Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೋಟೆ ನಾಡಿನ ಹೆಮ್ಮೆಯ ಸಾಹಿತಿಗಳು : ಸಾಹಿತ್ಯ ಕ್ಷೇತ್ರಕ್ಕೆ ಆರ್ಯವೈಶ್ಯರ ಕೊಡುಗೆ ಅಪಾರ

Facebook
Twitter
Telegram
WhatsApp

 

ವಾಸವಿ ಜಯಂತಿ ಹಿನ್ನೆಲೆ ವಿಶೇಷ ಲೇಖನ :
ಸುಜಾತಾ ಪ್ರಾಣೇಶ್
ಆರ್ಯವೈಶ್ಯರು ಎಂದರೇ ವ್ಯಾಪಾರಸ್ಥರು ಎಂಬ ಭಾವನೆ ಮೇಲ್ನೋಟಕ್ಕೆ ಗಟ್ಟಿಯಾಗಿ ಬೇರೂರಿದೆ. ಒಳಹೊಕ್ಕು ನೋಡಿದರೆ ಸೇವಾ ಅಂಗಳ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೈಗೆದ ಅನೇಕ ದಿಗ್ಗಜರು ಕಾಣಬರುತ್ತಾರೆ.

ಅದರಲ್ಲೂ ಸಾಹಿತ್ಯ ಕ್ಷೇತ್ರಕ್ಕೆ ಆರ್ಯವೈಶ್ಯರ ಕೊಡುಗೆ ಅಪಾರವೇ ಎನ್ನಬಹುದು. ಅಷ್ಟರಮಟ್ಟಿಗೆ ಅಕ್ಷರ ಜಗತ್ತಿಗೆ ಸೇವೆ ಒದಗಿಸಿದ್ದಾರೆ.

ಸಮುದಾಯದ ನೂರಾರು ಸಾಹಿತಿಗಳು ಉತ್ತಮ ಗುಣಮಟ್ಟದ ಸಾಹಿತ್ಯ ರಚಿಸಿ ಖ್ಯಾತರಾಗಿರುವುದು ಹೆಮ್ಮೆಯ ಸಂಗತಿ. ಆದರೆ, ಇವರಲ್ಲಿ ಬಹುತೇಕರು ಎಲ್ಲೂ ಹೆಚ್ಚು ಪ್ರಚಾರ ಬಯಸದಿರುವುದು ವಿಶೇಷ. ಈ ಬರವಣಿಗೆ ಚೌಕಟ್ಟಿನೊಳಗೆ ಬಾರದವರು ನೂರಾರು ಮಂದಿ ಎಲೆಮರೆ ಕಾಯಿಯಂತೆ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಸಾಹಿತಿಗಳನ್ನು ಪರಿಚಯಸಲಾಗುತ್ತಿದೆ.

 

 

ಟೀಕಾ ವೆಂಕಟಾಚಲ ಗುಪ್ತ:

ದುರ್ಗದ ಹಿರಿಯ ಸಾಹಿತಿಗಳ ಸಾಲಿನಲ್ಲಿ ಇವರು ಆದ್ಯರು. ಸಾಕಷ್ಟು ಸಂಶೋಧನೆ ನಡೆಸಿ ಸರಳ ಕನ್ನಡದಲ್ಲಿ “ವೈಶ್ಯಕುಲದೇವತೆ” ಗ್ರಂಥ ರಚಿಸಿದ್ದಾರೆ. ವಾಸವಿ ಸುಪ್ರಭಾತ , ಗೋತ್ರದರ್ಪಣ, ವೈಶ್ಯಕುಲ ದೀಪಿಕೆ ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ.

