ಚಿತ್ರದುರ್ಗದಲ್ಲಿ ಸಡಗರ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ : ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ : ಫೋಟೋ ನೋಡಿ…!

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಆ. 25) : ಶ್ರಾವಣ ಮಾಸದ ಎರಡನೇ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಗಳು ಪ್ರಾರಂಭವಾಗಿದ್ದವು.

ಮಹಿಳೆಯರು ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ದೇವರನ್ನು ಆಭರಣಗಳಿಂದ ಸಿಂಗರಿಸಿ ಮಹಾಲಕ್ಷ್ಮಿಗೆ ಪ್ರಿಯವಾದ ಹಸಿರು ಬಳೆ, ಹೂವು, ಹಣ್ಣು ಅರ್ಪಿಸಿದರು. ದೀಪ ಧೂಪ ಹಚ್ಚಿ, ಭಕ್ಷ್ಯ ಭೋಜನ ತಯಾರಿಸಿ ನೈವೇದ್ಯೆ ಅರ್ಪಿಸಿ ದೇವಿಗೆ ಮಹಾಮಂಗಳಾರತಿ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

*ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ*

ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರದೇವತೆಗಳಾದ ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ, ಗೌರಸಂದ್ರ ಮಾರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ಅಂತರಘಟ್ಟಮ್ಮ, ಚೌಡೇಶ್ವರಿ, ಸಂತೆಹೊಂಡದ ಬಳಿಯ ಬನ್ನಿ ಮಹಾಕಾಳಿ, ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇವಿ, ಅಂಬಾ ಭವಾನಿ ಸೇರಿದಂತೆ ಬಹುತೇಕ ಎಲ್ಲ ಎಲ್ಲಾ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಪ್ರಾರಂಭವಾದವು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ವರ ಮಹಾಲಕ್ಷಿ ಹಬ್ಬದ ಅಂಗವಾಗಿ ನಗರದ ವಿವಿಧ ಭಕ್ತಾಧಿಗಳ ಮನೆಯಲ್ಲಿಯೂ ಸಹಾ ವರಮಹಾಲಕ್ಷೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು, ವಿವಿಧ ರೀತಿಯಲ್ಲಿ ಅಮ್ಮನವರನ್ನು ಆಲಂಕಾರ ಮಾಡಲಾಗಿತ್ತು, ನಗರದ ಜೆಸಿಆರ್ ಬಡಾವಣೆಯಲ್ಲಿನ ಶ್ರೀಮತಿ ರಾಜೇಶ್ವರಿ ಸಿದ್ದರಾಮರವರ ನಿವಾಸದಲ್ಲಿ ಅಮ್ಮನವರನ್ನು ಚಂದ್ರಯಾನ-3 ದೃಶ್ಯದಲ್ಲಿ ಸಿಂಗಾರ ಮಾಡಲಾಗಿತ್ತು. ಇದೇ ರೀತಿ ಜೆಸಿಆರ್ 1ನೇ ಕ್ರಾಸ್‍ನಲ್ಲಿನ ಶ್ರೀಹೇಮ ರಂಗನಾಥ್ ರವರ ನಿವಾಸದಲ್ಲಿ ಕಮಲದ ಹೂಗಳ ಮೇಲೆ ವರ ಮಹಾಲಕ್ಷೀಯನ್ನು ನಿರ್ಮಾಣ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *