ಮಂಡ್ಯ: ಪರಿಷತ್ ಟಿಕೆಟ್ ಅಂತು ಕೈತಪ್ಪಿದೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ನಿಮ್ಮ ಆಯ್ಕೆ ಯಾವ ಕ್ಷೇತ್ರ ಎಂಬುದಕ್ಕೆ ಉತ್ತರಿಸಿದ ವಿಜಯೇಂದ್ರ, ನಾನು ಇದರ ಬಗ್ಗೆ ಏನನ್ನು ಬಹಿರಂಗವಾಗಿ ಚರ್ಚಿಸುವುದಕ್ಕೆ ತಯಾರಿಲ್ಲ. ಇವತ್ತು ನಾನು ಚುನಾವಣೆಗೆ ನಿಲ್ಲಬೇಕಾ ಬೇಡವಾ, ಎಲ್ಲಿ ನಿಲ್ಲಬೇಕು ಎಂಬುದೆಲ್ಲಾ ಪಕ್ಷ ತೀರ್ಮಾನ ಮಾಡುತ್ತದೆ. ಈ ಮಾತನ್ನು ಹಲವಾರು ಬಾರಿ ಹೇಳಿದ್ದೇನೆ. ಪಕ್ಷ ಏನೇ ತೀರ್ಮಾನ ಮಾಡಿದರು ಅದನ್ನು ಸಂತೋಷವಾಗಿ ಮಾಡುತ್ತೇನೆ ಎಂದಿದ್ದಾರೆ.
ಒಂದು ಪಕ್ಷ ತನ್ನ ಅಭ್ಯರ್ಥಿ ಗೆಲ್ಲೋದಕ್ಕೆ ಸಾಧ್ಯವೆ ಇಲ್ಲ ಅಂತ ವಾತಾವರಣ ಇದ್ದಾಗ ಈ ರೀತಿ ಆತ್ಮಸಾಕ್ಷಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷ ಆತ್ಮವಿಶ್ವಾಸದಲ್ಲಿದ್ದೇವೆ. ಮೂವರು ಅಭ್ಯರ್ಥಿಗಳು ಸಹ ಅದರಲ್ಲಿ ಗೆಲ್ಲುತ್ತಾರೆ. ಆತ್ಮಸಾಕ್ಷಿಯಾಗಿಯೇ ಆಗ್ತಾರೆ. ರಾಜ್ಯಸಭೆ ಎಂದರೆ ರಾಜ್ಯವನ್ನು ಪ್ರತಿನಿಧಿಸುವಂಥದ್ದು. ಅದು ಬಹಳ ಮಹತ್ವವಾದದ್ದು. ಹೀಗಾಗಿ ಶಾಸಕರು ತೀರ್ಮಾನ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನೆ ಗೆಲ್ಲಿಸುತ್ತಾರೆ.
ಸಿದ್ದರಾಮಯ್ಯ ಬಗ್ಗೆ ಮಾತನಾಡಿ, ಯಡಿಯೂರಪ್ಪ ನವರು ತಮ್ಮ ಮಗನನ್ನು ಎಂಎಲ್ಸಿ ಮಾಡಿ ಅಂತ ಹೇಳಿ ಯಾರಿಗೂ ಕೇಳಿಲ್ಲ, ಒತ್ತಡವನ್ನು ಹಾಕಿಲ್ಲ. ನಾನು ಅದನ್ನು ಸ್ಪಷ್ಟವಾಗಿ ಹೇಳುತ್ತೇನೆ. ನಾನೀಗ ರಾಜ್ಯದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಆಗಲಿ ಅಥವಾ ಕಾಂಗ್ರೆಸ್ ಮುಖಂಡರಾಗಲಿ ಆ ಬಗ್ಗೆ ತಲೆಕೆಡಿಸಿಕೊಳ್ಳುವಂತ ಅವಶ್ಯಕತೆ ಇಲ್ಲ ಎಂದಿದ್ದಾರೆ.