ಬೆಂಗಳೂರು: ವಸತಿ ಶಾಲೆಗಳ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಎಲ್ಲಾ ST ವಸತಿ ಶಾಲೆಗಳಿಗೆ ಹಾಗೂ ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರನ್ನು ಇಡಲು ಘೋಷಣೆ ಮಾಡಲಾಗಿದೆ. ಪರಿಶೊಷ್ಟ ಪಂಗಡಗಳ ಕಲ್ಯಾಣ ಇಲಾಖೆ ಶ್ರೀ ವಾಲ್ಮೀಕಿ ಜಯಂತಿ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿದೆ. ಈ ವೇಳೆ ಐದು ಜನರಿಗೆ ವಾಲ್ಮೀಕಿ ಪ್ತಶಸ್ತಿ ವಿತರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಸಮುದಾಯದವರು. ದರೋಡೆ ಮಾಡಿಕೊಂಡು ಓಡಾಡುತ್ತಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಾ ಎಂದು ಎಂದು ಕಥೆ ಕಟ್ಟು ಬಿಟ್ಟರು. ತಳ ಸಮುದಾಯಗಳು, ಶೂದ್ರರು, ಶಿಕ್ಷಣ ಹಾಗೂ ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥಹ ಹೊತ್ತಲ್ಲಿ ಸಂಸ್ಕೃತ ಕಲಿತು, ಶ್ಲೋಕಗಳ ಮೂಲಕ ಜಗತ್ಪ್ರಸಿದ್ಧ ರಾಮಾಯಣ ಮಹಾಕಾವ್ತ ಬರೆದರಲ್ಲಾ ಇದು ಹೆಮ್ಮೆಯ ಹಾಗೂ ಮಾ್ರಿಯ ಸಂಗತಿ.
ಶಿಕ್ಷಣ ಕಲಿಯಲು ಅವಕಾಶ ಸಿಕ್ಕಾಗೆಲ್ಲಾ ಇವರು ಕಲಿತರು. ಜಗತ್ತಿಗೇನೆ ಪ್ರೇರಣೆಯಾದರು. ವಾಲ್ಮೀಕಿ ಅವರು ಸಮಪಾಲು, ಅಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದರು. ರಾಮಾಯಣದ ರಾಮರಾಜ್ಯ ಎಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದೇ ಅರ್ಥ. ರಾಮನ ಮಕ್ಕಳಾದ ಲವ ಕುಶರಿಗೆ ಆಶ್ರಯ ನೀಡಿ, ಶಿಕ್ಷಣ ಹೇಳಿ ಕೊಟ್ಟಿದ್ದು ವಾಲ್ಮೀಕಿ ಎಂದು ರಾಮಾಯಣದ ದಿನಗಳನ್ನು ಹೇಳಿದ್ದಾರೆ.