 

 

ಟಿ.ವಿ. ಸುರೇಶ್ ಗುಪ್ತ:

ಟೀಕಾ ವೆಂಕಟಾಚಲ ಗುಪ್ತಾ ಅವರ ಸುಪುತ್ರರು ಅವರ ಹಾದಿಯಲ್ಲೇ ನಡೆದು ” ವಾಸವಿ ಚರಿತೆ” ಎಂಬ ಪುಸ್ತಕವನ್ನು ರಚಿಸಿದ್ದಾರೆ .ಈ ಪುಸ್ತಕವು ಮೂರು ಬಾರಿ ಮುದ್ರಣ ಕಂಡು ಏಳು ಸಾವಿರ ಪ್ರತಿಗಳು ಪ್ರಕಟಗೊಂಡಿವೆ.” ಗುಡ್ಡದ ಡೈರಿ “,”ಮೌನ ಮಾತನಾಡಿದಾಗ” ,”ಮೇಘ ಪಷ್ಪ” ಮುಂತಾದ ಪ್ರಬಂಧ ಸಂಕಲನಗಳು ಇವರ ಲೇಖನಿಯಿಂದ ಮೂಡಿಬಂದಿವೆ.

 

ಆರ್. ಮನೋಹರ್:

ಮೌನವಾಗಿ ಸಾಹಿತ್ಯ ಕೃಷಿ ಮಾಡುತ್ತಿರುವ ಇವರು ಕನ್ನಡ ಹಾಗೂ ಇಂಗ್ಲೀಷ್  ಎರಡು ಭಾಷೆಯಲ್ಲೂ ಪ್ರಭುತ್ವ ಸಾಧಿಸಿದ್ದಾರೆ. “ಶಂಕರ ಭಾರತಿ”, “ವೇದಾಂತವಾಣಿ”,  ಪತ್ರಿಕೆಗಳಿಗೆ ನಿಯಮಿತವಾಗಿ ಲೇಖನಗಳನ್ನು ಬರೆದಿದ್ದಾರೆ .

ಇವರ ಲೇಖನಗಳಲ್ಲಿ ಆಧ್ಯಾತ್ಮಿಕತೆ ಹಾಗೂ ಪಾರಮಾರ್ಥಿಕತೆಯ ಸೆಳವಿದೆ.

 

ರಾ. ವೆಂಕಟೇಶ ಶೆಟ್ಟಿ:

ಸಿರಿಗೆರೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ತರಳಬಾಳು ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಹದಿಮೂರು ವರ್ಷ ,ವಾರ್ತಾ ಪತ್ರದ ಸಂಸ್ಥಾಪಕ ಸಂಚಾಲಕರಾಗಿ 13  ವರ್ಷ ಸೇವೆ ಸಲ್ಲಿಸಿದ್ದಾರೆ .ಇವರ ವಾಸವಿ ಜಯಂತಿ ಕುರಿತಾದ ಲೇಖನ ವಿಜಯ ಕರ್ನಾಟಕದ ಬೋಧಿವೃಕ್ಷದಲ್ಲಿ ಬೆಳಕು ಕಂಡಿದೆ. ಸಾಹಿತ್ಯ ಜಗಲಿ ( whats app) ಆರಂಭಿಸಿ ನೂರಾರು ಸಾಹಿತಿಗಳ ರಚನೆಗಳು ಪ್ರಕಟಗೊಳ್ಳುವಂತೆ ಮಾಡಿದ್ದಾರೆ.

 

ಕೆ.ಎಚ್.ಜಯಪ್ರಕಾಶ್:

ವಿಕಲ ಚೇತನರಾಗಿ ಕಾಲಿನ ಶಕ್ತಿ ಕಳೆದುಕೊಂಡಿದ್ದರೂ ಹಿಂಜರಿಯದೆ ಸಾಹಿತ್ಯ ರಚನೆಯ ಹವ್ಯಾಸ ಬೆಳೆಸಿಕೊಂಡು ಅನೇಕ ಕವನಗಳನ್ನು ರಚಿಸಿದ್ದಾರೆ .ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಶಂಸೆ ಪಡೆದಿದ್ದಾರೆ.”ಒಡಲ ದನಿ” ಹಾಗೂ “ಕನಸುಗಾರನ ಕನವರಿಕೆ” ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸ್ವಾವಲಂಬಿ ಜೀವನ ಕಟ್ಟಿಕೊಂಡು ಮಾದರಿ ಜೀವನ ನಡೆಸುತ್ತಿರುವ ಇವರ ಸಾಹಿತ್ಯ ಅಭಿಮಾನ, ಬರವಣಗೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂಬ ಛಲ ಇತರರಿಗೆ ಸ್ಫೂರ್ತಿ ಆಗಿದೆ.

