ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬೃಹತ್ ಅವ್ಯವಹಾರ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ. ಎಸ್ಐಟಿ ಅಧಿಕಾರಿಗಳಿಂದ ಬಚಾವ್ ಆಗಿದ್ದ ನಾಗೇಂದ್ರ ಅವರು, ಇಡಿ ಅಧಿಕಾರಿಗಳ ವಶಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಸೂಕ್ತ ಸಾಕ್ಷಿಗಳ ಸಮೇತ ನಾಗೇಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿರುವ ಆರೋಪ ಇದೆ. ಅದರಲ್ಲಿ 89 ಕೋಟಿ ಹಣ ನಾಗೇಂದ್ರ ಅಂಡ್ ಟೀಂಗೆ ಸೇರಿದೆ ಎಂಬ ಆರೋಪವಿದೆ. ಹೀಗಾಗಿ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣವಾಗಿದ್ದು ಬಹುದೊಡ್ಡ ಹಗರಣ. ಇಷ್ಟು ದೊಡ್ಡಮಟ್ಟದ ಹಣ ಬೇರೆಲ್ಲೋ ಟ್ರಾನ್ಸಕ್ಷನ್ ಆಗಿರುವುದು ಸಚಿವರ ಗಮನಕ್ಕೆ ಬಂದಿರಲಿಲ್ಲವಂತೆ. ನಿಗಮಕ್ಕೆ ಸಂಬಂಧಿಸಿದಂತೆ ಸಚುವ ಬಿ.ನಾಗೇಂದ್ರ ಅವರು, ಇಷ್ಟು ದೊಡ್ಡ ಮಟ್ಟದ ಹಣ ಎಲ್ಲಿ ಹೋಯ್ತು ಎಂಬುದು ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದರು. ಬಳಿಕ ವಿಪಕ್ಷ ನಾಯಕರ ವಾಗ್ದಾಳಿಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಾದ ಪರಿಸ್ಥಿತಿ ಬಂದಿತ್ತು. ಅದರಂತೆ ತಾವೇ ಮುಂದೆ ಬಂದು ರಾಜೀನಾಮೆ ಸಲ್ಲಿಸಿದ್ದರು. ಇದೀಗ ಇದೇ ಹಗರಣದಲ್ಲಿ ಇಡಿ ಅಧಿಕಾರಿಗಳ ವಶದಲ್ಲಿದ್ದಾರೆ.
ಆದರೆ ರಾಜ್ಯದಲ್ಲಿ ಒಂದು ಮೂಡಾ ಹಗರಣ ಮತ್ತೊಂದು ವಾಲ್ಮೀಕಿ ಹಗರಣ ಎರಡು ದೊಡ್ಡಮಟ್ಟದಲ್ಲಿಯೇ ನಡರದಿದ್ದು, ವಿಪಕ್ಷಗಳಿಗೆ ಇದು ಆಡಳಿತ ಪಕ್ಷವನ್ನು ಮಣಿಸಲು ಅಸ್ತ್ರವಾಗಿದೆ. ಎರಡು ವಿಚಾರಗಳನ್ನಿಟ್ಟುಕೊಂಡು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಸಂಬಂಧ ಪಟ್ಟ ಎಲ್ಲಾ ಕಡೆ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.