ದೇಶಾದ್ಯಂತ ಕಾಂತಾರ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ 250 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ನಿನ್ನೆ ತನಕ ಹಿಂದಿಯಲ್ಲಿ 50 ಕೋಟಿ ಕಲೆಕ್ಷನ್ ಮಾಡಿದೆ. ಆದ್ರೆ ಈ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಬರುವ ವರಾಹ ರೂಪಂ ಹಾಡಿಗೆ ಕಾನೂನಿನ ಮೂಲಕ ತಡೆ ತರಲಾಗಿದೆ.
ಹೀಗೆ ಕೇರಳದ ತೈಕುಡಂ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದ ಮೇಲೆ ಹಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಚರ್ಚೆಯಾಗಿದ್ದವು. ಕೋರ್ಟ್ ಕೂಡ ತೈಕುಡಂ ಸಂಸ್ಥೆ ಪರವಾಗಿಯೇ ತೀರ್ಪು ನೀಡತ್ತು. ಈ ಹಾಡು ಬಳಸಿಕೊಳ್ಳುವುದಕ್ಕೆ ತೈಕುಡಂ ಸಂಸ್ಥೆಯ ಅನುಮತಿ ಪಡೆಯಬೇಕು ಎಂಬುದನ್ನು ಸೂಚನೆ ನೀಡಿತ್ತು. ಇದೀಗ ತೈಕುಡಂ ತನ್ನ ಡಿಮ್ಯಾಂಡ್ ತಿಳಿಸಿದೆ.
ತೈಕುಡಂ ಸಂಸ್ಥೆಯ ವಿಯಾನ್ ಮಾತನಾಡಿದ್ದು, ಕೋರ್ಟ್ ಪ್ರತಿ ಕೈಸೇರಿದ್ದು, ಈಗ ಹೊಂಬಾಳೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ತಮ್ಮಲ್ಲಿರುವ ಹಣ ಅಧಿಕಾರದಿಂದ ಪಾರಾಗಬಹುದು ಎಂದು ಭಾವಿಸಿರಬಹುದು. ಆದರೆ ಸಂಗೀತ ಲೋಕಕ್ಕೆ ಮಾದರಿಯಾಗಬೇಕೆಂಬುದು ನಮ್ಮ ಉದ್ದೇಶ. ಒಂದು ದೊಡ್ಡ ನಿರ್ಮಾಣ ಸಂಸ್ಥೆ ವಿರುದ್ಧ ಸ್ವತಂತ್ರ ಸಂಸ್ಥೆಯೊಂದು ಹೋರಾಟ ಮಾಡುತ್ತಿರುವುದು ಇದೆ ಮೊದಲು. ನಮ್ಮ ಸಂಸ್ಥೆಯ ಕ್ರೆಡಿಟ್ ಕೊಟ್ಟು ಬಳಕೆ ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.