ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ,
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.) ಮೊ : 9686555383
ಸುದ್ದಿಒನ್ :
ಕುಡಿಯುವ ನೀರು ಅತ್ಯಂತ ಶುದ್ದವಿರಬೇಕು. ಬಣ್ಣ, ವಾಸನೆರಹಿತ ತೇಲಾಡುವ ಕಲ್ಮಷಗಳಿಂದ ಹಾಗೂ ಅಹಿತಕರ ರುಚಿಯಿಂದ ಮುಕ್ತವಾಗಿರಬೇಕು. ನೀರಿನಲ್ಲಿ ಸಾಮಾನ್ಯವಾಗಿ Ca, Mg, Na, k, cl, So4 ಅಂಶಗಳಿಂದ ಕೂಡಿದ ದ್ರವ ರೂಪದಲ್ಲಿರುತ್ತದೆ.
ಮಳೆಯ ನೀರು ರಾಸಾಯನಿಕವಾಗಿ ಅತ್ಯಂತ ಶುದ್ದರೂಪದಲ್ಲಿದ್ದು, ಇದರ ಗುಣಮಟ್ಟದಲ್ಲಿನ ಬದಲಾವಣೆ ವಾತಾವಣದಿಂದಲೇ ಆರಂಭವಾಗುತ್ತದೆ. ವಾತಾವರಣದಲ್ಲಿನ ಆಮ್ಲಜನಕ ಕಾರ್ಬನ್ ಡೈಆಕ್ಸೈಡ್, ಸಾರಜನಕದ ಆಕ್ಸೈಡ್‍ಗಳು, ಸಲ್ಫರ್ ಡೈಆಕ್ಸೈಡ್ ಮುಂತಾದವುಗಳು ಮಳೆಯ ನೀರಿನಲ್ಲಿ ಸೇರಿ ರಾಸಾಯಿನಿಕ ಬದಲಾವಣೆಗೆ ನಾಂದಿಯಾಡುತ್ತವೆ. ಇದರೊಂದಿಗೆ ವಾತಾವರಣದಲ್ಲಿನ ತೇಲಾಡುವ ಧೂಳಿನ ಕಣಗಳಂತಹ ಭೌತಿಕ ಕಲ್ಮಷಗಳು ಸೇರಿಕೊಳ್ಳುತ್ತವೆ. ಮಳೆ ನೀರು ಭೂಮಿಯ ಮೇಲ್ಮೈಯನ್ನು ತಲುಪಿ, ಮಣ್ಣಿನ ಪದರದೊಂದಿಗೆ ಬೆರೆತಾಗ ಮಣ್ಣಿನ ಕಣಗಳ ಭೌತಿಕ ವಸ್ತುಗಳು ಸೇರ್ಪಡೆಯಾಗಿ ನೀರಿನ ಲವಣಾಂಶಗಳು ಹೆಚ್ಚುತ್ತವೆ. ನೀರಿನ ವಾಸನೆಗೆ ಕಾರಣ ಸಾವಯವ ವಸ್ತುಗಳು ಧಾತುಗಳು ಹಾಗೂ ಕಬ್ಬಿಣ ಮತ್ತು ಸಲ್ಪೈಡ್ ಬ್ಯಾಕ್ಟೀರಿಯಗಳು ಕಾರಣವಾಗುತ್ತವೆ.
ಮಳೆಯ ನೀರು ಸ್ವಲ್ಪ ಪ್ರಮಾಣ ಭೂಮಿಯೊಳಗೆ ಇಂಗಿ ಅಂತರ್ಜಲವನ್ನು ಸೇರಿಕೊಳ್ಳುತ್ತದೆ. ಅಂತರ್ಜಲವನ್ನು ಸೇರಿದ ನೀರು ಜಲಧರ ಶಿಲೆಯ ಮಾತೃಕೆಯೊಂದಿಗೆ ಸದಾ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿರುತ್ತದೆ. ಅಂತರ್ಜಲವಾಗುವ ಈ ಪ್ರಕ್ರಿಯೆಯಲ್ಲಿ ಮಳೆಯ ನೀರು ಗುರುತ್ವ ಬಲದ ಮೂಲಕ ಮಣ್ಣಿನ ಪದರ, ಶಿಥಿಲ ವಲಯವನ್ನು ದಾಟಿ ಕೆಳಗೆ ಕಠಿಣ ಶಿಲೆಗಳಲ್ಲಿನ ಸಂದು-ಬಿರುಕುಗಳಲ್ಲಿ ಪ್ರಯಾಣವನ್ನು ಬೆಳೆಸುತ್ತದೆ. ಮಣ್ಣು ಮತ್ತು ಶಿಲಾಸ್ತಾರಗಳ ರಾಸಾಯನಿಕ ಸಂಯೋಜನೆ ಮತ್ತು ನೀರಿನಲ್ಲಿನ ಕರಗಿದ ಇಂಗಾಲದ ಡೈಆಕ್ಸೈಡ್, ಆಮ್ಲಜನಕಗಳ ಪ್ರಮಾಣವನ್ನು ಅವಲಂಬಿಸಿ ರಾಸಾಯನಿಕ ಅಂಶಗಳು ಶಿಲೆಗಳಿಂದ ನೀರಿಗೂ ಕೆಲವೊಮ್ಮೆ ನೀರಿನಿಂದ ಶಿಲಾ ಪದರಗಳಿಗೂ ವಿನಿಮಯಗೊಂಡು ನೀರಿನ ರಾಸಾಯನಿಕ ಗುಣಮಟ್ಟದಲ್ಲಿ ಹೆಚ್ಚಿನ ಬದಲಾವಣೆಗೆ ಉಂಟಾಗುತ್ತದೆ.
