ಗಾಂಧಿನಗರ: ಸೆಪ್ಟೆಂಬರ್ 30ರಂದು ಪ್ರಧಾನಿ ಮೋಡಿ ಅವರು ಗಾಂಧಿನಗರ ಟು ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ನಂತರ ಅದೇ ಟ್ರೈನಿನಲ್ಲಿ ಅಹಮದಾಬಾದ್ ವರೆಗೆ ಪ್ರಯಾಣ ಬೆಳೆಸಿದ್ದರು. ಈ ಟ್ರೈನ್ ಗೆ ಚಾಲನೆ ಸಿಕ್ಕ ಎಂಟನೇ ದಿನಕ್ಕೆ ಎಮ್ಮೆಗಳಿಗೆ ಗುದ್ದಿತ್ತು. ಅದರ ಪರಿಣಾಮ ಟ್ರೈನ್ ಮುಂಭಾಗದ ಇಂಜಿನ್ ಹಾಳಾಗಿತ್ತು. ಜೊತೆಗೆ ಅಪಘಾತದಿಂದಾಗಿ 4 ಎಮ್ಮೆಗಳು ಸಾವನ್ನಪ್ಪಿದ್ದವು. ಇದೀಗ ಹಸುಗಳ ಸರದಿ.
ನಿನ್ನೆ ಹಸುಗಳಿಗೆ ಡಿಕ್ಕಿಯಾದ ಪರಿಣಾಮ ಮತ್ತೆ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಗುಜರಾತ್ ನ ಆನಂದ್ ರೈಲ್ವೆ ನಿಲ್ದಾಣದ ಸಮೀಪ ಇದ್ದಕ್ಕಿದ್ದಂತೆ ಹಸುಗಳಿಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಜಾನುವಾರುಗಳೊಂದಿಗೆ ಇಂತಹ ಘರ್ಷಣೆಯನ್ನು ತಪ್ಪಿಸಲು ಕಷ್ಟ. ಹಾಗಾಗಿ ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ರೈಲಿನ ಮುಂಭಾಗವನ್ನು ಸಂಪೂರ್ಣವಾಗಿ ಬದಲಾಯಿಸಬಹುದಾಗಿದೆ ಎಂದಿದ್ದಾರೆ.