 

ನಿಬಗೂರು ವೆಂಕಟೇಶ್:

ವ್ಯಾಪಾರಿಯಾಗಿದ್ದರೂ ಸಾಹಿತ್ಯದ ಸೆಳೆತದಿಂದಾಗಿ ಅನೇಕ ಕವನಗಳನ್ನು ರಚಿಸಿದ್ದಾರೆ . ಸಂದರ್ಭಕ್ಕೆ ತಕ್ಕಂತೆ ಕವನ ಕಟ್ಟುವ ಕಲೆ ಇವರಿಗಿದೆ. ಸದಾ ಬರವಣಿಗೆ, ಓದುವ ಹವ್ಯಾಸ ಇಂದಿನ ಪೀಳಿಗೆಗೆ ಮಾದರಿ ಆಗಿದೆ.

 

ನಿಬಗೂರು ರಾಧಾಕೃಷ್ಣ:

ಹೋಟೆಲ್ ನಡೆಸುವ ಕಾಯಕದಲ್ಲಿದ್ದರೂ ಕವನಗಳನ್ನು ರಚಿಸುವ ಹವ್ಯಾಸವಿದೆ. ನೂರಾರು ಕವನಗಳನ್ನು ರಚಿಸಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

 

ಜೆ.ಆರ್. ಶಿವಕುಮಾರ್:

ಸಾಹಿತ್ಯದ ಇತ್ತೀಚಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ತಮ್ಮಕವನಗಳನ್ನು ರಚಿಸುತ್ತಾರೆ. ಚುಟುಕುಗಳು ಹಾಗೂ ಕವನಗಳನ್ನು ರಚಿಸುವಲ್ಲಿ ನಿಷ್ಣಾತರು . “ಹೌದಲ್ವ” ಎಂಬ ಇವರ ಕವನ ಪ್ರಕಾರ ಅಪಾರ ಮೆಚ್ಚುಗೆ ಗಳಿಸಿದೆ. ವಾಸವಿ ಕುರಿತ ಇವರ ಕವನ ರಾಜ್ಯಮಟ್ಟದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಗಾಯನವಾಗಿ ಮೂಡಿಬಂದು ಅಪಾರ ಜನಮನ್ನಣೆ ಪಡೆದಿದೆ.

 

ಸತ್ಯಪ್ರಭಾ ವಸಂತಕುಮಾರ್:

ಇವರು ಆಧ್ಯಾತ್ಮದ ಸುಂದರ ಲೇಪನದೊಂದಿಗೆ ಹಲವಾರು ಲೇಖನಗಳು ಹಾಗೂ ಕವನಗಳನ್ನು ರಚಿಸಿದ್ದಾರೆ . “ಮಂಜುವಾಣಿ”, ವೈಶ್ಯವಾರ್ತೆ, ಗೀತಾಮಿತ್ರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ .ಇವರ “ನೈದಿಲೆ ಚಂದ್ರಮ” ಕಾದಂಬರಿ ಹಾಗೂ “ಸರಸತಿಯ ಗುಡಿಯಲ್ಲಿ” ಕಾದಂಬರಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

 

ಸುಶೀಲ ರಾಮಚಂದ್ರ:

ಇವರ ಮುಂಬೆಳಗು ಕಿರು ಕಾದಂಬರಿ ಪ್ರಕಟವಾಗಿದೆ. ಮೊದಲ ಹೆಜ್ಜೆ ಕಥಾಸಂಕಲನದಲ್ಲಿ “ನೀಲಾಂಬರದ ತಾರೆ” ಎಂಬ ಕಥೆ ಬೆಳಕು ಕಂಡಿದೆ. ಹಲವಾರು ಕವನಗಳನ್ನು ರಚಿಸಿ ಕವಿಗೋಷ್ಠಿ ಗಳಲ್ಲಿ ಭಾಗವಹಿಸಿದ್ದಾರೆ.

