ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಎಲ್ಲಾ ಭಾಷೆಯಲ್ಲೂ ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಚಿಂದಿ ಉಡಾಯಿಸಿದೆ. ಆದರೆ ಹಾಡುಗಳ ವಿಚಾರಕ್ಕೆ ಈಗ ಕಾನೂನು ಸಂಕಷ್ಟ ಎದುರಾಗಿದೆ.
ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವರಾಹಂ ರೂಪಂ ಹಾಡಿನ ಬಗ್ಗೆ ಚರ್ಚೆ ಹುಟ್ಟು ಹಾಕಿತ್ತು. ಇದು ಮಲಯಾಳಂ ಆಲ್ಬಂನ ಕದ್ದ ಸಾಂಗ್ ಎಂದು ಹೇಳಲಾಗಿತ್ತು. ಆದರೆ ಇದೀಗ ಇದೇ ಹಾಡಿನ ವಿಚಾರಕ್ಕೆ ಕೇರಳದ ತೈಕುಡಂ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ.
ಮಲಯಾಳಂನ ನವರಸಂ ಹಾಗೂ ವರಾಹಂ ಹಾಡಿಗೆ ಸಾಮ್ಯತೆ ಇದೆ ಎಂದು ತೈಕುಡಂ ಬ್ರಿಗೇಡ್ ಸಂಸ್ಥೆ ಆರೋಪಿಸಿದೆ. ನಮ್ಮ ಚಿತ್ರ ತಂಡದ ಹಾಡನ್ನು ಕಾಂತಾರ ಸಿನಿಮಾ ಕಾಪಿ ಮಾಡಿದೆ. ಇದು ಆಡಿಯೋ ರೈಟ್ಸ್ ಉಲ್ಲಂಘನೆಯಾಗಿದೆ. ನಾವೂ ಕಾಂತಾರ ಸಿನಿಮಾದ ವಿರುದ್ಧ ಕಾನೂನು ಸಮರ ಮಾಡುತ್ತೀವಿ ಎಂದಿದ್ದಾರೆ.
ಕಾಂತಾರ ಕನ್ನಡ ವರ್ಷನ್ ಸೆ.30 ರಂದು ರಿಲೀಸ್ ಆಗಿತ್ತು. ಆದರೆ ಕನ್ನಡ ವರ್ಷನ್ ನೋಡಿ, ಎಲ್ಲಾ ಭಾಷೆಗೂ ಡಿಮ್ಯಾಂಡ್ ಉಂಟಾಗಿತ್ತು. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗಿ ಚಿಂದಿ ಉಡಾಯಿಸುತ್ತಿದೆ.