ಲಖನೌ: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ದೇವಾಲಯದ ಕುರುಹುಗಳು ಸಿಕ್ಕಿದ್ದು, ಅದರ ವಿಚಾರಣೆಯನ್ನು ವಾರಣಾಸಿ ಜಿಲ್ಲಾ ಸತ್ರ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ನಿಂದ ಪ್ರಕರಣ ವರ್ಗಾವಣೆಯಾದ ಬಳಿಕ ನಿನ್ನೆ ದೀರ್ಘವಾದ ವಿಚಾರಣೆ ನಡೆಸಿತ್ತು, ಇಂದು ಮೇ 26ರಿಂದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಇಂದು ಅರ್ಜಿ ವಿಚಾರಣೆಯಾಗುತ್ತಿದ್ದಂತೆ ಮುಸ್ಲಿಂ ಪರ ವಕೀಲರು ವಾದ ಮಂಡನೆ ಮಾಡಿದರು. ಆ ಬಳಿಕ ತೀರ್ಪು ನೀಡಿದ ಕೋರ್ಟ್ ಮೇ 26ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ಅಂದು ಮೊದಲು ಮಸೀದಿಯ ಅರ್ಜಿಯನ್ನೇ ವಿಚಾರಣೆ ಮಾಡುವುದಾಗಿ ತಿಳಿಸಿದೆ.
ಇದರಿಂದ 11 ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸಲಿದೆ. ಮಸೀದಿಯೊಳಗೆ ಶಿವಲಿಂಗ, ನಂದಿ ಸಿಕ್ಕಿದ್ದು, ಆ ಸಂಬಂಧ ವಿಡಿಯೋ ಸರ್ವೆಯನ್ನು ಮಾಡಿದ್ದಾರೆ. ಇದರ ವರದಿಯನ್ನು ಸೆಷನ್ ನ್ಯಾಯಾಲಯಕ್ಕೆ ನೀಡಿತ್ತು. ಈ ಮಧ್ಯೆ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ವರ್ಗಾವಣೆ ಮಾಡಿದೆ.