 

ಸ್ವಂತಾಲ್ ನಾಗರತ್ನಮ್ಮ:

 

ಹಿರಿಯರಾಗಿದ್ದು ಹಾಡುಗಳ ರಚನೆಯಲ್ಲಿ ಸಿದ್ಧಹಸ್ತರು ಭಕ್ತಿ ಗೀತೆಗಳನ್ನು ರಚಿಸಿದ್ದಾರೆ .” ಭಕ್ತಿಭಾವ ಸಂಗಮ” ಎಂಬ ಕವನ ಸಂಕಲನ  ಪ್ರಕಟವಾಗಿದೆ.

 

ಸುಜಾತಾ ಪ್ರಾಣೇಶ್:

ಚಿತ್ರದುರ್ಗ ಜಿಲ್ಲೆಯ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಿಣಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಹವ್ಯಾಸಿ ಬರಹಗಾರ್ತಿ. ಇವರ “ಬಂಗಾರವೆಂಬ ಜಿಂಕೆ” ಕಥೆ ಮೈಸೂರಿನ ಸ್ನೇಹ ಬಳಗದ ಕಥಾಸಂಚಯ ಪುಸ್ತಕದಲ್ಲಿ ಹಾಗೂ”ಏಕಾಗ್ರತೆಯ ಫಲ” ಎಂಬ ಕಥೆಯು ಮಕ್ಕಳಮೋಜಿನ ಕಥೆಗಳು ಎಂಬ ಪುಸ್ತಕದಲ್ಲಿ ಪ್ರಕಟವಾಗಿವೆ. ಕೆಲವು ಸಣ್ಣ ಕತೆಗಳು ವನಿತಾ ಮಾಸಿಕ ಹಾಗೂ ತರಂಗ ವಾರಪತ್ರಿಕೆಯಲ್ಲಿ  ಬೆಳಕು ಕಂಡಿವೆ. ಹಲವಾರು ಕವನಗಳನ್ನು ರಚಿಸಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

 

ಮಂಜಮ್ಮತಿಮ್ಮಶೆಟ್ಟಿ:

ವಯಸ್ಸು ಎಂಬತ್ತು ದಾಟಿದ್ದರೂ ಉತ್ಸಾಹಿ ಮಹಿಳೆ. ಹಲವಾರು ಕವನಗಳನ್ನು ರಚಿಸಿದ್ದಾರೆ . ಭಕ್ತಿ ಪ್ರಧಾನವಾದ ಇವರ ಕವನಗಳು ಪ್ರಕಟವಾಗಿವೆ.

 

ಇತ್ತೀಚಿನ ಹೊಸ ಪ್ರತಿಭೆ ಶ್ರೀಮತಿ ರಾಜೇಶ್ವರಿ ಶ್ರೀಧರ್. ಚಿಗುರೆಲೆ ಸಾಹಿತಿ ಎಂದು ಗುರುತಿಸಿಕೊಂಡಿದ್ದಾರೆ . ವಿ.ಲಕ್ಷ್ಮಿ , ವನರತ್ನಾ ಸುಬ್ಬರಾಜು, ನಂದಿನಿ ಸುಹಾಸ್ ಸೇರಿ ಅನೇಕರು ತಮ್ಮದೇ ಆದ ರೀತಿಯಲ್ಲಿ ಲೇಖನ ಕವನಗಳನ್ನು  ರಚಿಸುತ್ತಿದ್ದಾರೆ.