ಶಿಲೆಯೆಂದರೆ ಖನಿಜಗಳ ಸಮಕ್ಷೀಕರಣ ನಿರ್ದಿಷ್ಟ ರಾಸಾಯನಿಕ ಸಂಯೋಜನೆ ಮತ್ತು ಅಣು ರಚನೆಗಳನ್ನು ಹೊಂದಿರುತ್ತದೆ.
ಪಟ್ಟಣ, ನಗರಗಳಲ್ಲಿನ ಕೊಳಚೆ ನೀರು ಇ. ಕೋಲಿಯಂತಹ ಸೂಕ್ಷ್ಮಜೀವಿಗಳು ಮೇಲಜಲ ಅಥವಾ ಅಂತರ್ಜಲದಲ್ಲಿ ಕಂಡುಬರುವುದು ಇ-ಕೋಲಿಯ ಮನುಷ್ಯನ ಕರುಳಿನಲ್ಲಿರುವ ಬ್ಯಾಕ್ಟೀರಿಯವಾಗಿದ್ದು ಇದು ಹಾನಿಕಾರಕವಲ್ಲ. ಆದರೆ ನೀರಿನಲ್ಲಿ ಇದರ ಉಪಸ್ಥಿತಿಯು ಮಾಲಿನ್ಯ ಸಾಧ್ಯತೆಯನ್ನು ಸೂಚಿಸುತ್ತದೆ.
ಭೂಮಿಯ ಶಿಲಾ ಪದರಗಳ ಖನಿಜಗಳಲ್ಲಿ ಅಡಕಗೊಂಡ ಯುರೇನಿಯಂ, ಥೋರಿಯಂನಂತಹ ವಿಕಿರಣ ಪಟುತ್ವ ಧಾತುಗಳು ಸ್ವಯಂ ಪ್ರೇರಿತಾವಾಗಿ ಸದಾ ವಿಕಿರಣಗಳನ್ನು ಸೂಸುತ್ತಿರುತ್ತವೆ. ವಿಕಿರಣ ಸೂಸುವ ಮೂಲಕ ಇವುಗಳ ರಾಸಾಯನಿಕ ಮತ್ತು ಭೌತಿಕ ಗುಣಗಳು ಬದಲಾವಣೆಯಾಗಿ ಹೊಸ ಧಾತುವಾಗಿ ಮಾರ್ಪಡುತ್ತವೆ. ಕುಡಿಯುವ – ಪ್ರತಿ ಲೀಟರ್ ನೀರಿನಲ್ಲಿ ವಿಕಿರಣ ಪಟುತ್ವದ ಮಿತಿ 1.85 Becquerel/Liter ಇರಬೇಕು.
ಟ್ರೀಟಿಯಂ ಮತ್ತು ಕಾರ್ಬನ್-14ಗಳನ್ನು ಸಾಮಾನ್ಯವಾಗಿ ಅಂತರ್ಜಲದ ಆಯುಷ್ಯನ್ನು ನಿರ್ಧರಿಸಲು ಉಪಯೋಗಿಸಲಾಗುವುದು. ಇಂತಹ ವಿಧಾನದಿಂದ ಅಂತರ್ಜಲಕ್ಕೆ ನೀರು ಮರು ಪೂರಣಗೊಳ್ಳುತ್ತಿದೆಯೋ ಇಲ್ಲವೋ ಎನ್ನುವುದನ್ನು ಪತ್ತೆಹಚ್ಚಬಹÅದು. ಟ್ರೀಟಿಯಂ ಅರ್ಧ ಜೀವಾವಧಿ 12.3 ವರ್ಷಗಳಿದ್ದು ಒಂದರಿಂದ 100 ವರ್ಷಗಳಷ್ಟು ಹಳೆಯದಾದ ನೀರನ್ನು ಪತ್ತೆಹಚ್ಚಬಹÅದು. ವಿಕಿರಣಗಳು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ಯುರೇನಿಯಂ ರೇಡಿಯಂ ಮುಂತಾದ ವಿಕಿರಣ ಪಟ್ಟುತ್ವ ಧಾತುಗಳನ್ನು ಮಾಲಿನ್ಯ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಲವು ಲಾಭಕರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇವುಗಳು ದೀರ್ಘವಾದ ಆಯುಷ್ಯವನ್ನು ಹೊಂದಿರುತ್ತವೆ ಎಂದು ಭೂವೈಜ್ಞಾನಿಕವಾಗಿ ಅಭಿಪ್ರಾಯ ಪಡಲಾಗಿದೆ.







