ ಇದರಿಂದ ರೋಗಕ್ಕೆ ಬಲಿಯಾಗುತ್ತಾನೆ. ಈ ಹಿನ್ನಲೆಯಲ್ಲಿ ಒತ್ತಡ ನಿವಾರಣೆಯಿಂದ ಕೆಲಸವನ್ನು ಮಾಡಬೇಕಿದೆ. ಇದಕ್ಕೆ ಉತ್ತಮವಾದ ಆಹಾರ, ವ್ಯಾಯಾಮ, ಯೋಗಗಳು ಸಹಕಾರಿಯಾಗಿದೆ ಎಂದು ತಿಳಿಸಿದರು.

ಈ ಯಾತ್ರೆಯಲ್ಲಿ ಸುಮಾರು 4000 ಕೀ.ಮೀ. ದೂರವನ್ನು ಕ್ರಮಿಸಲಾಗುವುದು ಈಗಾಗಲೇ 3200 ಕೀ. ಮೀ ದೂರವನ್ನು ಕ್ರಮಿಸಲಾಗಿದೆ. ಉಳಿದ 800 ಕಿ.ಮೀ. ದೂರವನ್ನು ಸವೆಸುವುದರ ಮೂಲಕ ಕನ್ಯಾಕುಮಾರಿಯನ್ನು ತಲುಪಲಾಗುವುದು. ಈ ಯಾತ್ರೆಯಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಅನುಭವ ಆಗಿದೆ ಎಂದರು.

ಈ ಸಂದರ್ಭದಲ್ಲಿ ಪತ್ನಿ ಪೂರ್ಣಮಾ, ಮಗಳಾದ ಅಮೋದಿನಿ, ಸ್ನೇಹಿತ ಪೃಥ್ವಿ ಸಾಥ್ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ರೋಟೇರಿಯನ್‍ಗಳಾದ ಕೆ.ಮಧುಪ್ರಸಾದ್, ಎಸ್.ವೀರೇಶ್, ಎ.ಮೈಲೇಶ್ ಕುಮಾರ್, ವೀರಭದ್ರಸ್ವಾಮಿ, ತಿಪ್ಪೇಸ್ವಾಮಿ, ಹರೀಶ್, ಮಹಡಿ ಶಿವಮೂರ್ತಿ, ಸ್ವಾಮಿ, ಮಧು ಕುಮಾರ್, ಕನಕ ರಾಜ್  ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾತ್ರಿ ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿದರೆ, ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಗೊತ್ತಾ ?

ಸುದ್ದಿಒನ್ : ಯಾಂತ್ರಿಕ ಓಟದ ಬದುಕಿನಲ್ಲಿ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹೀಗಾಗಿ ಆರೋಗ್ಯವಂತರಾಗಿರಲು ಈಗಿನಿಂದಲೇ ಹೆಜ್ಜೆ ಇಡಬೇಕು. ಮತ್ತು ಹೆಚ್ಚು ಗಮನ ಕೊಡಬೇಕು. ಜೀವನಶೈಲಿ, ಆಹಾರ ಪದ್ಧತಿ ಬದಲಿಸಿಕೊಳ್ಳಿ ಎಂದು ವೈದ್ಯಕೀಯ ತಜ್ಞರು

ಈ ರಾಶಿಯವರಿಗೆ ಮದುವೆ ಯೋಗ,ಈ ರಾಶಿಯವರಿಗೆ ಸಂತಾನ ಭಾಗ್ಯ, ಈ ರಾಶಿಯವರಿಗೆ ಸಾಲದಿಂದ ಋಣ ಮುಕ್ತಿ

ಈ ರಾಶಿಯವರಿಗೆ ಮದುವೆ ಯೋಗ,ಈ ರಾಶಿಯವರಿಗೆ ಸಂತಾನ ಭಾಗ್ಯ, ಈ ರಾಶಿಯವರಿಗೆ ಸಾಲದಿಂದ ಋಣ ಮುಕ್ತಿ. ಶುಕ್ರವಾರ- ರಾಶಿ ಭವಿಷ್ಯ ಏಪ್ರಿಲ್-26,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

error: Content is protected !!