ಹೀಗೆ ಆರ್ಯವೈಶ್ಯ ಸಮುದಾಯದ ಅನೇಕರು ಸಾಹಿತ್ಯ ಕ್ಷೇತ್ರಕ್ಕೆ  ಸಾಲು ಸಾಲು ಕೊಡುಗೆ ಸದ್ದಿಲ್ಲದೆ ನೀಡುತ್ತಲೇ ಇದ್ದಾರೆ. ಹೊಸದಾಗಿ ಪ್ರತಿಭೆಗಳು ಸಮುದಾಯದಲ್ಲಿ ಜನಿಸುತ್ತಿದ್ದು, ಹರಿಯುವ ನದಿ ರೀತಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಸಣ್ಣ ಸಂಖ್ಯೆಯಲ್ಲಿರುವ ಆರ್ಯವೈಶ್ಯ ಸಮುದಾಯ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡಕ್ಡ ಕೊಡುಗೆ ನೀಡುತ್ತಲೇ ಇದೆ.

ತಮ್ಮ ದೈನಂದಿನ ಜೀವನದ ಜೊತೆ  ಜೊತೆಯಲ್ಲಿ ಆರ್ಯವೈಶ್ಯ ಸಾಹಿತಿಗಳು  ಕೋಟೆ ನಾಡಿನಲ್ಲಿ ಬೆಳಗುತ್ತಿರುವುದು ಹೆಮ್ಮೆಯ ಸಂಗತಿ.

 

ಲೇಖಕರು :
ಸುಜಾತಾ ಪ್ರಾಣೇಶ್

ಸಾಹಿತಿ, ಚಿತ್ರದುರ್ಗ

ಮೊ.ನಂ: 9986153163

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹನುಮಾನ್ ಅವತಾರದಲ್ಲಿ ರಿಷಭ್ ಶೆಟ್ಟಿ : ಹೊಸ ಅವತಾರ ನೋಡಿ ಕರ್ನಾಟಕದ ಫ್ಯಾನ್ಸ್ ಶಾಕ್

ಕಾಂತಾರಾ ಸಿನಿಮಾ ಮಾಡಿ ಇಡೀ ದೇಶದಾದ್ಯಂತ ಹೆಸರುವಾಸಿಯಾದ ರಿಷಬ್ ಶೆಟ್ಟಿ ಹೊಸ ಅವತಾರವೆತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಈಗ ಜೈ ಹನುಮಾನ್ ಆಗಿ ಬರ್ತಿದ್ದಾರೆ. ನಟ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್

ಏನು ಇಲ್ಲ ಎಂದವರಿಗೆ ಹನುಮಂತು ಎಂಥಾ ಆಟ ತೋರಿಸಿದ್ರು ನೋಡಿ : 2ನೇ ಸಲ ಕ್ಯಾಪ್ಟನ್.. ಮನೆ ಮಂದಿ ಶಾಕ್..!

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕುರಿಗಾರ್ ಹನುಮಂತು ಬಂದಿರೋದು ನಿಮ್ಗೆಲ್ಲಾ ಗೊತ್ತೆ‌ ಇದೆ. ಪಕ್ಕಾ ಉತ್ತರ ಕರ್ನಾಟದ ಗ್ರಾಮೀಣ ಭಾಗದ ಪ್ರತಿಭೆಯೇ ಸರಿ. ಬಿಗ್ ಬಾಸ್ ಮನೆಯಲ್ಲೂ ಸದಾ ಪಕ್ಕ

ಮಗನ ಆತ್ಮಕ್ಕೆ ಶಾಂತಿ ಸಿಗಲಿ : ರೇಣುಕಾಸ್ವಾಮಿ ತಂದೆ ಹೇಳಿದ್ದೇನು ?

ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ನಟ ದರ್ಶನ್ ಸದ್ಯ ಮಧ್ಯಂತರ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ. ಬಳ್ಳಾರಿ ಜೈಲು ಸೇರಿದ ಮೇಲೆ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದರು. ಜೈಲು ಅಧಿಕಾರಿಗಳು ಮೆಡಿಕಲ್

error: Content is protected !!